News Kannada
Sunday, September 25 2022

ಕರ್ನಾಟಕ

ಚಾಮರಾಜನಗರದಲ್ಲಿ ಪುಂಡಾನೆಯ ಸೆರೆಗಾಗಿ ಮುಂದುವರೆದ ಹುಡುಕಾಟ - 1 min read

Photo Credit :

ಚಾಮರಾಜನಗರದಲ್ಲಿ ಪುಂಡಾನೆಯ ಸೆರೆಗಾಗಿ ಮುಂದುವರೆದ ಹುಡುಕಾಟ

ಚಾಮರಾಜನಗರ: ತಮಿಳುನಾಡು ಅರಣ್ಯದಿಂದ ದಾರಿ ತಪ್ಪಿ ಚಾಮರಾಜನಗರ ಜಿಲ್ಲೆಗೆ ಬಂದಿರುವ ಪುಂಡಾನೆ ಎಲ್ಲೆಂದರಲ್ಲಿ ಅಲೆದಾಡುತ್ತಾ ಭಯ ಹುಟ್ಟಿಸಿದ್ದು, ಇದರ ಸೆರೆಗಾಗಿ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿದ್ದರೆ, ಮತ್ತೊಂದೆಡೆ ಅದರ ಜಾಡು ಹುಡುಕುವುದೇ ಕಷ್ಟವಾಗಿದೆ.

ಹೀಗಾಗಿ ಕಣ್ಣೆದುರೇ ಇದ್ದ ಪುಂಡಾನೆಯನ್ನು ಸೆರೆಹಿಡಿಯದೆ ಹೆಜ್ಜೆಜಾಡು ಹಿಡಿದು ಹುಡುಕುತ್ತಿರುವ ಅರಣ್ಯ ಇಲಾಖೆಯ ನಡೆ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡುವೆ ಕಾರ್ಯಾಚರಣೆಯಲ್ಲಿ ಯಾವುದೇ  ಪ್ರಗತಿ ಕಾಣದ ಅರಣ್ಯ ಇಲಾಖೆ ಆನೆಯನ್ನು ಕಂಡರೆ ಕೂಡಲೇ ತಿಳಿಸುವಂತೆ ಜನರಲ್ಲಿ ಮನವಿ ಮಾಡಿ ಕೊಂಡಿದೆ. 

ಮಂಗಳವಾರ ಮಧ್ಯಾಹ್ನ ಹಂಗಳ ಕೆರೆಯಲ್ಲಿ ನೀರು ಕುಡಿದು ಸಂಜೆ ವೇಳೆಗೆ ಗ್ರಾಮದ ಬಸವೇಶ ಎಂಬುವರ ಬಾಳೆತೋಟದಲ್ಲಿದ್ದ ಆನೆಯ ಚಲನವಲನ ಗಮನಿಸದೆ ನಿರ್ಲಕ್ಷಿಸಿದ ಪರಿಣಾಮ ಇಡೀ ದಿನ ಹೆಜ್ಜೆಯ ಗುರುತು ಆಧರಿಸಿ ಹುಡುಕಾಟ ನಡೆಸಿದರೂ ಉಪಯೋಗವಾಗಿಲ್ಲ.

 ಬೆಳಗ್ಗೆ ಪಾರ್ವತಾಂಬ ಬೆಟ್ಟ, ತೆರಕಣಾಂಬಿ ಗುಡ್ಡದತ್ತ ಆಗಮಿಸಿದೆ ಎಂಬ ಮಾಹಿತಿ ಮೇರೆಗೆ ಇಡೀ ಪ್ರದೇಶವನ್ನು ಜಾಲಾಡಿದರು. ಪುಂಡಾನೆಯನ್ನು ಪತ್ತೆಹಚ್ಚಲು ಸಿಬ್ಬಂದಿ ಶ್ರಮಪಡುತ್ತಿದ್ದುದನ್ನು ಕಂಡ ಸಾರ್ವಜನಿಕರು ಹುಲಿಯಾದರೆ ಪತ್ತೆಹಚ್ಚುವುದು ಕಷ್ಟವಾಗುತ್ತದೆ. ಮಂಗಳವಾರ ಇಡೀ ದಿನ ರಾಜಾರೋಶವಾಗಿ ಓಡಾಡುತ್ತಿದ್ದಾಗ ಪುಂಡಾನೆಗೆ ಅರಿವಳಿಕೆ ನೀಡದೆ ನಿರ್ಲಕ್ಷಿಸಿದ ಬಗ್ಗೆ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

 ಪುಂಡಾನೆ ಬಹುಶಃ ಪೆÇದೆಗಳಲ್ಲಿ ಅಡಗಿರಬಹುದು ಎಂದು ಭಾವಿಸಿದ ಅರಣ್ಯ ಇಲಾಖೆ ಶಿವಪುರ, ಹಂಗಳ, ಕೋಡಹಳ್ಳಿ, ಕಂದೇಗಾಲ, ಕೊಡಸೋಗೆ, ಶೀಲವಂತಪುರ, ತೆರಕಣಾಂಬಿ ಸುತ್ತಲಿನ ಗುಡ್ಡದ ಅಂಚುಗಳಲ್ಲಿ 6 ವಾಹನಗಳು ಹಾಗೂ 30 ಸಿಬ್ಬಂದಿಗಳು ಗಸ್ತು ನಡೆಸುತ್ತಿದ್ದು, ಯಾವುದೇ ಗ್ರಾಮಗಳಲ್ಲಿ ಆನೆ ಕಾಣಿಸಿಕೊಂಡರೆ ಕೂಡಲೇ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

See also  ಅಂಕೋಲಾ ತಾಲೂಕಿನಲ್ಲಿ ವಿಶಿಷ್ಟ ಯುಗಾದಿ ಆಚರಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು