ಬಳ್ಳಾರಿ: ಬೊಲೆರೊ ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಮೂವರು ಮೃತಪಟ್ಟ ಘಟನೆ ಜಿಲ್ಲೆಯ ಸಂಡೂರು ತಾಲೂಕಿನ ಬಾಬಯ್ಯ ಕ್ರಾಸ್ ಬಳಿ ಇಂದು ಬೆಳಿಗ್ಗೆ ನಡೆದಿದೆ.
ದುರ್ಘಟನೆಯಲ್ಲಿ ಪರಶುರಾಮ(28) ಮತ್ತು ಮನ್ಸೂರ್(30) ಗಾಯಗೊಂಡಿದ್ದು ಅವರನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರನ್ನು ಬುಸ್ಸಿ (21), ದಾದಾ ಕಲಂದರ (31), ಅಸ್ಲಂ (25) ಎಂದು ಗುರುತಿಸಲಾಗಿದೆ.
ಮೃತರು ಸಂಡೂರು ತಾಲೂಕಿನ ಯಶವಂತನಗರದ ನಿವಾಸಿಗಳು. ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.