News Kannada
Saturday, November 26 2022

ಕರ್ನಾಟಕ

ಮಂಜೇಶ್ವರ ವಿಧಾನಸಭೆ ಉಪಚುನಾವಣೆ: ಮೊಬೈಲ್ ಸಂಪೂರ್ಣ ನಿಷೇಧ - 1 min read

Photo Credit :

ಮಂಜೇಶ್ವರ ವಿಧಾನಸಭೆ ಉಪಚುನಾವಣೆ: ಮೊಬೈಲ್ ಸಂಪೂರ್ಣ ನಿಷೇಧ

ಕಾಸರಗೋಡು: ಮಂಜೇಶ್ವರ ವಿಧಾನಸಭಾ ಕ್ಷೇತ್ರ ಉಪಚುನಾವಣೆಯಂದು ಮತಗಟ್ಟೆಯ ನೂರು ಮೀಟರ್ ವ್ಯಾಪ್ತಿಯಲ್ಲಿ ಮೊಬೈಲ್ ಫೋನ್ ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ಮೊಬೈಲ್ ಸಹಿತ ಮತಗಟ್ಟೆಗೆ ತಲಪಿದ್ದಲ್ಲಿ ಮೊಬೈಲ್ ಫೋನನ್ನು ವಶಕ್ಕೆ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ . ಡಿ .ಸಜಿತ್ ಬಾಬು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. 20 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ನಡೆಸಲಾಗುವುದು. 49 ಮತಗಟ್ಟೆಗಳಲ್ಲಿ ಅರೆಸೇನಾ ಪಡೆಯನ್ನು ನಿಯೋಜಿಸಲಾಗುವುದು. 53 ಮತಗಟ್ಟೆಗಳಲ್ಲಿ ಮೈಕ್ರೋ ಒಬ್ಸರ್ ವರ್ ಗಳು ನಿಗಾ ಇರಿಸುವರು. 198 ಮತಗಟ್ಟೆಗಳಲ್ಲಿ ಪರ್ಧಾ ಧರಿಸಿದ ಮಹಿಳೆಯರ ಗುರುತು ಪತ್ತೆಗೆ ಮಹಿಳಾ ಸಿಬಂದಿಗಳನ್ನು ನೇಮಿಸಲಾಗುವುದು. 11 ಮತಗಟ್ಟೆಗಳಲ್ಲಿ ವೀಡಿಯೋಗ್ರಾಫರ್ ಗಳು ಚಿತ್ರೀಕರಣ ನಡೆಸಲಿದ್ದಾರೆ.

ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಈ ಚಿತ್ರೀಕರಣ ನಡೆಯಲಿದೆ. ಅಕ್ರಮ ಮತದಾನ ತಡೆಯಲು ಕಠಿಣ ಕ್ರಮ ಕೈಗೊಳ್ಳಲಾಗುವುದು. ಅ.15ರ ನಂತರ ಕರ್ನಾಟಕ ಸಹಿತ ಹೊರ ರಾಜ್ಯಗಳಿಂದ ಒಂದೇ ವಾಹನದಲ್ಲಿ 6 ಮಂದಿಗಿಂತ ಅಧಿಕ ಜನ ಸಂಚಾರ ನಡೆಸಿದರೆ ಸೂಕ್ಷ್ಮ ತಪಾಸಣೆಗೊಳಪಡಿಸಲಾಗುವುದು. ಕಾನೂನು ಸುವ್ಯವಸ್ಥೆಗೆ ಭಂಗ ತರುವ ಎಲ್ಲಾ ಪ್ರಯತ್ನಗಳನ್ನು ತಡೆಯಲಾಗುವುದು. ವಿಶೇಷ ಪೊಲೀಸ್ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಕ್ಷೇತ್ರದಾದ್ಯಂತ ಕೇಂದ್ರ ಪಡೆಯನ್ನು ನಿಯೋಜಿಸಲಾಗುವುದು.

ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಪೊಲೀಸ್ ಠಾಣೆಗಳಲ್ಲಿ ಸರ್ವಪಕ್ಷ ಸಭೆ ಕರೆಯಲಾಗುವುದು. ಮೆರವಣಿಗೆ, ಪ್ರಚಾರಕ್ಕೆ ಪೂರ್ವಾನುಮತಿ ಪಡೆಯಬೇಕು ಎಂದು ಸಭೆಯಲ್ಲಿ ತಿಳಿಸಲಾಯಿತು.

ಸಭೆಯಲ್ಲಿ ಸಾರ್ವಜನಿಕ ನಿರೀಕ್ಷಕಿ ಸುಷ್ಮಾ ಗೋಡ್ ಬೋಲೆ, ಖರ್ಚುವೆಚ್ಚ ನಿರೀಕ್ಷಕ ಕಮಲ್ ಜೀತ್ ಕೆ.ಕಮಲ್, ಮಂಜೇಶ್ವರ ವಿಧಾನಸಭೆ ಕ್ಷೇತ್ರ ಚುನಾವಣೆ ಅಧಿಕಾರಿ ಎನ್.ಪ್ರೇಮಚಂದ್ರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೇಮ್ಸ್ ಜೋಸೆಫ್, ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ಪಿ.ಆರ್.ರಾಧಿಕಾ, ಹೆಚ್ಚುವರಿ ದಂಡನಾಧಿಕಾರಿ ಕೆ.ಸುನಿಲ್ ಕುಮಾರ್, ಆರ್.ಡಿ.ಒ.ಕೆ.ರವಿ ಕುಮಾರ್, ಹುಸೂರ್ ಶಿರಸ್ತೇದಾರ್ ಕೆ.ನಾರಾಯಣನ್,ವಿ.ಕೆ.ರವಿ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಡಾ.ವಿ.ಪಿ.ಪಿ.ಮುಸ್ತಫಾ, ಬಾಕೃಷ್ಣ ಶೆಟ್ಟಿ, ಗೋವಿಂದನ್ ಪಳ್ಳೀಕ್ಕಾಪಿಲ್, ಎಂ.ಕುಂಞಂಬು ನಂಬ್ಯಾರ್, ಎಂ.ಅನಂತನ್ ನಂಬ್ಯಾರ್, ನ್ಯಾಷನಲ್ ಅಬ್ದುಲ್ಲ, ಜೋಸೆಫ್ ವಡಗರ, ಎ.ಕೆ.ಆರಿಫ್, ಎಂ.ಎಚ್.ಜನಾರ್ದನ, ಅಶ್ರಫ್ ಕರ್ಲ ಮೊದಲಾದವರು ಉಪಸ್ಥಿತರಿದ್ದರು.

See also  ಸುಳ್ಳು ಹೇಳಿ ಅಧಿಕಾರಿಗಳು ಸಭೆಗೆ ಗೈರು: ದೇಶಪಾಂಡೆ ಕೆಂಡಾಮಂಡಲ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು