ನವದೆಹಲಿ: ಗುಜರಾತ್ ನ ಏಕತಾ ಪ್ರತಿಮೆ ನೋಡಲು ಉದ್ಘಾಟನೆಯಾಗಿ ಲೋಕರ್ಪಣೆಯಾಗಿ ಒಂದು ವರ್ಷ ಕಳೆದುಹೋಗಿದ್ದು, ವರ್ಷದಲ್ಲಿ ಸುಮಾರು 26 ಲಕ್ಷ ಭೇಟಿ ನೀಡಿದ್ದಾರೆ ಎಂದು ಪ್ರಧಾನಿ ಮೋದಿ ಮಾಹಿತಿ ನೀಡಿದ್ದಾರೆ.
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಏಕತಾ ಪ್ರತಿಮೆ ದೇಶದ ಹೆಮ್ಮೆಯ ಸಂಕೇತವಾಗಿದೆ. ಒಂದು ವರ್ಷದಲ್ಲಿ ವಿಶ್ವದ ಅತೀ ದೊಡ್ಡ ಏಕತಾ ಪ್ರತಿಮೆಗೆ 26ಲಕ್ಷ ಭೇಟಿ ನೀಡಿದ್ದಾರೆ ಎಂದು ಮೋದಿ ಹೇಳಿದರು.
ಈ ಏಕತಾ ಪ್ರತಿಮೆ ಭಾರತ ಸೇರಿದಂತೆ ಇತರೆ ಪ್ರಜಾಪ್ರಭುತ್ವ ರಾಷ್ಟ್ರಗಳು ಹಾಗೂ ಪ್ರವಾಸೋದ್ಯಮ ಇಲಾಖೆಗೆ ಮಹತ್ವದ ಸಂಶೋಧನೆಯ ವಿಷಯವಾಗಬಹುದು ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.