News Kannada
Tuesday, September 27 2022

ಕರ್ನಾಟಕ

ಮಾದಾಪಟ್ಟಣದಲ್ಲಿ ಜಮೀನಿಗೆ ಹೋಗಿದ್ದ ರೈತ ಚಿರತೆ ದಾಳಿಗೆ ಬಲಿ - 1 min read

Photo Credit :

ಮಾದಾಪಟ್ಟಣದಲ್ಲಿ ಜಮೀನಿಗೆ ಹೋಗಿದ್ದ ರೈತ ಚಿರತೆ ದಾಳಿಗೆ ಬಲಿ

ಚಾಮರಾಜನಗರ: ಸಮೀಪದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದು ರೈತನ ಮೇಲೆ ಚಿರತೆ ದಾಳಿ ಮಾಡಿ ಕೊಂದು ಮುಖವನ್ನು ಗುರುತುಸಿಗದಂತೆ ತಿಂದು ಹಾಕಿರುವ ಘಟನೆ ಗುಂಡ್ಲುಪೇಟೆ ತಾಲೂಕು ಬೇಗೂರು ಸಮೀಪದ ಮಾದಾಪಟ್ಟಣ ಗ್ರಾಮದಲ್ಲಿ ನಡೆದಿದೆ.

ಜಿಲ್ಲೆಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಕಾಡು ಪ್ರಾಣಿಗಳು ಮನುಷ್ಯನ ಮೇಲೆ ದಾಳಿ ಮಾಡುತ್ತಿದ್ದು, ಇವುಗಳ ಉಪಟಳದಿಂದಾಗಿ ಭಯದಿಂದಲೇ ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಬುಧವಾರ ಗುಂಡ್ಲುಪೇಟೆ ತಾಲೂಕಿನ ಮಾದಾಪಟ್ಟಣ ಜಮೀನಿನಲ್ಲಿ ಮುಖದ ಗುರುತು ಪತ್ತೆಯಾಗದ ಶವವೊಂದು ಪತ್ತೆಯಾಗಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು. ವಿಷಯ ತಿಳಿದ ಸುತ್ತಮುತ್ತಲಿನ ಗ್ರಾಮಗಳ ಜನರು ಆಗಮಿಸಿ ಮೃತರನ್ನು ಮಾದಾಪಟ್ಟಣ ಗ್ರಾಮದ ತಮ್ಮಯ್ಯ ಶೆಟ್ಟಿ(61) ಎಂದು ಗುರುತಿಸಿದ್ದರು. ಮೃತದೇಹದ ಸಮೀಪದಲ್ಲಿ ಚಿರತೆಯ ಹೆಜ್ಜೆಗುರುತು ಪತ್ತೆಯಾಗಿದ್ದು ಚಿರತೆಯೇ ದಾಳಿ ಮಾಡಿ ಸಾಯಿಸಿರಬಹುದು ಎಂದು ಹೇಳಲಾಗಿದೆ.

ಗ್ರಾಮದಲ್ಲಿಯೇ ಇದ್ದ ಮೃತ ತಮ್ಮಯ್ಯ ಶೆಟ್ಟಿ ತಮ್ಮ ಜಮೀನಿನತ್ತ ಹೋಗಿದ್ದಾಗ ಈ ಘಟನೆ ನಡೆದಿರಬಹುದು ಎಂದು ಹೇಳಲಾಗುತ್ತಿದೆ. ಗ್ರಾಮಸ್ಥರು ಬಟ್ಟೆ ಹಾಗೂ ಚಪ್ಪಲಿಗಳಿಂದ ಮೃತ ವ್ಯಕ್ತಿ ತಮ್ಮಯ್ಯ ಶೆಟ್ಟಿ ಎಂದು ಗುರುತಿಸಿದ್ದಾರೆ. ಈ ಸಂಬಂಧ ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

See also  ರಾಜ್ಯ ಸರಕಾರದ ವೈಫಲ್ಯಕ್ಕೆ ಖಂಡನೆ : ಬಿಜೆಪಿಯಿಂದ ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು