ತುಮಕೂರು: ದೀಪಾವಳಿ ಹಬ್ಬದ ದಿನ ಎಮ್ಮೆ ಮತ್ತು ಬೈಕ್ ತೊಳೆಯಲು ಹೋಗಿದ್ದ ಮಕ್ಕಳಿಬ್ಬರು ನೀರುಪಾಲಾಗಿರುವ ಘಟನೆ ಯಲಪೇನಹಳ್ಳಿಯಲ್ಲಿ ನಡೆದಿದೆ.
ಯೋಗೇಶ್(15) ಮತ್ತು ಸಿದ್ದೇಶ್(11) ಮೃತರು. ದೀಪಾವಳಿ ಹಬ್ಬದಂದು ಮೃತರ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.
ಎಮ್ಮೆಯನ್ನು ತೊಳೆಯುವ ವೇಳೆ ಅದು ಮಕ್ಕಳಿಬ್ಬರನ್ನು ಅಳವಿರುವ ಪ್ರದೇಶಕ್ಕೆ ಎಳೆದುಕೊಂಡಿದೆ. ಈ ವೇಳೆ ಉಸಿರುಗಟ್ಟಿ ಇಬ್ಬರು ಸಾವನ್ನಪ್ಪಿದ್ದಾರೆ. ಪಟ್ಟನಾಯಕನಹಳ್ಳಿ ಪೊಲೀಸರು ಮಹಜರು ಕಾರ್ಯ ನಡೆಸುತ್ತಿದ್ದಾರೆ.