ಕಾಸರಗೋಡು: ಕೇರಳ ಲೋಕಸೇವಾ ಆಯೋಗದಿಂದ ಕನ್ನಡ ಉದ್ಯೋಗಾರ್ಥಿಗಳ ನಿರ್ಲಕ್ಷ್ಯವನ್ನು ಖಂಡಿಸಿ ಉದ್ಯೋಗಾರ್ಥಿಗಳು ಕಾಸರಗೋಡು ಲೋಕಸೇವಾ ಆಯೋಗದ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿತು.
ಧರಣಿಯನ್ನು ಕನ್ನಡ ಹೋರಾಟ ಸಮಿತಿ ಅಧ್ಯಕ್ಷ ನ್ಯಾಯವಾದಿ ಮುರಳೀಧರ ಬಳ್ಳುಕ್ಕರಾಯ ಉದ್ಘಾಟಿಸಿದರು . ಉದ್ಯೋಗಾರ್ಥಿಗಳ ಹಿತಸಂರಕ್ಷಣಾ ಸಮಿತಿ ಅಧ್ಯಕ್ಷ ಪ್ರಸನ್ನ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಪಂಚಾಯತ್ ಸದಸ್ಯರಾದ ಹರ್ಷಾದ್ ವರ್ಕಾಡಿ , ಕೆ. ಶ್ರೀಕಾಂತ್, ಕೆ. ಬಾಸ್ಕರ, ಎಸ್. ವಿ. ಭಟ್ ಮೊದಲಾದವರು ಮಾತನಾಡಿದರು.
ಲಕ್ಷ್ಮಣ ಪ್ರಭು ಕುಂಬಳೆ, ವಿಶ್ವನಾಥ ರಾವ್, ಗುರುಪ್ರಸಾದ್, ಜೋನ್ ಡಿ’ಸೋಜ ಮೊದಲಾದವರು ಮಾತನಾಡಿದರು.
ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಯ ಪರೀಕ್ಷಾ ಕೇಂದ್ರ ಗಳಲ್ಲಿ ಅಕ್ಟೋಬರ್ 21ರಂದು ನಡೆದ ಕನ್ನಡ ಮತ್ತು ಮಲಯಾಳಂ ಬಲ್ಲ ಎಲ್ ಡಿ ಕ್ಲಾರ್ಕ್ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕನ್ನಡ ಮತ್ತು ಮಲಯಾಳಂ ಭಾಷೆಯಲ್ಲಿ ಸಮಾನ ಪ್ರಶ್ನೆ ಕೇಳುವ ಬದಲಾಗಿ ಮಲಯಾಳಂನಲ್ಲಿ 60 ಮತ್ತು ಕನ್ನಡದಲ್ಲಿ 20 ಪ್ರಶ್ನೆ ಮೂಲಕ ಕೇರಳ ಲೋಕಸೇವಾ ಆಯೋಗವು ಕನ್ನಡ ಅಭ್ಯರ್ಥಿಗಳನ್ನು ವಂಚಿಸಿ ದ್ದು, ಇದಕ್ಕೆ ಕನ್ನಡಿಗರು ಒಗ್ಗಟಾಗಿ ಪ್ರತಿಭಟಿಸಬೇಕಿದೆ ಎಂದು ಅಭಿಪ್ರಾಯ ಪಡಲಾಯಿತು.
ಧರಣಿಗೆ ಕಾಸರಗೋಡು ಜಿಲ್ಲೆಯ ಕನ್ನಡ ಯುವ ಸಂಫಟನೆಗಳಾದ ಸಿರಿಚಂದನ ಕನ್ನಡ ಯುವ ಬಳಗ, ಗಿಳಿವಿಂಡು, ಸ್ನೇಹರಂಗ, ಬಿಎಡ್ , ಡಯಟ್ ವಿದ್ಯಾರ್ಥಿಗಳು ಮತ್ತು ಹಲವಾರು ಕನ್ನಡ ಪರ ಮತ್ತು ಸಾಮಾಜಿಕ ಸಾಂಸ್ಕೃತಿಕ ಸಂಘಟನೆಗಳು ಬೆಂಬಲ ಸೂಚಿಸಿದ್ದವು.