News Kannada
Friday, December 09 2022

ಕರ್ನಾಟಕ

ಮೂಲೆಕಾಡಿನಲ್ಲಿ ನರಹಂತಕ ವೀರಪ್ಪನ್ ನೆನಪಲ್ಲಿ ಅನ್ನದಾನ  

Photo Credit :

ಮೂಲೆಕಾಡಿನಲ್ಲಿ ನರಹಂತಕ ವೀರಪ್ಪನ್ ನೆನಪಲ್ಲಿ ಅನ್ನದಾನ   

ಚಾಮರಾಜನಗರ: ಕಾಡುಗಳ್ಳ, ನರಹಂತಕ ವೀರಪ್ಪನ್ ಪೊಲೀಸರ ಗುಂಡೇಟಿಗೆ ಬಲಿಯಾಗಿ 15 ವರ್ಷವಾಗಿದ್ದು, ಆತನ ಪುಣ್ಯತಿಥಿ ಕಾರ್ಯಕ್ರಮದ ಅಂಗವಾಗಿ ಅಭಿಮಾನಿಗಳು ಅನ್ನದಾನ ಏರ್ಪಾಡು ಮಾಡಿ ತಮ್ಮ ನಾಯಕನಿಗೆ ಗೌರವ ಸಲ್ಲಿಸಿದ್ದಾರೆ. 

ತಮಿಳುನಾಡಿನ ಮೆಟ್ಟೂರು ಸಮೀಪದ ಮೂಲೆಕಾಡಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮೀ ಪಾಲ್ಗೊಂಡಿದ್ದು, ಸಾವಿರಾರು ಮಂದಿಗೆ ಅನ್ನದಾನ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. 

ತಮ್ಮ ಪತಿಯ ಪುಣ್ಯ ತಿಥಿ ಕಾರ್ಯಕ್ರಮವನ್ನು ಆರಂಭದ ವರ್ಷದಲ್ಲಿ ಮಾಡುತ್ತಿದ್ದಾಗ, ಅವರನ್ನು ಇಷ್ಟ ಪಡುತ್ತಿದ್ದ ಜನ, ಅಭಿಮಾನಿಗಳು ಬರಲು ಹೆದರುತ್ತಿದ್ದರು. ಆದರೀಗ ಮುಕ್ತವಾಗಿ ಬರುತ್ತಿದ್ದಾರೆ. ಅವರೆಲ್ಲರನ್ನೂ ಉಪಚರಿಸುವ ಸಲುವಾಗಿ ಅನ್ನದಾನ ನಡೆಸಲಾಗುತ್ತಿದೆ ಎಂದು ಮುತ್ತು ಲಕ್ಷ್ಮೀ ತಿಳಿಸಿದ್ದಾರೆ. 

ಕರ್ನಾಟಕ ಹಾಗೂ ತಮಿಳುನಾಡು ಅರಣ್ಯದಲ್ಲಿ ದಂತಕ್ಕಾಗಿ ಸಾಕಷ್ಟು ಆನೆಗಳನ್ನು ಕೊಂದಿದ್ದ ವೀರಪ್ಪನ್, ತನ್ನ ವಿರುದ್ಧ ಕಾರ್ಯಾಚರಣೆಯಲ್ಲಿ ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಕಾರಿಗಳು, ಸಿಬ್ಬಂದಿಯನ್ನು ಕೂಡ ಹತ್ಯೆ ಮಾಡಿದ್ದ. 

ಅಂತಿಮವಾಗಿ 2004ರ ಅ.18 ರಂದು ರಾಜ್ಯದ ಗಡಿ ಭಾಗವಾದ ಪಾಪರುಪತ್ತಿ ಎಂಬಲ್ಲಿ ಯೋಧರ ಗುಂಡಿಗೆ ಬಲಿಯಾಗಿದ್ದ. ರಾಜ್ಯದ 120ಕ್ಕೂ ಹೆಚ್ಚು ಮಂದಿಯನ್ನು ಕೊಂದಿದ್ದ ನರಹಂತಕ ವೀರಪ್ಪನ್ ಮಲೆಮಹದೇಶ್ವರ ಬೆಟ್ಟದ ತಪ್ಪಲು ಮತ್ತು ಗೋಪಿನಾಥಂ, ಆಲಂಬಾಡಿ ಜನರು ಭಯದಿಂದ ಬದುಕುವ ವಾತಾವರಣ ನಿರ್ಮಿಸಿದ್ದ. 

ಅಲ್ಲದೇ ಡಾ.ರಾಜ್‍ಕುಮಾರ್ ಅವರನ್ನು ಅಪಹರಿಸಿ, 108 ದಿನಗಳ ಕಾಲ ಕಾಡಿದ್ದ. ನಂತರದಲ್ಲಿ ಮಾಜಿ ಶಾಸಕ ನಾಗಪ್ಪ ಅಪಹರಿಸಿ ಚಂಗಡಿ ಅರಣ್ಯ ಪ್ರದೇಶದಲ್ಲಿದ್ದರಿಸಿದ್ದ ಇದೇ ವೇಳೆ ನಾಗಪ್ಪ ನಿಗೂಢ ರೀತಿಯಲ್ಲಿ ಹತ್ಯೆಯಾಗಿದ್ದರು. 

ಇಂತಹ ಕುಖ್ಯಾತಿ ಪಡೆದಿದ್ದ ಹಂತಕನಿಗೆ, ಆತ ಮೃತನಾದ ನಂತರವೂ ತಮಿಳುನಾಡಿನಲ್ಲಿ ಆತನನ್ನು ವೀರನೆಂದು ಹೇಳುವ ಅಭಿಮಾನಿಗಳಿರುವುದು ವಿಪರ್ಯಾಸ.

See also  ಆತ್ಮಲಿಂಗ ದರ್ಶನಕ್ಕೆ ದೇಶದ ಗಡಿ ಕಾಯುವ ಸೈನಿಕರಿಗೆ ನೇರ ಪ್ರವೇಶ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು