ಶಿವಮೊಗ್ಗ: ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಮಳೆಯ ಅನಾಹುತಕ್ಕೆ ವೃದ್ಧನೋರ್ವ ಸಾವನ್ನಪ್ಪಿದ ಘಟನೆ ವರದಿಯಾಗಿದೆ.
ಸತತ ಮಳೆಯಿಂದ ಭದ್ರಾವತಿಯ ಅರೆಬಿಳಚಿ ಗ್ರಾಮದ ನಿವಾಸಿ ಲಕ್ಷ್ಮಣ ಎಂಬವರ ಮನೆ ಕುಸಿದು ಬಿದ್ದು ಅವರು ಅಲ್ಲೇ ಸಾವನ್ನಪ್ಪಿದ್ದಾರೆ.
ಮೃತರಿಗೆ 65 ವರ್ಷದ ವಯಸ್ಸಾಗಿದೆ. ಹೊಳೆಹೊನ್ನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಿವಮೊಗ್ಗದ 13 ನೇ ವಾರ್ಡ್ ನಲ್ಲಿ ಸುಂದರಮ್ಮ ಎಂಬುವವರ ಮನೆ ಬಿದ್ದು ಹೋಗಿದ್ದು, ಯಾವುದೇ ಪ್ರಾಣ ಹಾನಿ ಯಾಗಿರುವುದಿಲ್ಲವೆಂದು ವರದಿಯಾಗಿದೆ. ಪಾಲಿಕೆ ಸದಸ್ಯೆ ಯಮುನಾ ರಂಗೇಗೌಡ, ತಹಶೀಲ್ದಾರ್ ಬಿ.ಎನ್.ಗಿರೀಶ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪರ್ರಯಾಯ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ