News Kannada
Friday, December 02 2022

ಕರ್ನಾಟಕ

ಅ.3ರಿಂದ ಶ್ರೀರಂಗಪಟ್ಟಣದಲ್ಲಿ ಸಡಗರ ಸಂಭ್ರಮದ ದಸರಾ ಆಚರಣೆ

Photo Credit :

ಅ.3ರಿಂದ ಶ್ರೀರಂಗಪಟ್ಟಣದಲ್ಲಿ ಸಡಗರ ಸಂಭ್ರಮದ ದಸರಾ ಆಚರಣೆ

ಮಂಡ್ಯ: ಶ್ರೀರಂಗಪಟ್ಟಣ ದಸರಾ ನಾಡಹಬ್ಬವನ್ನು ಅತ್ಯಂತ ಸಂಭ್ರಮ, ಸಡಗರದಿಂದ ಆಚರಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದ್ದು, ಈ ಬಾರಿ ಗ್ರಾಮೀಣ, ರೈತ ಪರಂಪರೆಯನ್ನು ಪ್ರವಾಸಿತಾಣಗಳ ಬಿಂಬಿಸುವ ಪ್ರಯತ್ನ ಮಾಡಲಾಗುತ್ತಿದೆ.

ಅ. 3ರಿಂದ 5ರವರೆಗೆ ನಡೆಯುವ ದಸರೆಯಲ್ಲಿ ಜಂಬೂ ಸವಾರಿಯ ಮೆರವಣಿಗೆಗೆ ಶ್ರೀರಂಗಪಟ್ಟಣ ತಾಲೂಕಿನ ಕಿರಂಗೂರು ಬನ್ನಿಮಂಟಪದ ಬಳಿಯಿಂದ ನಡೆಯಲಿದೆ. ಈ ಬಾರಿಯ ದಸರೆಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ನಡೆಸಲು ಯೋಜನೆ ರೂಪಿಸಿದ್ದು, ಪರಂಪರಾ ದರ್ಶನ ದಸರಾ, ಯುವ ದಸರಾ, ಗಾಳಿಪಟ ಉತ್ಸವ, ಕ್ರೀಡಾ ದಸರಾ (ಗ್ರಾಮೀಣ ಕ್ರೀಡೆಗಳು), ಫಲಪುಷ್ಪ ಪ್ರದರ್ಶನ, ಆಹಾರ ಮೇಳ, ಯೋಗ ದಸರಾ, ಮಹಿಳಾ ಮತ್ತು ಮಕ್ಕಳ ದಸರಾ, ಹೆಲಿಕ್ಯಾಪ್ಟರ್ ಜಾಯ್ ರೇಡ್, ವಾಟರ್ ಸ್ಪೋರ್ಟ್ಸ್, ರಿವರ್ ರ್ಯಾಫ್ಟಿಂಗ್, ರಾಕ್ ಕ್ಲೈಬಿಂಗ್ ಮತ್ತು ರ‍್ಯಾಪ್ಲಿನ್ ಹಾಗೂ ಶ್ರೀರಂಗ ವೇದಿಕೆಯಲ್ಲಿ ಸಾಂಸ್ಕೃತಿಕ ಸಿರಿ-ಖ್ಯಾತ ಕಲಾವಿದರಾದ ವಿಜಯಪ್ರಕಾಶ್, ಎಂ.ಡಿ. ಪಲ್ಲವಿ, ನವೀನ್ ಸಜ್ಜು ಹಾಗೂ ಚಂದನವನದ ತಾರೆಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಅಂದು ಮಧ್ಯಾಹ್ನ ತಾಲೂಕಿನ ಪರಿವರ್ತನ ಶಾಲೆ ಮತ್ತು ಕಾಲೇಜು ಆವರಣ, ತಾಲೂಕು ವ್ಯಾಪ್ತಿಯ ಎಲ್ಲಾ ಸರ್ಕಾರಿ, ಖಾಸಗಿ ಅನುದಾನಿತ ಕಾಲೇಜುಗಳ ವಿದ್ಯಾರ್ಥಿಗಳ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ, ಯುವ ದಸರಾ ಬಹುಮಾನ ವಿಜೇತ ವಿದ್ಯಾರ್ಥಿಗಳಿಗೆ ಶ್ರೀರಂಗ ವೇದಿಕೆಯಲ್ಲಿ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ.

ಜಿಲ್ಲೆಯ ದೇಸೀ ಗ್ರಾಮೀಣ ರೈತ ಸಂಸ್ಕೃತಿಯನ್ನು ಬಿಂಬಿಸಲು ಹಾಗೂ ಪ್ರವಾಸಿಗರಿಗೆ ಜಿಲ್ಲೆಯ ವೈವಿಧ್ಯ ಸಾಂಸ್ಕೃತಿಕ ಪರಿಚಯಕ್ಕಾಗಿ ಶ್ರೀರಂಗಪಟ್ಟಣ ತಾಲೂಕಿನ ಶ್ರೀನಿವಾಸ ಅಗ್ರಹಾರದಲ್ಲಿ ಪರಂಪರಾ ದರ್ಶನ ಕಾರ್ಯಕ್ರಮ ಅ. 3ರಂದು ತಾಲೂಕಿನ ಬಾಬುರಾಯನಕೊಪ್ಪಲು ಗ್ರಾಮದ ಅಶೋಕ್‍ಕುಮಾರ್ ಅವರ ಮನೆಯಲ್ಲಿ ಬ್ಯಾಗ್‍ನಿಟ್ಟಿಂಗ್ ತಯಾರಿಕಾ ಸ್ಥಳದಲ್ಲಿ ಪ್ರಾತ್ಯಕ್ಷಿತೆ ಮತ್ತು ನಿಂಗಪ್ಪಾಜಿ, ಸಿದ್ದಪ್ಪಾಜಿ ಅಗರಬತ್ತಿ ವರ್ಕ್ಸ್, ಬಿದರಹಳ್ಳಿ ಗ್ರಾಮದಲ್ಲಿ ಅಗರಬತ್ತಿ ತಯಾರಿಕೆ ಹಾಗೂ ಕೊಡಿಯಾಲ ಗ್ರಾಮದಲ್ಲಿ ರೇಷ್ಮೆ ಕೈಮಗ್ಗ ಸಹಕಾರ ಸಂಘದ ವತಿಯಿಂದ ಕೈಮಗ್ಗ ನೇಯ್ಗೆ ಪ್ರಾತ್ಯಕ್ಷಿತೆ, ಬಾಬುರವರ ಮನೆಯಲ್ಲಿ ನಡೆಸಲು ನಿರ್ಧರಿಸಲಾಗಿದೆ.

ಅ. 4ರಂದು ಶ್ರೀರಂಗಪಟ್ಟಣದ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 2ರವರೆಗೆ ಪುರುಷ ರೈತರಿಗೆ ಮೂಟೆ ಹೊರುವ ಸ್ಪರ್ಧೆ, ಮೂರು ಕಾಲಿನ ಓಟ, ಹಗ್ಗ ಜಗ್ಗಾಟ, ರೈತ ಮಹಿಳೆಯರಿಗೆ ಲೆಮನ್ ಅಂಡ್ ಸ್ಪೂನ್, ಹಗ್ಗ ಜಗ್ಗಾಟ, ತುಂಬಿದ ಕೊಡ ಹೊತ್ತು ನಡೆಯುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.

ಜತೆಗೆ ಮಹಿಳೆಯರಿಗಾಗಿ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಮಹಿಳೆಯರಿಗಾಗಿ ಹಗ್ಗ ಜಗ್ಗಾಟ, ಬಿಂದಿಗೆ ಓಟದ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಮಡಿಕೆ ಒಡೆಯುವ ಸ್ಪರ್ಧೆ, ಗೋಣಿಚೀಲ ಓಟದ ಸ್ಪರ್ಧೆ, ಫ್ಯಾಷನ್ ಷೋ ಸ್ಪರ್ಧೆಗಳು ನಡೆಯಲಿವೆ.

ಗಾಳಿಪಟ ಸ್ಪರ್ಧೆಯು ಅ. 2ರಂದು ಶ್ರೀರಂಗನಾಥಸ್ವಾಮಿ ದೇವಾಲಯದ ಮುಂಭಾಗದಲ್ಲಿರುವ ಮೈದಾನದಲ್ಲಿ ಗಾಳಿಪಟ ಸ್ಪರ್ಧೆ ನಡೆಯಲಿದ್ದು, ರಾಷ್ಟ್ರೀಯ, ಅಂತರಾಷ್ಟ್ರೀಯ ಗಾಳಿಪಟ ವಿಜೇತ ವಿ.ಕೆ. ರಾವ್ ವಿನ್ಯಾಸಗೊಳಿಸಿರುವ ಸುಮಾರು 30ಕ್ಕೂ ಹೆಚ್ಚು ಗಾಳಿಪಟಗಳನ್ನು ಹಾರಾಟ ನಡೆಸಲಾಗುತ್ತಿದೆ. ಅಂದು ಇದರ ಜೊತೆಗೆ ಕೃಷ್ಣರಾಜಸಾಗರ ಬೃಂದಾವನದಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ಕೆ.ಆರ್.ಎಸ್, ಒಡೆಯರ್ ಬಿಂಬಿಸುವ ಕಲಾಕೃತಿಗಳನ್ನು ಪ್ರದರ್ಶನ ಮಾಡಲಾಗುವುದು. 10 ದಿನಗಳ ಕಾಲ ನಡೆಯುವ ಪ್ರದರ್ಶನದಲ್ಲಿ ಎರಡು ಬಾರಿ ಹೂಗಳನ್ನು ಬದಲಾವಣೆ ಮಾಡಿ ಪ್ರವಾಸಿಗರನ್ನು ಆಕರ್ಷಿಸಲು ಸಿದ್ಧತೆ ನಡೆಸಲಾಗಿದೆ ಎಂದು ತಿಳಿಸಿದರು.

See also  ಅನುರಾಗ್ ತಿವಾರಿ ನಿಗೂಢ ಸಾವಿನ ಪ್ರಕರಣ : ಮಡಿಕೇರಿಯಲ್ಲಿ ಸಿಬಿಐ ಅಧಿಕಾರಿಗಳಿಂದ ಮಾಹಿತಿ ಸಂಗ್ರಹ

ಅ. 4ರಂದು ಪಟ್ಟಣದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ ನಾರಾಯಣಗುರು ಬೋಗಾದಿ ಅವರಿಂದ ಯೋಗ ದಸರಾ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಯೋಗ ದಸರೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು. ಅ. 5ರಂದು ಮಧ್ಯಾಹ್ನ 12 ರಿಂದ 2ರವರೆಗೆ ಶ್ರೀರಂಗ ವೇದಿಕೆಯಲ್ಲಿ ಸಾಹಿತಿ ಡಾ. ಜಯಪ್ಪ ಹೊನ್ನಾಳಿ ಅಧ್ಯಕ್ಷತೆಯಲ್ಲಿ ಗೋಷ್ಠಿ ನಡೆಯಲಿದೆ. 30ಕ್ಕೂ ಹೆಚ್ಚು ಕವಿಗಳು ಭಾಗವಹಿಸಲಿದ್ದಾರೆ ಎಂದರು.

ಅ. 4ರಂದು ಶ್ರೀರಂಗನಾಥ ಕಲ್ಯಾಣ ಮಂಟಪದಲ್ಲಿ ಬುಗುರಿ, ಹುಲಿಕುರಿ, ಲಗೋರಿ, ಗೋಲಿ, ಕುಂಟಾಬಿಲ್ಲೆ, ಹಾವು ಏಣಿ, ಅಳುಗುಳಿಮನೆ, ಚೌಕಾಬಾರ, ಕೆರೆದಡ ಮತ್ತು ಅಣಿಕಲ್ಲು ಆಟದ ಸ್ಪರ್ಧೆ ನಡೆಯಲಿದೆ.ಶ್ರೀರಂಗನಾಥ ಕಲ್ಯಾಣ ಮಂಟಪದಲ್ಲಿ ಅಂಧ ಮಕ್ಕಳಿಗೆ ಬೆಳಗ್ಗೆ 10 ಗಂಟೆಗೆ ಚೆಸ್ ಪಂದ್ಯಾವಳಿ ನಡೆಯಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು