News Kannada
Saturday, October 01 2022

ಕರ್ನಾಟಕ

ಕೆ.ಆರ್. ಪೇಟೆಯಲ್ಲಿ ವರುಣನ ಆರ್ಭಟಕ್ಕೆ ನಲುಗಿದ ಜನ - 1 min read

Photo Credit :

ಕೆ.ಆರ್. ಪೇಟೆಯಲ್ಲಿ ವರುಣನ ಆರ್ಭಟಕ್ಕೆ ನಲುಗಿದ ಜನ

ಮಂಡ್ಯ: ಕಳೆದ ಕೆಲವು ವರ್ಷಗಳಿಂದ ಅನಾವೃಷ್ಠಿಯಿಂದ ತೊಂದರೆ ಅನುಭವಿಸಿದ್ದ ಜಿಲ್ಲೆಯಲ್ಲಿ ಇದೀಗ ಅತಿವೃಷ್ಠಿಯಿಂದ ಜನ ಜಾನುವಾರು ಪರದಾಡುವಂತಾಗಿದೆ. ಈ  ನಡುವೆ ಹಲವೆಡೆ ಮಳೆಯಾಗುತ್ತಿದ್ದರೂ ಕೆ.ಆರ್.ಪೇಟೆ ತಾಲೂಕಿನಾದ್ಯಂತ ಸುರಿದ ಭಾರೀ ಮಳೆಯಿಂದಾಗಿ ರಾಯಸಮುದ್ರ ಬಳಿಯ ಸೂಜಿಗಲ್ಲುಗುಡ್ಡದ ಕೆರೆ ಕೋಡಿಯು ಒಡೆದು ಸಿಂದಘಟ್ಟ ಗ್ರಾಮದ ದೊಡ್ಡಕೆರೆಗೆ ಭಾರೀ ಪ್ರಮಾಣದಲ್ಲಿ ನೀರು ನುಗ್ಗಿದ ಪರಿಣಾಮವಾಗಿ ಕೆರೆಯ ಏರಿ ಒಡೆದು ಭಾರೀ ಅನಾಹುತವನ್ನು ಸೃಷ್ಠಿ ಮಾಡಿದೆ. ಜತೆಗೆ ಗೋಡೆ ಕುಸಿದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆಯೂ ನಡೆದಿದೆ.

ಸುಮಾರು ಒಂದೂವರೆ ದಶಕದ ಬಳಿಕ ಕುಂಭದ್ರೋಣ ಮಳೆ ಸುರಿದಿದ್ದು ಎಲ್ಲೆಡೆಯೂ ಜಲಾವೃತವಾಗಿದ್ದು, ಜನ ಭಯದಿಂದ ಬದುಕುವಂತಾಗಿದೆ. ಪುರಾಣ ಪ್ರಸಿದ್ಧವಾದ ಶರಣ ಶ್ರದ್ಧಾಕೇಂದ್ರ ಕಾಪನಹಳ್ಳಿಯ ಗವಿಮಠದೊಳಕ್ಕೆ ಹೊಸಹೊಳಲು ದೊಡ್ಡಕೆರೆಯಿಂದ ಪ್ರವಾಹದಂತೆ ಹರಿದುಬಂದ ನೀರು ಗದ್ದುಗೆಯೊಳಕ್ಕೆ ಹಾಗೂ ಶ್ರೀಮಠದೊಳಕ್ಕೆ ನುಗ್ಗಿದ ಕಾರಣ ಇಲ್ಲಿನ ಶ್ರೀಸ್ವತಂತ್ರಚನ್ನವೀರಯ್ಯಶ್ರೀಗಳು ಪ್ರಾಣ ರಕ್ಷಣೆಗಾಗಿ ಮಠದಿಂದ ಸುರಕ್ಷಿತ ಸ್ಥಳಕ್ಕೆ ತೆರಳಿದರೆ ಸ್ವತಂತ್ರಸಿದ್ಧಲಿಂಗೇಶ್ವರರ ಗದ್ದುಗೆಯೊಳಕ್ಕೆ ನೀರು ನುಗ್ಗಿದ್ದು ಗದ್ದುಗೆಯು ಭಾಗಶಃ ಮುಳುಗಿತ್ತು.

ಭಾರೀ ಮಳೆಯಿಂದಾಗಿ ತಾಲೂಕಿನ ಗಂಜಿಗೆರೆ ಗ್ರಾಮದ ಹರಿಜನ ಕಾಲೋನಿಯಲ್ಲಿ ಮನೆಯ ಗೋಡೆಯು ಕುಸಿದು ಬಿದ್ದು ಮನೆಯೊಳಗೆ ಮಲಗಿದ್ದ ಕುಮಾರ(45) ಮಣ್ಣಿನ ರಾಶಿಯೊಳಗೆ ಸಿಕ್ಕಿ ಸಾವನ್ನಪ್ಪಿದ್ದಾರೆ.

ಮಳೆಯ ಆರ್ಭಟವು ನಿರಂತರವಾಗಿ ಮುಂದುವರೆದಿರುವುದರಿಂದ ತಾಲೂಕಿನಲ್ಲಿ ನೀರಿನ ಹರಿವು ಹಾಗೂ ಪ್ರವಾಹ ಪರಿಸ್ಥಿತಿಯು ಭಾಗಶಃ ನಿಯಂತ್ರಣಕ್ಕೆ ಬಂದಿದ್ದರೂ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್‍ಇನ್ಸ್ ಪೆಕ್ಟರ್ ಲಕ್ಷ್ಮಣ ಅವರು ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ್ ಅವರ ಮಾರ್ಗದರ್ಶನದಲ್ಲಿ ನೆರೆಪೀಡಿತ ಪ್ರದೇಶಗಳು ಹಾಗೂ ನೀರಿನ ಭಾರೀ ಹರಿವಿನ ಪ್ರದೇಶಗಳಲ್ಲಿ ಪೋಲಿಸ್ ಭದ್ರತೆಯನ್ನು ಒದಗಿಸಿ ಕಟ್ಟೆಚ್ಚರ ವಹಿಸಿದ್ದಾರೆ.

See also  ಕಾಡಾನೆಯಿಂದ ಹಿಮವದ್ ಗೋಪಾಲಸ್ವಾಮಿಗೆ ದಿನಲೂ ವಿಶೇಷ ಪೂಜೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು