ಬೆಂಗಳೂರು: ಕಾಲುವೆಗೆ ಬಿದ್ದ ತಮ್ಮನನ್ನು ಕಾಪಾಡಲು ಹೋದ ಅಣ್ಣನ್ನೂ ಸೇರಿದಂತೆ ಇಬ್ಬರೂ ನೀರುಪಾಲಾಗಿದ್ದಾರೆ. ಈ ಅವಘಡ ರೋಣ ತಾಲ್ಲೂಕಿ ಮಲವಾಡ ಹಳ್ಳಿಯಲ್ಲಿ ನಡೆದಿದೆ.
ಮೃತರನ್ನು ಕಳಸಪ್ಪ(೩೦) ಈರಣ್ಣ(೧೫) ಎಂದು ಗುರುತಿಸಲಾಗಿದ್ದು, ದೀಪಾವಳಿ ಹಬ್ಬದ ದಿನ ಮೃತರ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.ಕಾಲುವೆಯಲ್ಲಿ ಸಂಕಷ್ಟದಲ್ಲಿದ್ದ ಈರಣ್ಣನನ್ನು ಕಾಪಾಡಲು ಹೋದ ಸಹೋದರ ಕಳಸಪ್ಪನೂ ಮೇಲೆ ಬರಲಾಗದೆ ನೀರುಪಾಲಾಗಿದ್ದಾನೆ.
ಈ ಘಟನೆ ಶನಿವಾರ ಸಂಜೆ ನಡೆದಿದ್ದು, ಎನ್ ಡಿಆರ್ ಎಫ್ ತಂಡ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.