News Kannada
Sunday, November 27 2022

ಕರ್ನಾಟಕ

ಭಾರವಿ ಕಾವೇರಿ ಕನ್ನಡ ಸಂಘದಿಂದ ಇಬ್ಬರಿಗೆ ಕಾವೇರಿ ರತ್ನ ಪ್ರಶಸ್ತಿ ಪ್ರದಾನ - 1 min read

Photo Credit :

ಭಾರವಿ ಕಾವೇರಿ ಕನ್ನಡ ಸಂಘದಿಂದ ಇಬ್ಬರಿಗೆ ಕಾವೇರಿ ರತ್ನ ಪ್ರಶಸ್ತಿ ಪ್ರದಾನ

ಮಡಿಕೇರಿ: ಕುಶಾಲನಗರದ ಭಾರವಿ ಕಾವೇರಿ ಕನ್ನಡ ಸಂಘದ ವತಿಯಿಂದ 7ನೇ ವರ್ಷದ ಕಾವೇರಿ ಪುಣ್ಯತೀರ್ಥ ವಿತರಣಾ ಕಾರ್ಯಕ್ರಮ ಕುಶಾಲನಗರ ಕೊಪ್ಪ ಗೇಟ್ ಬಳಿಯಿರುವ ಶ್ರೀ ಕಾವೇರಿ ದೇಗುಲದಲ್ಲಿ ನಡೆಯಿತು.

ವಿವಿಧ ಪೂಜಾ ಕೈಂಕರ್ಯಗಳ ನಂತರ ಇಬ್ಬರು ಹಿರಿಯರಿಗೆ ಕಾವೇರಿ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಬಾಚರಣಿಯಂಡ ಪಿ. ಅಪ್ಪಣ್ಣ ಹಾಗೂ ಹಿರಿಯ ಪತ್ರಕರ್ತ ಬಿ.ಆರ್.ನಾರಾಯಣ್ ಅವರುಗಳಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅಪ್ಪಣ್ಣ, ಕಾವೇರಿ ಮಾತೆಯ ಉಗಮದ ಬಗ್ಗೆ ವಿವರಿಸಿದರು. ಹೊರ ರಾಜ್ಯ ಹಾಗೂ ಹೊರ ದೇಶಗಳಿಂದ ಆಗಮಿಸುವ ಪ್ರವಾಸಿಗರು ಗಡಿ ಭಾಗದಲ್ಲಿರುವ ಪವಿತ್ರ ಶ್ರೀಕಾವೇರಿ ಸನ್ನಿಧಾನವನ್ನು ವೀಕ್ಷಿಸಿ ಕಾವೇರಿ ಮಾತೆಯ ಆಶೀರ್ವಾದ ಪಡೆದು ನಂತರ ಕೊಡಗನ್ನು ಪ್ರವೇಶಿಸುವ ಪುಣ್ಯವನ್ನು ಹೊಂದಿದ್ದಾರೆ ಎಂದರು.

ಮಾಜಿ ಸಂಸದ ಸಿ.ಹೆಚ್.ವಿಜಯಶಂಕರ್ ಮಾತನಾಡಿ, ಶಾಂತ ಸ್ವರೂಪಿಣಿಯಾಗಿರುವ ಶ್ರೀಕಾವೇರಿ ಮಾತೆಯು ಕಳೆದೆರಡು ವರ್ಷಗಳಿಂದ ಪ್ರವಾಹದ ರೂಪದಲ್ಲಿ ಜನರಿಗೆ ಸಂಕಷ್ಟವನ್ನು ತಂದೊಡ್ಡಿದ್ದಾಳೆ. ಇನ್ನು ಮುಂದೆ ಈ ರೀತಿಯ ಅನಾಹುತಗಳು ನಡೆಯದಿರಲಿ ಎಂದು ಹೇಳಿದರು.

ಮಾನವ ಪ್ರಕೃತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಪರಿಣಾಮ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಿವೆ ಎಂದು ಅಭಿಪ್ರಾಯಪಟ್ಟ ಅವರು ಪರಿಸರ ಜಾಗೃತಿಯ ಮಾತುಗಳನ್ನಾಡಿದರು.

ಈ ಸಂದರ್ಭ ಎಸ್‍ಎಲ್‍ಎನ್ ಸಂಸ್ಥೆಯ ಮುಖ್ಯಸ್ಥರಾದ ಸಾತಪ್ಪನ್ ಹಾಗೂ ಕುಟುಂಬಸ್ಥರು, ಭಾರವಿ ಕಾವೇರಿ ಕನ್ನಡ ಸಂಘದ ಪ್ರಮುಖರಾದ ಬಬೀಂದ್ರ ಪ್ರಸಾದ್, ರವೀಂದ್ರ ಪ್ರಸಾದ್, ವಿಜಯೇಂದ್ರ ಪ್ರಸಾದ್, ಗೆಳೆಯರ ಬಳಗದ ಚಂದ್ರು, ಹರೀಶ್, ಜಬಿವುಲ್ಲಾ, ರುದ್ರೇಶ್, ಪರಮೇಶ್, ಗುತ್ತಿಗೆದಾರ ಚಂದ್ರು ಸೇರಿದಂತೆ ಮತ್ತಿತರ ಪ್ರಮುಖರು ಹಾಜರಿದ್ದರು.

See also  ಬಿಎಲ್‍ಓಗಳು ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು: ಡಾ.ಎಂ.ವಿ.ವೆಂಕಟೇಶ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು