ಚಾಮರಾಜನಗರ: ಪವಾಡ ಪುರುಷರು ನೆಲೆಸಿರುವ ಪವಿತ್ರ ಸ್ಥಳದಲ್ಲಿ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಅದ್ಧೂರಿಯಾಗಿ ಜಾತ್ರಾ ಮಹೋತ್ಸವ ನಡೆಯಿತು. ಈ ಸಂದರ್ಭ ಸಿಂಗಾರಗೊಂಡ ರಥವನ್ನು ಭಕ್ತರು ಎಳೆದು ಸಂತೃಪ್ತಗೊಂಡರು.
ಕರ್ನಾಟಕ ತಮಿಳುನಾಡು ಸಂಪರ್ಕ ಹೊಂದುವ ಹೆದ್ದಾರಿಯಲ್ಲಿರುವ ಪವಾಡ ಪುರುಷ ಮಲೆ ಮಹದೇಶ್ವರರು ನೆಲೆಸಿರುವ ಪುಣ್ಯಕ್ಷೇತ್ರವಾಗಿರುವ ಮಲೈಮಹದೇಶ್ವರ ಬೆಟ್ಟದಲ್ಲಿ ಅಮಾವಾಸ್ಯೆಗೆ ಪೂಜಾ ಕೈಂಕರ್ಯಗಳು ನಡೆಯುತ್ತವೆಯಾದರೂ ದೀಪಾವಳಿಗೆ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾರೆ.
ಈ ಬಾರಿ ರಾಜ್ಯದ ಮೂಲೆಮೂಲೆಗಳಿಂದ ಲಕ್ಷಾಂತರ ಭಕ್ತರು ಮಹದೇಶ್ವರ ಬೆಟ್ಟಕ್ಕೆ ಆಗಮಿಸಿ ರಥೋತ್ಸವ ಕ್ಕೆ ಸಾಕ್ಷಿಭೂತರಾದರು. ಲಿಂಗರೂಪಿ ಮಹದೇಶ್ವರ ಸ್ವಾಮಿಗೆ ಅಭಿಷೇಕ, ಪಂಚಾಮೃತ ಸೇವೆ ಸೇರಿದಂತೆ ಹಲವಾರು ಸೇವೆ ಕೈಂಕರ್ಯಗಳು ನಡೆದವು. ಅಲ್ಲದೆ ಶುಭ ಮುಹೂರ್ತದಲ್ಲಿ ಮಹದೇಶ್ವರ ರಥೋತ್ಸವ ಜರುಗಿತು. ಸಾಲುರು ಮಠದ ಗುರು ಸ್ವಾಮಿ ಧಾರ್ಮಿಕ ಕಾರ್ಯಗಳನ್ನು ನಡೆಸಿಕೊಟ್ಟರು.
ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನಗಳ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಆನಂದ್ ನೇತೃತ್ವದಲ್ಲಿ ರಥೋತ್ಸವ ಅದ್ಧೂರಿಯಾಗಿ ನಡೆಯಿತು. ರಥೋತ್ಸವಕ್ಕೆ ಆಗಮಿಸಿದ ಭಕ್ತರಿಗೆ ಅನ್ನ ದಾಸೋಹವನ್ನು ಮಹದೇಶ್ವರ ದೇವಸ್ಥಾನಗಳ ಅಭಿವೃದ್ಧಿ ಪ್ರಾಧಿಕಾರ ವ್ಯವಸ್ಥೆ ಮಾಡಿತು. ಲಕ್ಷಾಂತರ ಭಕ್ತರು ಸೇರಿ ಸಂಭ್ರಮಿಸುವ ದೀಪಾವಳಿ ರಥೋತ್ಸವದಲ್ಲಿ ಅಹಿತಕÀರ ಘಟನೆಗಳು ನಡೆಯದಂತೆ ಬಿಗಿ ಪೆÇಲೀಸ್ ಬಂದೋಬಸ್ತ್ ಮಾಡಲಾಗಿತ್ತು.