ಚಾಮರಾಜನಗರ: ವನ್ಯ ಪ್ರಾಣಿಗಳಾದ ಹುಲಿ ಉಂಗುರು ಹಾಗೂ ನರಿಯ ಹಲ್ಲುಗಳನ್ನು ಸಂಗ್ರಹಿಸಿಟ್ಟುಕೊಂಡು ಅದನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿರುವ ಘಟನೆ ಗುಂಡ್ಲುಪೇಟೆಯಲ್ಲಿ ನಡೆದಿದೆ.
ಬೇಲೂರು ತಾಲೂಕಿನ ಅಂಗಡಿ ಗ್ರಾಮದ ಧವನ್(45) ಮತ್ತು ಗೋಕುಲ್(17)ಬಂಧಿತ ಆರೋಪಿಗಳು. ಇವರು ಗುಂಡ್ಲುಪೇಟೆ ಪಟ್ಟಣದಲ್ಲಿ ಹಾಗೂ ಬೇಗೂರು ಗ್ರಾಮದಲ್ಲಿ ಹುಲಿಯ ಆರು ಉಗುರು ಮತ್ತು ನರಿಯ ಐದು ಹಲ್ಲುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿರುವಾಗ ಗುಂಡ್ಲುಪೇಟೆ ಆರ್.ಎಫ್.ಓ ಡಾ.ಲೋಕೇಶ್ ಮತ್ತು ಸಿಬ್ಬಂದಿ ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.
ಬಂಧಿತರು ಹಕ್ಕಿಪಿಕ್ಕಿ ಜನಾಂಗದವರಾಗಿದ್ದು, ಕಳೆದ ಎರಡು ವರ್ಷದಿಂದ ಈ ವೃತ್ತಿಯನ್ನು ಮಾಡುತ್ತಿರುವುದು ವಿಚಾರಣೆ ವೇಳೆ ಬಹಿರಂಗಗೊಂಡಿದೆ.