ಕಾಸರಗೋಡು: ಬಸ್ ಬಡಿದು ಮಹಿಳೆ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ಕಾಸರಗೋಡು ನಗರದಲ್ಲಿ ನಡೆದಿದೆ.
ನಗರದ ಬ್ಯಾಂಕ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಮೃತ ಮಹಿಳೆ ೬೦ ವರ್ಷ ಪ್ರಾಯ ಅಂದಾಜಿಸಲಾಗಿದ್ದು, ಗುರುತು ಪತ್ತೆಯಾಗಿಲ್ಲ. ರಸ್ತೆ ದಾಟುತ್ತಿದ್ದಾಗ ಖಾಸಗಿ ಬಸ್ಸು ಬಡಿದಿದ್ದು, ರಸ್ತೆಗೆ ಬಿದ್ದ ಮಹಿಳೆಯ ದೇಹದ ಮೇಲೆ ಚಕ್ರ ಹರಿದಿದ್ದು, ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆ ಶವಗರದಲ್ಲಿರಿಸಲಾಗಿದೆ.