News Kannada
Wednesday, October 05 2022

ಕರ್ನಾಟಕ

ಬೆಳ್ತಂಗಡಿ: ಕುಸಿಯುವ ಹಂತದ ಗುಡಿಸಲಿಲ್ಲ 7 ವರ್ಷಗಳಿಂದ ಮಾನಸಿಕ ಅಸ್ವಸ್ಥ ವಾಸ - 1 min read

Photo Credit :

ಬೆಳ್ತಂಗಡಿ:  ಕುಸಿಯುವ ಹಂತದ ಗುಡಿಸಲಿಲ್ಲ 7 ವರ್ಷಗಳಿಂದ ಮಾನಸಿಕ ಅಸ್ವಸ್ಥ ವಾಸ

ಬೆಳ್ತಂಗಡಿ: ಬಡವರಿಗಾಗಿ ಸರಕಾರಗಳು ಅದೆಷ್ಟೋ ಯೋಜನೆಗಳನ್ನು ತಂದಿದೆ ಮತ್ತು ತರುತ್ತಿದೆ. ಆ ಯೋಜನೆಗಳು ಸಮರ್ಪಕವಾಗಿ ತಲುಪುತ್ತಿಲ್ಲ ಎಂಬುದಕ್ಕೆ ಇಲ್ಲೊಂದು ನಿರ್ದಶನವಿದೆ.

ಇಂದೋ ನಾಳೆಯೋ ಕುಸಿಯುವ ಹಂತದಲ್ಲಿರುವ ಗುಡಿಸಲು , ಕೇವಲ ಒಂದೇ ಒಂದು ಕೋಣೆ. ಕೋಣೆ ತುಂಬಾ ಕೆಸರು ಆ ಗುಡಿಸಲಿಗೆ ತೆಂಗಿನ ಗರಿಯ ಹೊದಿಕೆ. ಅದರಲ್ಲಿ ಸನ್ಯಾಸಿಯಂತೆ ಗಡ್ಡ, ಕೂದಲು ಬಿಟ್ಟ ವ್ಯಕ್ತಿಯೊಬ್ಬ ಅತ್ಯಂತ ಹೀನ ಸ್ಥಿತಿಯಲ್ಲಿದ್ದಾನೆ. .

ಇದು ಯಾವುದೇ ಸಿನಿಮಾ, ಕಥೆ ಕಾದಂಬರಿಯ ವಿವರಣೆಯಲ್ಲ. ಬದಲಾಗಿ ಸವಣಾಲು ಗ್ರಾಮದ ಹಿರಿಯಾಜೆ ಲಕ್ಷ್ಮಿಬೆಟ್ಟು ಎಂಬಲ್ಲಿ ದಲಿತ ಸಮುದಾಯಕ್ಕೆ ಸೇರಿದ ಸುರೇಶ ಎಂಬವರ ಬದುಕಿನ ನೈಜ ಚಿತ್ರಣ. ಇವರಿಗೆ ಸರಿಸುಮಾರು 40 ವರ್ಷ ಆಗಿರಬಹುದು. ಮದುವೆಯಾಗಿ ಹೆಂಡತಿ, 3 ಮಕ್ಕಳೊಂದಿಗೆ ನೆಮ್ಮದಿಯಾಗಿದ್ದರು. ಸುರೇಶ್ ಯಾವುದೋ ಕಾರಣದಿಂದಾಗಿ ಮಾನಸಿಕ ಖಿನ್ನತೆಗೊಳಗಾದಾಗ ಅವರ ಹೆಂಡತಿ ಮಕ್ಕಳೊಂದಿಗೆ ಸಮೀಪದ ಗ್ರಾಮದ ತವರು ಮನೆ ಸೇರಿದರು.

ಹೀಗಾಗಿ ಕಳೆದ ಏಳೆಂಟು ವರ್ಷಗಳಿಂದ ಸುರೇಶ್ ಅವರದು ಒಬ್ಬಂಟಿ ಬದುಕು. ಅದು ಯಾವುದೇ ಜೀವಂತವಾಗಿರುವ ಮನುಷ್ಯ ವಾಸಿಸಲು ಅಯೋಗ್ಯವಾದ ಗುಡಿಸಲಿನಲ್ಲಿ. ಆ ಗುಡಿಸಲಿನ ಸುತ್ತಮುತ್ತಲು ಕೆಸು ಸೇರಿದಂತೆ ಎತ್ತರವಾಗಿ ಬೆಳೆದು ನಿಂತಿರುವ ಗಿಡಗಂಟಿಗಳು. ಯಾವುದೇ ಸರಿಸೃಪಗಳು ಮನೆಯೊಳಗೆ ಸೇರಿದರೂ ಗೊತ್ತಾಗದ ರೀತಿಯ ಜೀವನ ಈ ಸುರೇಶ್ ಅವರದು.

ಇವರ ಈ ಗುಡಿಸಲು ಸರ್ಕಾರಿ ಜಮೀನಿನಲ್ಲಿದ್ದು , ಜಮೀನಿನ ಯಾವುದೇ ರೀತಿಯ ದಾಖಲೆಗಳಿಲ್ಲ. ಪಡಿತರ ಚೀಟಿ , ಆಧಾರ್ ಕಾರ್ಡ್, ಚುನಾವಣಾ ಗುರುತು ಚೀಟಿ ಯಾವುದೂ ಇವರ ಬಳಿ ಇಲ್ಲ. ಮಾನಸಿಕ ಖಿನ್ನತೆಗೆ ಸೂಕ್ತ ಚಿಕಿತ್ಸೆ ಮಾಡಲು ಹಣಕಾಸಿನ ಸಮಸ್ಯೆಯಿದೆ.

ದಲಿತ ಸಮುದಾಯದ ಅಭಿವೃದ್ಧಿಗಾಗಿ ಕೋಟ್ಯಂತರ ರೂಪಾಯಿ ಸರ್ಕಾರ ಮೀಸಲಿಡುತ್ತಿದ್ದರೂ , ಸುರೇಶ್ ಅವರಂತೆಯೇ ಜೀವಿಸುತ್ತಿರುವವರ ಪಾಲಿಗೆ ಮಾತ್ರ ಗಗನ ಕುಸುಮವಾಗಿದೆ. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಶೇಕಡಾ 25 ರಷ್ಟು ಅನುದಾನ ಮೀಸಲಿಟ್ಟರೂ ಅದು ಸುರೇಶ್ ಅವರಂತಹ ಅರ್ಹರಿಗೆ ಸಿಗದೆ ವ್ಯರ್ಥವಾಗುತ್ತಿರುವುದು ದುರಂತವಾಗಿದೆ.

ಸುರೇಶ್ ಅವರ ಗುಡಿಸಲಿಗೆ ಬುಧವಾರ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಕೆ.ಇ ಜಯರಾಂ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮೇಲಂತಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ನಳಿನಿ , ಸಾಮಾಜಿಕ ಕಾರ್ಯಕರ್ತ ರಾಜೇಶ್ ಭಟ್ ಸವಣಾಲು , ನ್ಯಾಯವಾದಿ ಕಿರಣ್ ಕುಮಾರ್ , ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ತಾಲೂಕು ಪ್ರಧಾನ ಕಾರ್ಯದರ್ಶಿ ಜಯಾನಂದ ಪಿಲಿಕಲ , ಜಿಲ್ಲಾ ಸಹ ಸಂಚಾಲಕ ಶೇಖರ್ ಎಲ್ , ದಸಂಸ (ಅಂಬೇಡ್ಕರ್ ವಾದ) ದ ಗ್ರಾಮ ಸಮಿತಿ ಸಂಚಾಲಕ ಚಂದ್ರಶೇಖರ ನೇರಮೆ ಈ ಸಂದರ್ಭ ಜೊತೆಗಿದ್ದರು.

*ಮಾನವೀಯ ನೆಲೆಯಲ್ಲಿ ಸೂಕ್ತ ದಾಖಲೆಗಳನ್ನು ಮಾಡಿಕೊಟ್ಟು , ಬೆಚ್ಚಗಿನ ನೆಲೆಯನ್ನು ಕಟ್ಟಿ ಕೊಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು*

ಕೆ.ಇ ಜಯರಾಂ
ಕಾರ್ಯನಿರ್ವಾಹಣಾಧಿಕಾರಿ ತಾ.ಪಂ. ಬೆಳ್ತಂಗಡಿ
ಫೊಟೊಗಳು ಜೊತೆಗಿವೆ

 

See also  ಮುಂದುವರಿದ ಬಾಲಕಿ ಕಾವೇರಿ ರಕ್ಷಣಾ ಕಾರ್ಯಾಚರಣೆ: ಜಮೀನು ಮಾಲೀಕ ಪರಾರಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು