News Kannada
Friday, December 09 2022

ಕರ್ನಾಟಕ

ಮತ್ತೇ ಚುನಾವಣೆ ನಡೆದರೆ ಬಿಜೆಪಿನೇ ಗೆಲ್ಲೋದು: ಸಚಿವ ಈಶ್ವರಪ್ಪ

Photo Credit :

ಮತ್ತೇ ಚುನಾವಣೆ ನಡೆದರೆ ಬಿಜೆಪಿನೇ ಗೆಲ್ಲೋದು: ಸಚಿವ ಈಶ್ವರಪ್ಪ

ಶಿವಮೊಗ್ಗ: ರಾಜ್ಯದಲ್ಲಿ ಮತ್ತೆ ಚುನಾವಣೆ ನಡೆದರೆ ಬಿಜೆಪಿನೇ ಅಧಿಕಾರಕ್ಕೆ ಬರುವುದು ಎಂದು ಸಚಿವ ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಗರದ ಶುಭ ಮಂಗಳ ಕಲ್ಯಾಣ ಮಂದಿರದಲ್ಲಿ  ನಡೆದ ಬಿಜೆಪಿ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಹೇಗೆ ಗೆಲುವು ಪಡೆಯುತ್ತದೆ ಎಂಬುದರ ಬಗ್ಗೆಯೂ ತಿಳಿಸಿದರು.

ಬಿಜೆಪಿ ವ್ಯಕ್ತಿಗತ ಪಕ್ಷವಲ್ಲ, ಸಂಘಟನೆಯ ಪಕ್ಷ ಸಂಘಟನೆಯ ಮೂಲಕ ಎಂತಹ ಚುನಾವಣೆಯನ್ನ ಬಿಜೆಪಿ ಗೆಲ್ಲಲಿದೆ ಎಂದು ವಿವರಿಸಿದರು.

ಇದೇ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಟಾಂಗ್ ನೀಡಲು ಮರೆಯಲಿಲ್ಲ.  ಹಣಬಲ, ಜಾತಿ ಬಲದ‌ ಮೇಲೆ ಅಧಿಕಾರ ಹಿಡಿಯ ಬಲ್ಲೆ ಎಂದು ತಿಳಿದುಕೊಂಡಿದ್ದಾರೆ. ಆದರೆ ಅದು ಭ್ರಮೆ ಎಂದು ಹೇಳಿದ ಈಶ್ವರಪ್ಪ ಸಿದ್ದರಾಮಯ್ಯ ಐದು ವರ್ಷದಲ್ಲಿ ಯಾವುದೇ ಯೋಜನೆಯನ್ನ ನೀಡಲಿಲ್ಲ ಎಂದು ನೇರ ಆರೋಪ ಮಾಡಿದರು.

ಜನಮನ ಗೆದ್ದ ಯಡ್ಡಿಯೂರಪ್ಪ ತಂತಿಯ ಮೇಲೆ ನಡೆಯುತ್ತಿದ್ದೇನೆ ಎಂದರೆ ಬೇರೆ ಯಾವುದೋ ವಿಚಾರಕ್ಕೆ ಜೋಡಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸಿದ್ದರಾಮಯ್ಯ ಯತ್ನಿಸಿದ್ದಾರೆ. ಇಂತಹ ರಾಜಕಾರಣ ಸಲ್ಲವೆಂದು ಬುದ್ದಿವಾದ ಹೇಳಿದರು.

See also  ಮಡಿಕೇರಿ ದಸರಾ ಕಾರ್ಯಾಧ್ಯಕ್ಷರಾಗಿ ರಾಬಿನ್ ದೇವಯ್ಯ ಆಯ್ಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು