News Kannada
Thursday, December 01 2022

ಕರ್ನಾಟಕ

ಚುನಾವಣೆ ಎದುರಿಸಲು ಸಿದ್ದರಿದ್ದೇವೆ: ದಿನೇಶ್ ಗುಂಡೂರಾವ್ - 1 min read

Photo Credit :

ಚುನಾವಣೆ ಎದುರಿಸಲು ಸಿದ್ದರಿದ್ದೇವೆ: ದಿನೇಶ್ ಗುಂಡೂರಾವ್

ಮಂಡ್ಯ: ರಾಜ್ಯದಲ್ಲಿ ಯಾವುದೇ ಚುನಾವಣೆ ಎದುರಾದರೂ ನಾವು ಎದುರಿಸಲು ಸಿದ್ದರಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.

ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಅವರು ನಗರದ ಸಂಜಯ ವೃತ್ತದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಯಾವುದೇ ಸಂದರ್ಭದಲ್ಲಿಯಾದರೂ ಚುನಾವಣೆ ಎದುರಾಗಬಹುದು. ಉಪ ಚುನಾವಣೆಯಾಗಲಿ, ಸಾರ್ವತ್ರಿಕ ಚುನಾವಣೆ ಬರಲಿ. ನಾವು ಚುನಾವಣೆ ಎದುರಿಸಲು ಸಿದ್ದರಿದ್ದೇವೆ. ಕಾಂಗ್ರೆಸ್ ಕಟ್ಟಲು ನಾವೆಲ್ಲಾ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ರಾಜ್ಯ ಬಿಜೆಪಿ ಸರ್ಕಾರ ಜನರಲ್ಲಿ ಭ್ರಮ ನಿರಸನ ಉಂಟು ಮಾಡಿದೆ. ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ. ಮುಖ್ಯಮಂತ್ರಿಗಳಿಗೆ ಏನು ಕೇಳಿದ್ರೂ ನನ್ನ ಬಳಿ ಹಣವಿಲ್ಲ, ಅಧಿಕಾರ ನಡೆಸೋಕೆ ಆಗುತ್ತಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಹರಿಹಾಯ್ದರು.

ಚುನಾವಣೆ ಬಂದ್ರೆ ಸಮರ್ಥವಾಗಿ ಎದುರಿಸ್ತೇವೆ. ಇಲ್ಲ ಅಂದರೆ ಪಕ್ಷ ಕಟ್ಟಿ ಸಂಘಟನೆ ಮಾಡ್ತೀವಿ. ಇವತ್ತಿನ ಬೆಳವಣಿಗೆಗಳನ್ನ ನೋಡಿದ್ರೆ ರಾಜ್ಯದಲ್ಲಿ ಏನು ಬೇಕಾದರೂ ಆಗಬಹುದು. ಉಪ ಚುನಾವಣೆ ಸಂಬಂಧ ಅ.22ರಂದು ಸುಪ್ರೀಂ ಕೋರ್ಟ್‍ನಲ್ಲಿ ತೀರ್ಪು ಹೊರಬಲಿದ್ದು, ಅನರ್ಹ ಶಾಸಕರ ಭವಿಷ್ಯ ನಿರ್ಧಾರವಾಗಲಿದೆ. ನಾವು ಎಲ್ಲಾ ತಯಾರಾಗಿದ್ದೇವೆ. ಯಾರನ್ನು ಅಭ್ಯರ್ಥಿ ಮಾಡಬೇಕು ಎಂಬುದು ನಿರ್ಧಾರವಾಗಿದೆ ಎಂದರು.

ನಾನು ಸುಮಲತಾ ಬಗ್ಗೆ ಮಾತನಾಡಲ್ಲ. ಅವತ್ತಿನ ವಾತಾವರಣ ಹೇಗಿತ್ತು ಜನರಿಗೆ ತಿಳಿದಿದೆ. ಪ್ರತಿ ಕ್ಷೇತ್ರದಲ್ಲಿ ಯಾರು ಏನು ಮಾಡಿದ್ರು, ಏನಾಯ್ತು ಅಂತ ತಿಳಿದಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಬೆಂಬಲ ನೀಡಿದ್ದಾರೆ. ಪಕ್ಷ ಬೆಂಬಲಿಸಿಲ್ಲ ಎಂಬ ಸಂಸದೆ ಸುಮಲತಾ ಹೇಳಿಕೆಗೆ ಪ್ರತಿಕ್ರಿಯಿಸಿದರು.

ಕಾಂಗ್ರೆಸ್ ಇನ್ನು ಮುಂದೆ ಯಾರ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ನಗರಸಭೆ ಆಗಲಿ, ಪಂಚಾಯ್ತಿ ಚುನಾವಣೆ ಆಗಲಿ ಸ್ವತಂತ್ರವಾಗಿ ಎದುರಿಸುತ್ತೇವೆ. ಕೇಂದ್ರ ಬಿಜೆಪಿ ನಾಯಕರ ವಿರುದ್ದ ಜೆಡಿಎಸ್ ಮೃಧು ಧೋರಣೆ ಅನುಸುತ್ತಿದ್ದಾರೆ. ಬಿಜೆಪಿ ಸಿದ್ಧಾಂತಗಳನ್ನ, ನಡವಳಿಕೆಗಳನ್ನ ನಾವು ಯಾವತ್ತೂ ವಿರೋಧಿಸುತ್ತಲೇ ಬಂದಿದ್ದೇವೆ. ಬಿಜೆಪಿ ಪಕ್ಷದ ಜೊತೆ ಹೊಂದಾಣಿಕೆ ಇಲ್ಲ. ಕಟುವಾಗಿ ವಿರೋಧ ಮಾಡ್ತೀವಿ. ನಮ್ಮ ಸಿದ್ಧಾಂತದ ಮೇಲೆ ನಮಗೆ ನಂಬಿಕೆ ಇದೆ. ಹಿಂಸೆಯಿಂದ, ಭಯದಿಂದ ದೇಶ ಕಟ್ಟುವ ಕೆಲಸ ಬಿಜೆಪಿಯದ್ದು. ನಾವು ಅವರ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ವರಿಷ್ಠರು ಇದ್ದಾರಲ್ಲ ಅದು ಅವರಿಗೆ ಬಿಟ್ಟ ವಿಚಾರ. ಈಗ ನಾವು ಇದ್ದೀವಿ, ಪಕ್ಷ ಕಟ್ತೀವಿ, ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.

See also  ಸ್ಥಳೀಯ ನಿವಾಸಿಗಳ ಶ್ರಮದಾನದಿಂದ ವಾಟೆಕಾಡು ರಸ್ತೆಯ ಕೆಸರು ಮಣ್ಣು ತೆರವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು