News Kannada
Wednesday, November 30 2022

ಕರ್ನಾಟಕ

ಜೊಯಿಡಾದಲ್ಲಿ ಉತ್ತರ ಕರ್ನಾಟಕದ ಮೊದಲ ಚಿಟ್ಟೆ ಪಾರ್ಕ್ - 1 min read

Photo Credit :

ಜೊಯಿಡಾದಲ್ಲಿ ಉತ್ತರ ಕರ್ನಾಟಕದ ಮೊದಲ ಚಿಟ್ಟೆ ಪಾರ್ಕ್

ಕಾರವಾರ: ಉತ್ತರ ಕರ್ನಾಟಕದ ಮೊದಲ ಚಿಟ್ಟೆ ಪಾರ್ಕ್ ಉತ್ತರ ಕನ್ನಡ ಜಿಲ್ಲೆಯ ಜೊಯಿಡಾದಲ್ಲಿ ಪ್ರಾರಂಭಗೊಳ್ಳಲಿದ್ದು ರಾಜ್ಯದ ಅತ್ಯಂತ ಹೆಚ್ಚು ಜಾತಿಗಳ ಚಿಟ್ಟೆಗಳುಳ್ಳ ಎಂಬ ಕೀರ್ತಿಗೆ ಜೊಯಿಡಾದ ಸೇರಲಿದೆ. ಚಿಟ್ಟೆಗಳನ್ನು ಪರಿಸರ ಸ್ನೇಹಿಯಾಗಿ ರಕ್ಷಿಸುವ ನಿಟ್ಟಿನಲ್ಲಿ ಚಿಟ್ಟೆ ಪಾರ್ಕ್ ನಿರ್ಮಿಸಿರುವುದಾಗಿ ಅರಣ್ಯ ಇಲಾಖೆ ತಿಳಿಸಿದೆ.

ಜೊಯಿಡಾ ಭಾಗದಲ್ಲಿ ಸುಮಾರು 70 ಪ್ರಭೇಧಗಳ ಚಿಟ್ಟೆಗಳಿದ್ದು ತಾಲೂಕಿನ ಸಾಲುಮರದ ತಿಮ್ಮಕ್ಕ ಟ್ರೀ ಪಾರ್ಕ್ ನಲ್ಲಿಈ ಚಿಟ್ಟೆ ಪಾರ್ಕ್ ನಿರ್ಮಾಣವಗುತಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.  ಚಿಟ್ಟೆಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಒಟ್ಟು 100 ವಿಧದ ಹೂವಿನ ಗಿಡಗಳನ್ನು ಈ ಪಾರ್ಕ್ ನಲ್ಲಿ ಬೆಳೆಸಲಾಗುತ್ತಿದ್ದು ಜೀವ ವೈವಿಧ್ಯವನ್ನು ಉಳಿಸಿ ಬೆಳೆಸುವ  ಜವಾಬ್ದಾರಿ ಜನರ  ಮೇಲಿದೆ. ಅದರ ಭಾಗವಾಗಿ ಈ ಚಿಟ್ಟೆ ಪಾರ್ಕ್ ಅಸ್ತಿತ್ವಕ್ಕೆ ಬರುತ್ತಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

ದೇಶದಲ್ಲಿ 1500ಕ್ಕೂ ಅಧಿಕ ಚಿಟ್ಟೆಗಳ ಪ್ರಬೇಧಗಳಿದ್ದು ಈ ಪೈಕಿ 358 ಪ್ರಬೇಧಗಳು ಪಶ್ಚಿಮ ಘಟ್ಟಗಳಲ್ಲಿದೆ. ಇಂಗ್ಲೆಂಡ್‍ನಂತಹ ದೇಶದಲ್ಲಿ ಕೇವಲ 47 ಪ್ರಬೇಧದ ಚಿಟ್ಟೆಗಳಿದ್ದರೆ ಜೊಯ್ಡಾ ಒಂದರಲ್ಲೇ 70 ಕ್ಕೂ ಹೆಚ್ಚಿನ ಚಿಟ್ಟೆಯ ಪ್ರಭೇದಗಳಿವೆ. ಕರ್ನಾಟಕದ ಪಶ್ಚಿಮಘಟ್ಟ ಪ್ರದೇಶದಲ್ಲಿ ಅಧ್ಯಯನ ನಡೆಸಿದಾಗ ಆರು ವಿಶೇಷ ಮೃದ್ವಂಗಿ ಪ್ರಬೇಧಗಳು ಕಂಡು ಬಂದಿವೆ.

ಕರಾವಳಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೀಟನಾಶಕಗಳನ್ನು ಬಳಸುವುದರಿಂದ ಪ್ರಾಣಿ ಪಕ್ಷಿ ಹಾಗೂ ಮನುಷ್ಯನ ಸಂತಾನೋತ್ಪತ್ತಿಗೂ ಮಾರಕವಾಗಿ ಪರಿಣಮಿಸುತ್ತಿದೆ. ಈ ಪಾರ್ಕ್‍ನ ಮೂಲಕ ವೈವಿಧ್ಯಮಯವಾದ ಹೂಗಿಡಗಳನ್ನು ಬೆಳೆಸುವ ಮೂಲಕ ಚಿಟ್ಟೆಗಳ ಸಂತಾನೋತ್ಪತ್ತಿಗೆ ಪೂರಕ ವಾತಾವರಣ ಕಲ್ಪಿಸಲಾಗುವುದು ಎಂದು ತಿಳಿದು ಬಂದಿದೆ. ಅಲ್ಲದೇ  ಈ ಚಿಟ್ಟೆ ಪಾರ್ಕನ್ನು ಪ್ರವಾಸೋದ್ಯಮ ಅಭಿವೃದ್ಧಿಗೂ ಪೂರಕವಾಗುವಂತೆ ಬೆಳೆಸುವ ಪ್ರಯತ್ನ ನಡೆದಿದೆ.   

See also  ಸ್ತನ್ಯಪಾನವು ತಾಯಿಯ 'ಬೇರ್ಪಡಿಸಲಾಗದ ಸಾಂವಿಧಾನಿಕ ಹಕ್ಕು': ಹೈಕೋರ್ಟ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು