News Kannada
Friday, December 02 2022

ಕರ್ನಾಟಕ

ಮಂಜೇಶ್ವರ ವಿಧಾನಸಭೆ ಉಪಚುನಾವಣೆ: ಮೂರು ಪಕ್ಷಗಳ ಅಭ್ಯರ್ಥಿಗಳ ಮುಖಾಮುಖಿ

Photo Credit :

ಮಂಜೇಶ್ವರ ವಿಧಾನಸಭೆ ಉಪಚುನಾವಣೆ: ಮೂರು ಪಕ್ಷಗಳ ಅಭ್ಯರ್ಥಿಗಳ ಮುಖಾಮುಖಿ

ಕಾಸರಗೋಡು: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ರಂಗೇರುತ್ತಿದೆ. ಅಭ್ಯರ್ಥಿಗಳು ಜನತೆಯ ಮುಂದಿಡುವ ಭರವಸೆ, ಕೊಡುಗೆಗಳ ಬಗ್ಗೆ ಕಾಸರಗೋಡು ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ಯು ಡಿ ಎಫ್ , ಎಲ್ ಡಿ ಎಫ್ ಮತ್ತು ಬಿಜೆಪಿ ಅಭ್ಯರ್ಥಿಗಳ ಜೊತೆ ನಡೆದ ಮುಖಾಮುಖಿ ಕಾರ್ಯಕ್ರಮದಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪ ನಡುವೆ ಭಾಷಾ ಅಲ್ಪಾಸಂಖ್ಯಾತರ ಕಾಳಜಿ ಎಲ್ಲಾ ಅಭ್ಯರ್ಥಿಗಳ ಭರವಸೆಯಾಗಿತ್ತು.

ಯುಡಿ ಎಫ್ ಶಾಸಕರ ಅವಧಿಯಲ್ಲಿ ಮಂಜೇಶ್ವರ ಸಾಕಷ್ಟು ಅಭಿವೃದ್ಧಿ ಕಂಡಿದೆ. ಚೆರ್ಕಳಂ ಅಬ್ದುಲ್ಲಾ ಬಳಿಕ ಪಿ. ಬಿ. ಅಬ್ದುಲ್ ರಜಾಕ್ ಶಾಸಕರ ಅವಧಿಯಲ್ಲಿ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ದಾಖಲೆ ಅಭಿವೃದ್ಧಿ ತರಲಾಗಿದೆ. ಜಿಲ್ಲೆಯ ಎಲ್ಲಾ ರಸ್ತೆಗಳು ಈಗ ಅತ್ಯುತ್ತಮ ರಸ್ತೆಗಳಾಗಿ ಪರಿವರ್ತನೆಗೊಂಡಿದೆ. ಆದರೆ ರಾಷ್ಟ್ರೀಯ ಹೆದ್ದಾರಿಯ ಬಗ್ಗೆ ಕೇಂದ್ರ ಹಾಗೂ ಈಗಿನ ಎಲ್ ಡಿ ಎಫ್ ಸರಕಾರದ ನಿರ್ಲಕ್ಷ್ಯದಿಂದ ಹದೆಗೆಟ್ಟಿದೆ. ರಾಷ್ಟ್ರೀಯ ಹೆದ್ದಾರಿ ದುರಸ್ತಿಗೆ ಸಂಸದರು ಉಪವಾಸ ಸತ್ಯಾಗ್ರಹ ನಡೆಸಬೇಕಾಗಿ ಬಂದಿತ್ತು.

ಹಿಂಸಾತ್ಮಕ ರಾಜಕೀಯಕ್ಕೆ ಕೊನೆ ಹಾಡಬೇಕು, ಶಾಂತಿ-ನೆಮ್ಮದಿ ಕಾಪಾಡಬೇಕು, ಬಿಜೆಪಿ-ಸಿಪಿಎಂ ಹಿಂಸಾತ್ಮಕ ರಾಜಕೀಯ ಮೂಲಕ ಕಳೆಯುತ್ತಿದೆ. ಅಭಿವೃದ್ದಿ ಬಗ್ಗೆ ಕಾಳಜಿ ಇಲ್ಲ. ಕೇಂದ್ರದ ಬಿಜೆಪಿ ಸರಕಾರ ನಿರುದ್ಯೋಗ ಸೃಷ್ಟಿಸುತ್ತಿದ್ದು, ಜನತೆ ಬೀದಿಗೆ ಬೀಳುವಂತಾಗಿದೆ. ಕಳೆದ ಬಾರೀ ಬಿಜೆಪಿಗೆ ಮತ ನೀಡಿದವರು ಹೋಗಿದ್ದಾರೆ. ಭಾಷಾ ಅಲ್ಪಸಂಖ್ಯಾತರ ಬಗ್ಗೆ ಧ್ವನಿ ಎತ್ತುವೆ. ಭಾಷಾ ಅಲ್ಪಸಂಖ್ಯಾತರಿಗಾಗಿ ನಿರಂತರ ಹೋರಾಟ ನಡೆಸುವೆ.
ಎಂ .ಸಿ ಖಮರುದ್ದೀನ್ – ಯು ಡಿ ಎಫ್ ಅಭ್ಯರ್ಥಿ

ಈ ಎರಡು ಅಭ್ಯರ್ಥಿಗಳಲ್ಲಿ ಜನತೆ ಮತ ನೀಡಬೇಕಾದುದು ನನಗೆ, ನಾನು ಈ ಊರಿನವ. ಜನರ ನಾಡಿ ಮಿಡಿತ ಗೊತ್ತಿದೆ. ತುಳು, ಕನ್ನಡ ಮಾತ್ರವಲ್ಲ ಮಲಯಾಳ ಸೇರಿದಂತೆ ಬಹುತೇಕ ಭಾಷೆ ನನಗೆ ಸಮಸ್ಯೆ ಇಲ್ಲ. ಶಾಸಕನಾಗಿ ಆಯ್ಕೆಯಾದರೆ ವಿಧಾನಸಭೆಯಲ್ಲಿ ತುಳು , ಕನ್ನಡದಲ್ಲಿ ಸರಕಾರದ ಗಮನ ಸೆಳೆಯುವೆ. ತುಳು, ಕನ್ನಡದಲ್ಲಿ ಮಾತನಾಡಿ ಮುಖ್ಯಮಂತ್ರಿಯವರ ಗಮನಕ್ಕೆ ತರುವೆ. ಯು ಡಿ ಎಫ್-ಬಿಜೆಪಿಗೆ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲ. 2006ರಲ್ಲಿ ಎಲ್ ಡಿ ಎಫ್ ನ ಶಾಸಕರಾಗಿದ್ದ ಸಿ. ಎಚ್. ಕುಞ0ಬು, ಮಂಜೇಶ್ವರಕ್ಕೆ ಈ ಹಿಂದೆ ಯಾರೂ ಜಾರಿಗೆ ತರದ ಅಭಿವೃದ್ಧಿಗಳನ್ನು ತಂದಿದ್ದರು. ಮಂಜೇಶ್ವರ ಬಂದರು, ಕುಂಬಳೆ ಐ ಎಚ್ ಆರ್ ಡಿ , ತುಳುಭವನ, ಬಾಡೂರು ಐ ಟಿ ಐ ಕಟ್ಟಡ ಹಾಗೂ ಇನ್ನಿತರ ಯೋಜನೆ ತರಲಾಗಿದೆ. ಮೀ0ಜದಲ್ಲಿ ಒದಗಿಸಿದ ಮರಿಟೈಮ್ ಯೋಜನೆ ಸೇರಿದಂತೆ ಹಲವು ಯೋಜನೆ ಬಳಿಕ ಬಂದ ಯು ಡಿ ಎಫ್ ನಿರ್ಲಕ್ಷಿಸಿದೆ.
ಶಂಕರ ರೈ, ಎಲ್ ಡಿ ಎಫ್ ಅಭ್ಯರ್ಥಿ.

ಎರಡೂ ಪಕ್ಷಗಳು ಮಂಜೇಶ್ವರಕ್ಕೆ ಏನೂ ಕೊಡುಗೆ ನೀಡಿಲ್ಲ. ರಸ್ತೆಗಳು ಸಂಪೂರ್ಣ ಹದೆಗೆಟ್ಟಿದೆ. ಯುಡಿ ಎಫ್-ಎಲ್ ಡಿ ಫ್ ಗೆ ಅಭಿವೃದ್ಧಿ ಬೇಕಿಲ್ಲ. ಈ ಬಾರಿ ಬಿಜೆಪಿಯನ್ನು ಜನತೆ ಗೆಲ್ಲಿಸುತ್ತಾರೆ. ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡಲಾಗಿದೆ. ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ಭಾಷಾ ಅಲ್ಪಸಂಖ್ಯಾತರಿಗಾಗಿ ಹೋರಾಡುವ ಪಕ್ಷ ಬಿಜೆಪಿ ಮಾತ್ರ. ಈ ಅವಧಿ ಉಳಿದಿರುವ ಒಂದೂವರೆ ವರ್ಷದ ಅವಧಿ ನನಗೆ ನೀಡಿ. ಅಭಿವೃದ್ಧಿ ಏನೆಂದು ತೋರಿಸುವೆ.
ಕುಂಟಾರು ರವೀಶ ತಂತ್ರಿ , ಬಿಜೆಪಿ ಅಭ್ಯರ್ಥಿ

See also  ಸೇವಿಸಲು ಯೋಗ್ಯವಲ್ಲದ ಮಾಂಸ ಮಾರಾಟ: ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು