News Kannada
Tuesday, November 29 2022

ಕರ್ನಾಟಕ

ಮಡಿಕೇರಿ ದಸರಾ ಜನೋತ್ಸವ: ಅ.7ರಂದು ವಾಹನ ಅಲಂಕಾರ ಸ್ಪರ್ಧೆ - 1 min read

Photo Credit :

ಮಡಿಕೇರಿ ದಸರಾ ಜನೋತ್ಸವ: ಅ.7ರಂದು ವಾಹನ ಅಲಂಕಾರ ಸ್ಪರ್ಧೆ

ಮಡಿಕೇರಿ: ನಗರ ದಸರಾ ಅಲಂಕಾರ ಸಮಿತಿ ವತಿಯಿಂದ ದಸರಾ ಜನೋತ್ಸವದ ಅಂಗವಾಗಿ ವಿವಿಧ ಅಲಂಕಾರ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಸಿ.ಕೆ.ನಂದೀಶ್‍ ಕುಮಾರ್ ತಿಳಿಸಿದ್ದಾರೆ.

ಅ.7 ರಂದು ಆಯುಧಪೂಜೆ ಅಂಗವಾಗಿ ಗಾಂಧಿ ಮೈದಾನದಲ್ಲಿ ವಾಹನ ಅಲಂಕಾರ ಸ್ಪರ್ಧೆ ನಡೆಯಲಿದೆ. ದೊಡ್ಡ ಲಾರಿ, ಸಣ್ಣ ಲಾರಿ,  ಬಸ್, ಮಿನಿ ಬಸ್,  ಕಾರ್, ಸೈಕಲ್, ಬೈಕ್, ಬಸ್, ಆಟೋ, ಟಾಟಾ ಏಸ್, ಜೀಪ್, ಪಿಕ್ ಅಪ್, ಜೆಸಿಬಿ ಗಳಿಗೆ ಅಲಂಕಾರ ಸ್ಪರ್ಧೆ ಜರುಗಲಿದೆ. ಈ ಎಲ್ಲಾ ಸ್ಪರ್ಧೆಗಳನ್ನು ಅಂದು ಸಂಜೆ 7 ಗಂಟೆಯಿಂದ ರಾತ್ರಿ 8.30 ರವರೆಗೆ ಆಯೋಜಿಸಲಾಗಿದೆ.

ಕಟ್ಟಡ ಅಲಂಕಾರ :::

 ಅ.8 ರಂದು ವಿಜಯ ದಶಮಿ ಪ್ರಯುಕ್ತ ಮಡಿಕೇರಿ ನಗರಾಲಂಕಾರ ಸ್ಪರ್ಧೆಯಡಿ ವಿವಿಧ ಕಟ್ಟಡಗಳ ಅಲಂಕಾರ ಸ್ಪರ್ಧೆ ನಡೆಯಲಿದೆ.

ರಾತ್ರಿ 7 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಸ್ಪರ್ಧೆಗಳು ಆಯೋಜಿತವಾಗಿದೆ. ದಸರಾದ ದಶದೇವಾಲಯಗಳು, ಸರ್ಕಾರಿ, ಅರೆಸರ್ಕಾರಿ ಕಛೇರಿಗಳು, ವಿವಿಧ ಕಟ್ಟಡಗಳು, ಚಿನ್ನದಂಗಡಿ, ಬಟ್ಟೆಯಂಗಡಿ, ಬೇಕರಿ, ಹೊಟೇಲ್, ಬ್ಯಾಂಕ್, ಅಲಂಕಾರ ಮಳಿಗೆಗಳು, ಎಲೆಕ್ಟ್ರಾನಿಕ್ಸ್ ಮಳಿಗೆಗಳು, ಔಷಧಿ ಅಂಗಡಿಗಳು, ಚಿತ್ರಮಂದಿರ, ಟೈಲರ್ ಶಾಪ್, ಪಾನಿಪೂರಿ ಅಂಗಡಿಗಳು, ಡ್ಯಾನ್ಸ್ ಕ್ಲಾಸ್  ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕಟ್ಟಡ ಅಲಂಕಾರ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

 ಅಂಗಡಿ ಮಾಲೀಕರು, ಸಣ್ಣ ಮತ್ತು ದೊಡ್ಡ ಕಟ್ಟಡಗಳ ಮಾಲೀಕರು, ಸರಕಾರಿ ಅಧಿಕಾರಿಗಳು ತಮ್ಮ ತಮ್ಮ ಕಚೇರಿ, ಅಂಗಡಿ ಮಳಿಗೆ ಹಾಗೂ ಕಟ್ಟಡಗಳನ್ನು ಅಲಂಕರಿಸುವ ಮೂಲಕ ಜನೋತ್ಸವವನ್ನು ಮತ್ತಷ್ಟು ಆಕರ್ಷಕಗೊಳಿಸುವಂತೆ ನಂದೀಶ್ ಕುಮಾರ್ ಮನವಿ ಮಾಡಿದ್ದಾರೆ. ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ : 9449140988, 9480325167, 9448585470 ಯನ್ನು ಸಂಪರ್ಕಿಸಬಹುದಾಗಿದೆ.

See also  ಸಭೆಯಲ್ಲೇ ಕುಸಿದು ಬಿದ್ದ ಕಾಗೋಡು ತಿಮ್ಮಪ್ಪ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು