News Kannada
Tuesday, December 06 2022

ಕರ್ನಾಟಕ

ಈಜುಕೊಳದಲ್ಲಿ ಮುಳುಗಿ ಭಟ್ಕಳದ ಬಾಲಕ ದುಬೈನಲ್ಲಿ ಸಾವು

Photo Credit :

ಈಜುಕೊಳದಲ್ಲಿ ಮುಳುಗಿ ಭಟ್ಕಳದ ಬಾಲಕ ದುಬೈನಲ್ಲಿ ಸಾವು

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮೂಲದ ದುಬೈ ವಾಸಿ ಬಾಲಕನೊಬ್ಬ ಈಜು ಕೊಳದಲ್ಲಿ ಮುಳುಗಿ ಮೃತಪಟ್ಟ ಘಟನೆ ಸಂಭವಿಸಿದೆ. ಮೃತ ಬಾಲಕನನ್ನು ಮುಹಮ್ಮದ್ ಶಾಬಂದ್ರಿ ಬಿನ್ ಮುಹಮ್ಮದ್ ಆಸೀಮ್ ಶಾಬಂದ್ರಿ(5) ಎಂದು ಗುರುತಿಸಲಾಗಿದೆ.

ದುಬೈನ ಅಲ್ ಗರೀರ್ ಕಟ್ಟಡದ ಮೂರನೇ ಅಂತಸ್ತಿನಲ್ಲಿರುವ ಮಕ್ಕಳ ಈಜು ಕೊಳದಲ್ಲಿ ಇತರ ಮಕ್ಕಳೊಂದಿಗೆ ಈಜುತ್ತಿದ್ದ ಎನ್ನಲಾಗಿದ್ದು ಪಕ್ಕದಲ್ಲಿ ಹಿರಿಯ ಈಜುಕೊಳವು ಇದ್ದು ಅಲ್ಲಿ ಐದಾರು ಮಂದಿ ಯುವಕರು ಈಜುತ್ತಿದ್ದರು ಎಂದು ಹೇಳಲಾಗಿದೆ. ಆದರೆ ಅಕಸ್ಮಿಕವಾಗಿ ಮಗು ಹಿರಿಯರ ಕೊಳದಲ್ಲಿ ಬಂದು ಸೇರಿಕೊಂಡಿರುವುದು ಯಾರ ಗಮನಕ್ಕೆ ಬಾರದೆ ಇರುವುದರಿಂದ ಈ ದುರಂತ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಭಟ್ಕಳ ದುಬೈ ಜಮಾತಿನ ಮಾಜಿ ಪ್ರಧಾನ ಕಾರ್ಯದರ್ಶಿ ಜೈಲಾನಿ ಶಾಬಂದ್ರಿ, ಸರ್ಫರಾಜ್ ಜುಕಾಕೋ, ಆಫಾಖ್ ನಾಯ್ತೆ, ಇಮ್ರಾನ್ ಖತೀಬ್ ಮತ್ತಿತರ ಭಟ್ಕಳ ದುಬೈ ಜಮಾತ್ ಸದಸ್ಯರು ಆಸ್ಪತ್ರೆಗೆ ತೆರಳಿ ಬಾಲಕ ಮೃತ ದೇಹ ಪಡೆಯಲು ಕಾನೂನು ಕ್ರಮಗಳನ್ನು ಕೈಗೊಂದಿರುವುದು ತಿಳಿದುಬಂದಿದೆ.

ಮೃತ ಬಾಲಕ ಮುಹಮ್ಮದ್ ಶಾಬಂದ್ರಿ ದುಬೈ ನ ಸೆಂಟ್ರಲ್ ಸ್ಕೂಲ್ ನಲ್ಲಿ ಕೆ.ಜಿ ತರಗತಿಯಲ್ಲಿ ಓದುತ್ತಿದ್ದನು ಎಂದು ತಿಳಿದುಬಂದಿದ್ದು ಬಾಲಕನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ದುಬೈ ಮತ್ತು ಯುಎಇ ಯಲ್ಲಿ ವಾಸಿಸುತ್ತಿರುವ ಭಟ್ಕಳಿ ಸಮುದಾಯ ಬಾಲಕ ಮನೆಗೆ ತೆರಳಿ ಅವರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ.

 

See also  ಮೀನುಗಾರಿಕಾ ಬೋಟ್ ಗಳಲ್ಲಿ ದುಡಿಯಲು ಬಂದ ಪ.ಬಂಗಾಳದ ಕಾರ್ಮಿಕರು‌ ಅತಂತ್ರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು