News Kannada
Sunday, November 27 2022

ಕರ್ನಾಟಕ

ಕೋಡಿ ಬಿದ್ದ ಮಾಡ್ರಹಳ್ಳಿ ಕೆರೆ: ಜಮೀನು ಜಲಾವೃತ - 1 min read

Photo Credit :

ಕೋಡಿ ಬಿದ್ದ ಮಾಡ್ರಹಳ್ಳಿ ಕೆರೆ: ಜಮೀನು ಜಲಾವೃತ

ಪಾಂಡವಪುರ:ಕೆರೆ ತುಂಬಿ ಕೋಡಿ ಬಿದ್ದು ಜಮೀನಿಗೆ ನೀರು ನುಗ್ಗಿದ ಪರಿಣಾಮ ರೈತರಿಗೆ ಅಪಾರ ಪ್ರಮಾಣದ ನಷ್ಟ ಸಂಭವಿಸಿರುವ ಘಟನೆ ನಡೆದಿದೆ.

ತಾಲೂಕಿನ ಮಾಡ್ರಹಳ್ಳಿ ಕೆರೆ ಕೋಡಿ ಬಿದ್ದು, ರೈತರಜಮೀನಿಗೆ ನೀರು ನುಗ್ಗಿದೆ. ರೈತರು ತಾವು ಕಷ್ಟ ಪಟ್ಟು ಬೆಳೆದ ಸೌತೆಕಾಯಿ, ಬೀನ್ಸ್, ಕಬ್ಬು ಬೆಳೆಗಳು ನೀರಿನಿಂದ ಆವೃತಗೊಂಡು ಬೆಳೆ ನೆಲಕಚ್ಚಿರುವುದ್ದರಿಂದ ತಮ್ಮ ಶ್ರಮದ ಪ್ರತಿಫಲ ಹಾಳಾಗಿ ನಷ್ಟ ಅನುಭವಿಸುವ ಸ್ಥಿತಿ ತಲುಪಿದ್ದಾರೆ.

ಈ ಭಾಗದಲ್ಲಿ ಬಿದ್ದ ಮಳೆ ಹಾಗೂ ಹೇಮಾವತಿ ನಾಲೆ ಮೂಲಕ ಕೆರೆಗೆ ನೀರು ಹರಿದ ಪರಿಣಾಮ ಕೆರೆ ಕೋಡಿ ಬಿದ್ದಿದ್ದು, ಜಮೀನುಗಳ ವಾಡೆ ಹೊಡೆದು ಜಮೀನಿಗೆ ನೀರು ನುಗ್ಗಿದೆ. ಜತೆಗೆ ನೀರು ಹರಿವ ರಭಸಕ್ಕೆ ಜಮೀನಿನ ಭೂ ಸವೆತ ಉಂಟಾಗಿ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿರುವ ಬಗ್ಗೆ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಮಾಡ್ರಹಳ್ಳಿ ಕೆರೆ ತುಂಬಿ ಕೋಡಿ ಬಿದ್ದು, ಸುಂಕಾತೊಣ್ಣೂರು ಕೆರೆಗೆ ನೀರು ಹರಿಯುತ್ತದೆ. ಸುಮಾರು ಕೋಡಿ ಬಿದ್ದ ನೀರು 2 ಕಿ.ಮೀ ದೂರ ಹರಿದು ಅಕ್ಕ ಪಕ್ಕದ ಜಮೀನುಗಳಿಗೆ ನೀರು ನುಗ್ಗಿ ಬೆಳೆ ನಷ್ಟ ಸಂಭವಿಸುವುದು ಸಾಮಾನ್ಯವಾಗಿದೆ. ಕೋಡಿ ಹರಿಯುವ ಮಾರ್ಗದಲ್ಲಿ ತಡೆಗೋಡೆ ನಿರ್ಮಿಸಿದರೆ ಪ್ರತಿ ವರ್ಷ ಇದರಿಂದಾಗುವ ಬೆಳೆ ನಷ್ಟವನ್ನು ತಪ್ಪಿಸಬಹುದು ಆದರೆ ಈ ಬಗ್ಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನ ಹರಿಸುತ್ತಿಲ್ಲ. ಹೀಗಾಗಿ ನಮಗೆ ನಷ್ಟ ತಪ್ಪಿದ್ದಲ್ಲ ಎಂದು ಇಲ್ಲಿನ ರೈತರು ಹೇಳುತ್ತಾರೆ.

ಕಳೆದ ವರ್ಷವೂ ಇದೇ ರೀತಿ ಕೋಡಿ ಬಿದ್ದು ಬೆಳೆ ನಷ್ಟ ಸಂಭವಿಸಿತ್ತು, ಆಗ ಸಣ್ಣ ನೀರಾವರಿ ಸಚಿವರಾಗಿದ್ದ ಸಿ.ಎಸ್.ಪುಟ್ಟರಾಜು ಅವರಿಗೆ ಬೆಳೆ ನಷ್ಟದ ಪರಿಹಾರ ಕೊಡಿಸುವಂತೆ ಮತ್ತು ತಡೆಗೋಡೆ ನಿರ್ಮಾಣಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ ಈವರೆಗೂ ಯಾವುದೇ ಕ್ರಮವಾಗಿಲ್ಲ. ಪ್ರತಿವರ್ಷ ಈ ರೀತಿ ಕೋಡಿ ಬಿದ್ದು ಬೆಳೆ ಹಾಳಾಗುವುದು ಸಾಮಾನ್ಯವಾಗಿದೆ. ಈಗ ನಮ್ಮ 1.5 ಎಕರೆ ಪ್ರದೇಶ ಜಮೀನಿಗೆ ನೀರು ನುಗ್ಗಿರುವ ಪರಿಣಾಮ ಬೆಳೆ ಹಾನಿಯಾಗಿದ್ದು, ಲಕ್ಷಾಂತರ ರೂ. ಹಾನಿಯಾಗಿದೆ ಎಂದು ರೈತ ಪುಟ್ಟಸ್ವಾಮಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

 

 

See also  ಮಳೆಹಾನಿ ಪರಿಹಾರ ಪ್ರಗತಿ ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ರಾಜ್‍ಕುಮಾರ್ ಖತ್ರಿ ಸ್ಪಷ್ಟ ಸೂಚನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು