News Kannada
Tuesday, October 04 2022

ಕರ್ನಾಟಕ

ಬಂಡೀಪುರ ವ್ಯಾಪ್ತಿಯಲ್ಲಿ ತಮಿಳುನಾಡಿನ ಪುಂಡಾನೆಯ ದಾಂಧಲೆ - 1 min read

Photo Credit :

ಬಂಡೀಪುರ ವ್ಯಾಪ್ತಿಯಲ್ಲಿ ತಮಿಳುನಾಡಿನ ಪುಂಡಾನೆಯ ದಾಂಧಲೆ

ಚಾಮರಾಜನಗರ: ತಮಿಳುನಾಡಿನ ಅರಣ್ಯ ಇಲಾಖೆ ಸೆರೆಹಿಡಿದು ರೇಡಿಯೋ ಕಾಲರ್ ಅಳವಡಿಸಿದ್ದ ಪುಂಡಾನೆಯೊಂದು ಬಂಡೀಪುರ ಹುಲಿ ಯೋಜನೆಯ ಕಾಡಂಚಿನ ಗ್ರಾಮಗಳಿಗೆ ಧಾವಿಸಿ ಏಕಾಏಕಿ ದಾಳಿ ನಡೆಸಿದ್ದರಿಂದ ಇಬ್ಬರು ರೈತರು ಗಂಭೀರ ಗಾಯಗೊಂಡಿದ್ದರೆ, ಮೂರು ಹಸುಗಳು ಸಾವಿಗೀಡಾಗಿದ್ದು ಕಾಡಿಗೆ ಅಟ್ಟುವ ಕಾರ್ಯಾಚರಣೆ ನಡೆಯುತ್ತಿದೆ.

ಹುಂಡೀಪುರ, ಶಿವಪುರ ಮಾರ್ಗವಾಗಿ ಸ್ಕಂದಗಿರಿ ಪಾರ್ವತಾಂಬಾ ಬೆಟ್ಟದತ್ತ ಆಗಮಿಸಿದ ಪುಂಡಾನೆ ಕೋಡಹಳ್ಳಿ ಸಮೀಪದ ರವಿ ಎಂಬುವರ ಜಮೀನಿನ ಬಳಿ ಸಾಗುವಾಗ ಕಲ್ಲುಕಟ್ಟೆ ಕೆರೆಯಂಗಳದಲ್ಲಿ ನಿಂತ ಆನೆಯನ್ನು ನೋಡಿದ ಸಾರ್ವಜನಿಕರು ಅದರ ಕೊರಳಲ್ಲಿನ ಪಟ್ಟಿಯನ್ನು ನೋಡಿ ಸಾಕಾನೆ ಎಂದು ಭಾವಿಸಿ ಹತ್ತಿರ ಹೋಗಿದ್ದಾರೆ. ಜನರ ಗದ್ದಲದಿಂದ ರೊಚ್ಚಿಗೆದ್ದ ಆನೆ ಸಮೀಪದಲ್ಲಿದ್ದ ಹಸುವನ್ನು ತಿವಿದು ಸಾಯಿಸಿದೆ. ನಂತರ ಶಿವಪುರ ಗ್ರಾಮದ ಸಿದ್ದಯ್ಯ(60) ಎಂಬುವರನ್ನು ಎತ್ತಿ ಬಿಸಾಡಿದೆ. ಇದರಿಂದ ಅವರು ಗಂಭೀರ ಗಾಯಗೊಂಡಿದ್ದು, ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಆ ನಂತರ ಹಂಗಳ ಗ್ರಾಮದ ಕೆರೆಯತ್ತ ಧಾವಿಸಿ ನೀರಿಗಿಳಿದಾಗ ಆನೆಯನ್ನು ನೋಡಲು ಮುಗಿಬಿದ್ದ ಜನರತ್ತ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ತಾಲೂಕಿನ ಆಲತ್ತೂರು ಗ್ರಾಮದ ಸ್ವಾಮಿ(30) ಎಂಬುವರನ್ನು ಎತ್ತಿ ಬಿಸಾಡಿ ತೀವ್ರ ಗಾಯಗೊಳಿಸಿದೆ. ಗಾಯಗೊಂಡ ಸ್ವಾಮಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಆನೆ 8 ಜನರನ್ನು ಕೊಂದಿದ್ದು ಹೀಗಾಗಿ ಈ ಆನೆಯನ್ನು ತಮಿಳುನಾಡಿನ ಅರಣ್ಯ ಇಲಾಖೆ ಕೂಂಬಿಂಗ್ ನಡೆಸಿ ರೇಡಿಯೋ ಕಾಲರ್ ಅಳವಡಿಸಿತ್ತು. ಮಧುಮಲೈ ಪ್ರದೇಶದಲ್ಲಿದ್ದ ಆನೆ ಗ್ರಾಮಗಳತ್ತ ಆಗಮಿಸಿ ಜನರು ಹಾಗೂ ಜಾನುವಾರುಗಳ ಮೇಲೆ ದಾಳಿ ಮಾಡಿರುವುದು ಆತಂಕ ತಂದಿದೆ.

ಪುಂಡಾನೆಗೆ ಅರಿವಳಿಕೆ ನೀಡಿ ಸೆರೆ ಹಿಡಿಯಲು ನಾಗರಹೊಳೆಯಿಂದ ಸಾಕಾನೆಗಳನ್ನು ಕರೆಯಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

See also  ಸಿಎನ್ ಸಿ ನಾಚಪ್ಪ ವಿರುದ್ಧ ಗುಡುಗಿದ ಎಕೆಎಸ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು