News Kannada
Tuesday, December 06 2022

ಕರ್ನಾಟಕ

ಎರಡು ವರ್ಷದಲ್ಲಿ ಶಿವಮೊಗ್ಗ ಜಿಲ್ಲೆಯ ಚಿತ್ರಣ ಬದಲಾವಣೆ: ಸಿಎಂ ಯಡಿಯೂರಪ್ಪ

Photo Credit :

ಎರಡು ವರ್ಷದಲ್ಲಿ ಶಿವಮೊಗ್ಗ ಜಿಲ್ಲೆಯ ಚಿತ್ರಣ ಬದಲಾವಣೆ: ಸಿಎಂ ಯಡಿಯೂರಪ್ಪ

ಶಿವಮೊಗ್ಗ: ಮುಂದಿನ ಎರಡು ವರ್ಷದಲ್ಲಿ ಶಿವಮೊಗ್ಗ ಜಿಲ್ಲೆಯ ಸಂಪೂರ್ಣ ಚಿತ್ರಣ ಬದಲಿಸಿ ರಾಜ್ಯದ ಜನತೆ ಬೆರಗಾಗುವಂತೆ ಅಭಿವೃದ್ಧಿಪಡಿಸಲಾಗುವುದು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.

ನಗರದ ಪೊಲೀಸ್ ಕವಾಯತು ಮೈದಾನದಲ್ಲಿ 293 ಕೋಟಿ ರೂ.ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಮುಂದಿನ ಎರಡು ವರ್ಷದೊಳಗೆ ಶಿವಮೊಗ್ಗ ನಗರ ಮತ್ತು ಜಿಲ್ಲೆಯಲ್ಲಿ ಆಗಬೇಕಾದ ಎಲ್ಲ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು. ಮುಂದಿನ ಸರಕಾರದ ಹೊತ್ತಿಗೆ ಶಿವಮೊಗ್ಗದಲ್ಲಿ ಕೈಗೊಳ್ಳಲು ಯಾವುದೇ ಕೆಲಸ ಬಾಕಿ ಇರದಂತೆ ಮಾಡಲಾಗುವುದು.ಇನ್ನೊಂದು ವರ್ಷದೊಳಗೆ ಅದರ ಬಗ್ಗೆ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ ಎಂದರು.

ನನೆಗುದಿಗೆ ಬಿದ್ದ ವಿಮಾನ ನಿಲ್ದಾಣ ಕಾಮಗಾರಿ ಪುನಾರಂಭಕ್ಕೆ 45 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಇನ್ನೊಂದು ವಾರದಲ್ಲಿ ಕೆಲಸ ಆರಂಭವಾಗಲಿದೆ. ಕಾಮಗಾರಿ ಕೈಗೆತ್ತಿಕೊಳ್ಳುವ ಕಂಪನಿಗೆ ವಿಮಾನ ಹಾರಾಟ ದವರೆಗಿನ ಸಂಪೂರ್ಣ ಕೆಲಸದ ಜವಾಬ್ದಾರಿ ವಹಿಸಲಾಗುವುದು. 9 ತಿಂಗಳಲ್ಲಿ ಕಾಮಗಾರಿ ಮುಗಿಸಿ ವಿಮಾನ ಹಾರಾಟಕ್ಕೆ ಮುಕ್ತಗೊಳಿಸುವಂತೆ ಮಾಡಲಾಗುತ್ತದೆ ಎಂದರು.

ಶಿವಮೊಗ್ಗವನ್ನು ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಡಾ.ಸುಧಾಮೂರ್ತಿ ಅವರ ನೇತೃತ್ವದಲ್ಲಿ ಯೋಜನೆ ರೂಪಿಸಲಾಗುತ್ತಿದೆ. 420ಕೋಟಿ ರೂ. ವೆಚ್ಚದ ಸಿಗಂದೂರು ಸೇತುವೆ ಕಾಮಗಾರಿ ಶೀಘ್ರವೇ ಆರಂಭವಾಗಲಿದೆ. ಜೋಗದ ಅಭಿವೃದ್ಧಿಗೆ 10ಕೋಟಿ ರೂ., ಶಿವಪ್ಪ ನಾಯ ಕಅರಮನೆಯಲ್ಲಿ2 ಕೋಟಿ ರೂ.ವೆಚ್ಚದಲ್ಲಿ ದೃಶ್ಯ ಮತ್ತು ಶ್ರಾವ್ಯ ವ್ಯವಸ್ಥೆ ಅಭಿವೃದ್ಧಿಪಡಿಸಲಾಗುವುದು ಎಂದರು.

ಬಜೆಟ್‍ನಲ್ಲಿ ಹೊಸ ಘೋಷಣೆ: ನೆರೆಕಾರಣದಿಂದಾಗಿ ಅಭಿವೃದ್ಧಿ ಯೋಜನೆಗಳಿಗೆ ಸ್ವಲ್ಪ ಹಣದ ಕೊರತೆ ಬರಬಹುದು. ಆದರೆ, ಬಜೆಟ್‍ನಲ್ಲಿ ರಾಜ್ಯದ ಎಲ್ಲ ವರ್ಗದ ಜನರ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಘೋಷಿಸಲಾಗುವುದು. ಪ್ರವಾಹ ಪೀಡಿತರಿಗಾಗಿ ರಾಜ್ಯದ ಜನತೆ ಸ್ಪಂದಿಸಿದ್ದು ಇದುವರೆಗೆ 400 ಕೋಟಿ ರೂ. ನೆರವು ಒದಗಿಸಿದ್ದಾರೆ. ಉದ್ಯಮಿಗಳು ಈ ಸಂದರ್ಭದಲ್ಲಿ ಹೆಚ್ಚಿನ ನೆರವು ಒದಗಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಆರಗ ಜ್ಞಾನೇಂದ್ರ, ಕೆ.ಬಿ.ಅಶೋಕ್ ನಾಯ್ಕ್, ಆಯನೂರು ಮಂಜುನಾಥ್, ಎಸ್.ರುದ್ರೇಗೌಡ, ಜಿ.ಪಂ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯ್‍ಕುಮಾರ್,ತಾಪಂ ಅಧ್ಯಕ್ಷೆ ಗೀತಾ ಜಯಶೇಖರ್,ಮೇಯರ್ ಲತಾ ಗಣೇಶ್, ಉಪಮೇಯರ್ ಚನ್ನಬಸಪ್ಪ, ಪೆÇಲೀಸ್ ವಸತಿನಿಲಯ ಮತ್ತು ಅಭಿವೃದ್ಧಿ ಮಂಡಳಿಯರಾಘವೇಂದ್ರ ಔರಾದ್ಕಾರ್, ಡಿಸಿಕೆ.ಬಿ.ಶಿವಕುಮಾರ್, ಎಸ್‍ಪಿಕೆ.ಎನ್.ಶಾಂತರಾಜು, ಜಿಪಂ ಸಿಇಒಎಂ.ಎಲ್.ವೈಶಾಲಿ ಹಾಜರಿದ್ದರು.

See also  ಗರ್ಭದಲ್ಲಿ ಶಿಶುವಿನ ಮರಣ: ಜಿಲ್ಲಾಸ್ಪತ್ರೆ ವಿರುದ್ಧ ಅಸಮಾಧಾನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು