News Kannada
Sunday, November 27 2022

ಕರ್ನಾಟಕ

ರಂಗೇರಿದ ಮಂಜೇಶ್ಚವರ ವಿಧಾನಸಭಾ ಉಪಚುನಾಚಣೆ - 1 min read

Photo Credit :

ರಂಗೇರಿದ ಮಂಜೇಶ್ಚವರ ವಿಧಾನಸಭಾ ಉಪಚುನಾಚಣೆ

ಕಾಸರಗೋಡು: ಗಡಿನಾಡ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಉಪಸಮರ ರಂಗೇರುತ್ತಿದೆ. ಕ್ಷೇತ್ರದಲ್ಲಿ  ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ಮತಗಳು ರಾಜಕೀಯ ಪಕ್ಷಗಳಿಗೆ ನಿರ್ಣಾಯಕವಾಗಿದೆ.  

ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಸಿಯಲಾಗುತ್ತಿದ್ದು, ರಾಜಕೀಯ ಪಕ್ಷಗಳು  ಚುನಾವಣಾ ಸಂದರ್ಭದಲ್ಲಿ ನೀಡುವ ಭರವಸೆ ಈಡೇರಿಸುತ್ತಿಲ್ಲ. ಈ ನಡುವೆ ಕುಂಬಳೆಯಲ್ಲಿ ಕನ್ನಡ ಹೋರಾಟ ಸಮಿತಿ ಆಯೋಜಿಸಿದ್ದ ‘ಕನ್ನಡಿಗರೊಡನೆ ಸಂವಾದ‘ ಕಾರ್ಯಕ್ರಮಕ್ಕೆ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಬಾರದೆ ಕನ್ನಡದ ಬಗೆಗಿನ ಅಸಲಿ ಕಾಳಜಿಯನ್ನು ತೋರಿಸಿದ್ದಾರೆ. ಕನ್ನಡ ಅಭ್ಯರ್ಥಿಗಳ ಈ ನಿರ್ಲಕ್ಷ್ಯ ಧೋರಣೆಯನ್ನು  ಮತ್ತೊಮ್ಮೆ ಎತ್ತಿ ತೋರಿಸಿದ್ದಾರೆ.  ಯು ಡಿ ಎಫ್ , ಎಲ್ ಡಿ ಎಫ್ ಹಾಗೂ ಬಿಜೆಪಿ ಅಭ್ಯರ್ಥಿಗಳು  ಸಂವಾದಕ್ಕೆ ಆಗಮಿಸುವುದಾಗಿ ಆಯೋಜಕರಿಗೆ ತಿಳಿಸಿದ್ದರೂ ಅಂತಿಮ ಕ್ಷಣದಲ್ಲಿ ಕೆಲ ನೆಪ ಹೇಳಿ ಮೂವರು ಅಭ್ಯರ್ಥಿಗಳು ಸಂವಾದಕ್ಕೆ ತಲಪಿಲ್ಲ .  ಬಿಜೆಪಿ ವತಿಯಿಂದ ಪ್ರತಿನಿಧಿ  ಕಳುಹಿಸಿ ಕೈ ತೊಳೆದುಕೊಂಡರು.

 ಸಂವಾದದಲ್ಲಿ ಕನ್ನಡಿಗರ ೨೦ ಸಮಸ್ಯೆಗಳ ಮಾನವರಿಕೆಗೆ ತಯಾರಿ ಮಾಡಲಾಗಿತ್ತು.

ಬಿಜೆಪಿ  ಮತ್ತು ಎಲ್ ಡಿ ಎಫ್ ನಿಂದ ಕನ್ನಡಿಗ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ. ಯು ಡಿ ಎಫ್ ಮಾತ್ರ ಈ ಬಾರಿಯೂ ಹೊರಗಿನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಕನ್ನಡ ಭಾಷಾ ಪ್ರೇಮದ ಬಗ್ಗೆ  ಭಾಷಣ  ಬಿಗಿಯುವ ರಾಜಕೀಯ ಪಕ್ಷ ದ  ಮುಖಂಡರು , ಅಭ್ಯರ್ಥಿಗಳಿಗೆ ಭಾಷಾ ಅಲ್ಪಸಂಖ್ಯಾತರ ಮೇಲೆ ಎಷ್ಟು ಕಾಳಜಿ ಇದೆ ಎಂಬುದನ್ನು ಎತ್ತಿ ತೋರಿಸಿತ್ತು. ಕನ್ನಡಿಗರ ಸಮಸ್ಯೆ ಆಲಿಸಲು ಕೇವಲ ಒಂದು ಗಂಟೆಯ ಸಂವಾದವನ್ನು ಆಯೋಜಿಸಲಾಗಿತ್ತು.

ಚುನಾವಣಾ ಪ್ರಚಾರ ದ  ಸಂದರ್ಭದಲ್ಲಿ ಅಭ್ಯರ್ಥಿಗಳಿಂದ  ಕನ್ನಡಿಗರ ಸಮಸ್ಯೆಗಳ ಪರಿಹಾರ ಹಾಗೂ ಇತರ ವಿಷಯಗಳ  ಬಗ್ಗೆ  ಭಾಷಣ ಮಾಡಿ ಮತದಾರರನ್ನು ಸೆಳೆಯುವ ತಂತ್ರ ನಡೆಯುತ್ತಿದೆ . ಆದರೆ ಕನ್ನಡಿಗರ ಸಮಸ್ಯೆ ಆಲಿಸಲು ಒಂದು ಗಂಟೆ ಸಮಯದ ಕಾಯ್ದಿರಿಸದ ರಾಜಕೀಯ ಪಕ್ಷಗಳ  ಕನ್ನಡಿಗರ ಮೇಲಿನ ಕಾಳಜಿ ಏನೆಂಬುದು ಇಂದಿನ  ಸಂವಾದ ಪ್ರಶ್ನಿಸುವಂತೆ ಮಾಡಿದೆ .

ಮುಖ್ಯಮಂತ್ರಿ ಪಿಣರಾಯಿ ವಿಜಯನ್  ಆಗಮಿಸುತ್ತಿರುವುದರಿಂದ  ಬರಲಾಗುತ್ತಿಲ್ಲ ಎಂದು ಎಲ್ ಡಿ ಎಫ್ ಅಭ್ಯರ್ಥಿ ಎಂ .ಶಂಕರ ರೈ  ಹಾಗೂ ಪೂರ್ವ ನಿಗಧಿತ ಕಾರ್ಯಕ್ರಮ ವಾದುದರಿಂದ ಬರಲು ಸಾಧ್ಯವಾಗದು ಎಂದು ಬಿಜೆಪಿ ಅಭ್ಯರ್ಥಿ ಕುಂಟಾರು ರವೀಶ ತಂತ್ರಿ ಸಮಜಾಯಿಷಿ ನೀಡಿದರೆ , ಯು ಡಿ ಎಫ್  ಅಭ್ಯರ್ಥಿ ಎಂ .ಸಿ ಖಮರುದ್ದೀನ್  ರವರು ಮೊದಲೇ ತೀರ್ಮಾನಿಸಿದ ಪ್ರಚಾರ ಕಾರ್ಯ ವಾದುದರಿಂದ ಸಂವಾದಕ್ಕೆ ಬರಲಾಗುತ್ತಿಲ್ಲ ಎಂಬ ಸಮಜಾಯಿಸಿ ನೀಡಿರುವುದಾಗಿ ಆಯೋಜಕರು ತಿಳಿಸಿದರು .

ಬಿಜೆಪಿ ಪರ ಪ್ರತಿನಿಧಿಯಾಗಿ ಬಾಲಕೃಷ್ಣ ಶೆಟ್ಟಿ ಆಗಮಿಸಿದ್ದರೂ  ಉಳಿದ ಎರಡು ಪಕ್ಷಗಳು ಇಂತಹ ಗೋಜಿಗೂ ಹೋಗಿಲ್ಲ. ಕನ್ನಡ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕೆ. ಸ್ವಾಗತಿಸಿ, ಸಭೆಯ ಔಚಿತ್ಯದ ಕುರಿತು ಮಾಹಿತಿ ನೀಡಿದರು.

ಕನ್ನಡ ಹೋರಾಟ ಸಮಿತಿ ಅಧ್ಯಕ್ಷ  ಮುರಳೀಧರ ಬಳ್ಳುಕ್ಕುರಾಯ ಅವರ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ ಕೇರಳ ರಾಜಕೀಯ ಇತಿಹಾಸದಲ್ಲಿ  ಅವಿರೋಧ ಆಯ್ಕೆಯ ಮೂಲಕ ಎರಡು ಬಾರಿ ಶಾಸಕರನ್ನು ಆಯ್ಕೆಗೊಳಿಸಿದ್ದ ಇತಿಹಾಸವಿರುವ ಕಾಸರಗೋಡಿನಲ್ಲಿ ಭಾಷಾ ಅಲ್ಪಸಂಖ್ಯಾತ ಕನ್ನಡಿಗರು ವೋಟ್ ಬ್ಯಾಂಕ್ ಆಗಿ ಇಂದು ಪರಿವರ್ತಿತರಾಗಬೇಕಿದೆ ಎಂದು ಹೇಳಿದರು.

See also  ಟೊಮೆಟೋ, ಈರುಳ್ಳಿ ಬೆಳೆದ ರೈತರ ಕಣ್ಣಲ್ಲೀಗ ನೀರು!

ಬಿಜೆಪಿ  ಅಭ್ಯರ್ಥಿ ಪರ  ವಿ. ಬಾಲಕೃಷ್ಣ ಶೆಟ್ಟಿ, ಪಕ್ಷೇತರ ಅಭ್ಯರ್ಥಿ ಐ . ಜೋನ್  ಡಿ ಸೋಜ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್. ವಿ. ಭಟ್, ನಿವೃತ್ತ ಮುಖ್ಯ ಶಿಕ್ಷಕ ನಾರಾಯಣ ಗಟ್ಟಿ ಕುಂಬಳೆ ಉಪಸ್ಥಿತರಿದ್ದರು.

ಸಂವಾದದಲ್ಲಿ ವಿ. ಬಾಲಕೃಷ್ಣ ಶೆಟ್ಟಿ ಮಾತನಾಡಿ, ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಜನಪ್ರತಿನಿಧಿಗಳಿಗೆ ಕನ್ನಡಿಗರ ಬಗ್ಗೆ ಕಾಳಜಿ ಇರಲಿಲ್ಲ. ಕನ್ನಡಿಗರ ಮತ ಪಡೆದು ಗೆದ್ದವರು ಪ್ರಮಾಣಿಕವಾಗಿ ಕನ್ನಡಿಗರ ಸಮಸ್ಯೆಗೆ ಸ್ಪಂದಿಸಿಲ್ಲ. ಕೇರಳ ರಾಜ್ಯ ಲೋಕಸೇವಾ ಆಯೋಗವು ಕನ್ನಡ ಪರೀಕ್ಷಾರ್ಥಿಗಳಿಗೆ ಮಲಯಾಳ ಪ್ರಶ್ನೆ ಪತ್ರಿಕೆಗಳನ್ನು ನೀಡಿದಾಗ ಬಿಜೆಪಿ ಪ್ರಬಲ ಹೋರಾಟ ಮಾಡಿ ಬೆಂಬಲಿಸಿತ್ತು. ಕೇಂದ್ರ ಸರ್ಕಾರದ ರೈಲ್ವೆ ಇಲಾಖೆ, ಅಂಚೆ ಇಲಾಖೆ ಹಾಗೂ ಇತರ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ನೇಮಕಾತಿ ಮತ್ತು ಸೌಲಭ್ಯಗಳಲ್ಲಿ ಗಡಿನಾಡ ಕನ್ನಡಿಗರು ಎದುರಿಸುವ ಸಮಸ್ಯೆಗೆ ಹಂತಹಂತವಾಗಿ ಪರಿಹಾರ ಕಂಡುಕೊಳ್ಳಲಾಗುತ್ತಿದೆ.’ ಎಂದು ಹೇಳಿದರು. ಪಕ್ಷೇತರ ಅಭ್ಯರ್ಥಿ ಜೋನ್  ಡಿಸೋಜ  ಮಾತನಾಡಿ, ‘ಉಪ ಚುನಾವಣೆಯಲ್ಲಿ ನಾನು ಸೋತರೂ, ಗೆದ್ದರೂ ಕನ್ನಡಿಗರ ಪರವಾಗಿ ಸದಾ ಇರುವುದಾಗಿ ಭರವಸೆ ನೀಡಿದರು.

ಕನ್ನಡ ಭಾಷೆ, ಸಂಸ್ಕೃತಿ ಉಳಿವಿನ ಬಗ್ಗೆ ವೇದಿಕೆಗಳಲ್ಲಿ ಭರವಸೆ ನೀಡುವ ಪಕ್ಷಗಳು ತಮ್ಮ ನೈಜ ಕಾಳಜಿ ತೋರಿದ್ದಾರೆ ಎಂಬ ಅಸಮಾಧಾನ ವ್ಯಕ್ತವಾಯಿತು. ‌

ಕನ್ನಡ ಸಾಹಿತ್ಯ ಪರಿಷತ್  ಗಡಿನಾಡ ಘಟಕ ಅಧ್ಯಕ್ಷ ಎಸ್ ವಿ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶ ಮಾಸ್ತರ್ ಕೂಡ್ಲು ವಂದಿಸಿದರು.

ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಎಸ್. ನವೀನಚಂದ್ರ ಮಾನ್ಯ, ಸದಸ್ಯ ಸುಂದರ ಬಾರಡ್ಕ, ಸಿರಿಗನ್ನಡ ವೇದಿಕೆ ಜಿಲ್ಲಾ
ಅಧ್ಯಕ್ಷ ವಿ. ಬಿ. ಕುಳಮರ್ವ, ನಿವೃತ್ತ ಪ್ರಾಧ್ಯಾಪಕಿ ಡಾ. ಯು. ಮಹೇಶ್ವರಿ, ಪ್ರದೀಪ್ ಕುಮಾರ್ ಶೆಟ್ಟಿ ಬೇಳ, ವೀರೇಶ್ವರ ಕಲ್ಮರ್ಕರ್, ರಂಗನಾಥ ಮೈಲಾಟಿ, ರಾಮಚಂದ್ರ ಪಾಲೆಕ್ಕಿ, ಪ್ರಕಾಶ ಬಂಗಾಡು, ಶಂಕರ, ಬಿ. ವಾಸುದೇವ, ಎರೋಲ್ ಮಂಜುನಾಥ, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಜಿಲ್ಲಾಧ್ಯಕ್ಷ ರವೀಂದ್ರನಾಥ ಕೆ. ಆರ್., ತಾರಾನಾಥ ಮಧೂರು ಮೊದಲಾದವರು  ಉಪಸ್ಥಿತರಿದ್ದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು