News Kannada
Friday, December 02 2022

ಕರ್ನಾಟಕ

ನಾಳೆ ಮಂಜೇಶ್ವರ ವಿಧಾನಸಭಾ ಉಪಚುನಾವಣೆ: ೧೯೮ ಮತಗಟ್ಟೆ ಸಜ್ಜು

Photo Credit :

ನಾಳೆ ಮಂಜೇಶ್ವರ ವಿಧಾನಸಭಾ ಉಪಚುನಾವಣೆ: ೧೯೮ ಮತಗಟ್ಟೆ ಸಜ್ಜು

ಕಾಸರಗೋಡು : ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಾಳೆ ನಡೆಯಲಿದ್ದು , 2,14, 779 ಮಂದಿ ತಮ್ಮ ಹಕ್ಕು ಚಲಾಯಿಸುವರು .  ಮತದಾನಕ್ಕಾಗಿ 198 ಮತಗಟ್ಟೆಗಳನ್ನುಸಜ್ಜುಗೊಳಿಸಲಾಗಿದೆ. ಪೈವಳಿಕೆ  ನಗರ ಸರಕಾರಿ  ಶಾಲೆಯಿಂದ  ಇಂದು  ಬೆಳಿಗ್ಗೆ ಮತಗಟ್ಟೆಗಳಿಗೆ ಸಾಮಗ್ರಿಗಳನ್ನು ಕೊಂಡೊಯ್ಯಲಾಯಿತು.

ನಾಳೆ ಬೆಳಿಗ್ಗೆ ಏಳರಿಂದ ಸಂಜೆ  ಆರು ಗಂಟೆ ತನಕ ಮತದಾನ ನಡೆಯಲಿದೆ. ಇವರಲ್ಲಿ 1,06,928 ಮಹಿಳೆಯರು, 1,07,851 ಮಂದಿ ಪುರುಷರು, 1240 ವಿಶೇಷಚೇತನರು ಇದ್ದಾರೆ. ಚುನಾವಣೆಯ ವೇಳೆ 20 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ನಡೆಯಲಿದೆ. 49 ಮತಗಟ್ಟೆಗಳಲ್ಲಿ  ಅರೆಸೇನಾ ಪಡೆ ಯನ್ನು ನಿಯೋಜಿಸಲಾಗಿದೆ. 257 ಮತಯಂತ್ರಗಳನ್ನು
ಸಜ್ಜುಗೊಳಿಸಲಾಗಿದೆ . ಸೂಕ್ಷ್ಮ ಮತಗಟ್ಟೆಗಳಲ್ಲಿ ಪೊಲೀಸ್  ನಿಗಾ ಇರಿಸಿದ್ದಾರೆ. 105 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ.  

ಎಲ್ಲ ಮತಗಟ್ಟೆಗಳಲ್ಲಿ   ವಿಡೀಯೋ ಚಿತ್ರೀಕರಣ ನಡೆಯಲಿದೆ. 53ರಲ್ಲಿ ಮೈಕ್ರೋ ನಿರೀಕ್ಷಕರು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. 198 ಮಹಿಳಾ ಪೋಲಿಂಗ್  ಸಹಾಯಕರನ್ನು ನೇಮಿಸಲಾ ಗಿದೆ. ಶಾಂತಿಯುತ ಹಾಗೂ ಪಾರದರ್ಶಕ ಮತದಾನಕ್ಕಾಗಿ ಆಯೋಗ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. 2016  ರಲ್ಲಿ  76.  33 ಶೇಕಡಾ ಮತದಾನವಾಗಿತ್ತು .

ಉಪಚುನಾವಣೆಯಾದುದರಿಂದ ಮತದಾನ ಶೇಕಡಾವಾರು ಹೆಚ್ಚಳವಾಗುವ ಸಾಧ್ಯತೆ ಇದೆ. ಕಾಂಗ್ರೆಸ್ ನೇತೃತ್ವದ  ಮೈತ್ರಿಕೂಟವಾದ  ಯು ಡಿ ಎಫ್ ನಿಂದ  ಎಂ . ಸಿ ಖಮರುದ್ದೀನ್ ,   ಸಿಪಿಐಎಂ ನೇತೃತ್ವದ ಎಲ್ ಡಿ ಎಫ್ ನಿಂದ    ಎಂ . ಶಂಕರ ರೈ ,  ಬಿಜೆಪಿಯಿಂದ  ಕುಂಟಾರು ರವೀಶ ತಂತ್ರಿ   ಕಣದಲ್ಲಿರುವ ಪ್ರಮುಖ  ಅಭ್ಯರ್ಥಿಗಳಾಗಿದ್ದು ,  ಪಕ್ಷೇತರರು ಸೇರಿದಂತೆ ಏಳು ಮಂದಿ ಕಣದಲ್ಲಿದ್ದಾರೆ .

ಎಲ್ ಡಿ ಎಫ್ ಅಭ್ಯರ್ಥಿ ಎಂ .ಶಂಕರ ರೈ  ಮಾಸ್ಟರ್ ನಾಳೆ ಬೆಳಿಗ್ಗೆ ಅಂಗಡಿಮೊಗರು ಸರಕಾರಿ  ಶಾಲೆಯ 165 ನೇ  ಮತಗಟ್ಟೆಯಲ್ಲಿ  ಮತಚಲಾಯಿಸುವರು. ಖಮರುದ್ದೀನ್ ಮತ್ತು ರವೀಶ ತಂತ್ರಿ ಹೊರಗಿನವರು ಆದುದರಿಂದ ಇಬ್ಬರಿಗೂ ಇಲ್ಲಿ ಮತದಾನ ಇಲ್ಲ.

ಕ್ಷೇತ್ರದ ಲ್ಲಿ   93 ನೇ  ಇಚ್ಲಂಗೋಡು   ಎ ಎಲ್ ಪಿ ಶಾಲಾ ಮತಗಟ್ಟೆಯಲ್ಲಿ ಗರಿಷ್ಟ  1463 ಮತದಾರರನ್ನು ಹೊಂದಿದ್ದರೆ  ಪೆರ್ಲ ಸ್ವರ್ಗದ ಸ್ವಾಮಿ ವಿವೇಕಾನಂದ  ಯು ಪಿ ಶಾಲೆಯ 194 ನೇ ಮತಗಟ್ಟೆಯಲ್ಲಿ 628 ಮತದಾರರಿದ್ದಾರೆ . 

 

 

See also  ಶಾಸಕ ಇಕ್ಬಾಲ್ ಗೆ ರವಿ ಪೂಜಾರಿ ಹೆಸರಿಂದ ಬೆದರಿಕೆ ಕರೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು