ಶಿವಮೊಗ್ಗ: ಶಿವಮೊಗ್ಗದ ಪಿ.ಡಬ್ಲ್ಯೂ.ಡಿ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ ಮ್ಯಾನೇಜರ್ ಬಲೆಗೆ ಬಿದ್ದಿದ್ದಾನೆ.
ಶಿವಮೊಗ್ಗದ ದುರ್ಗಿಗುಡಿಯಲ್ಲಿರುವ ಪಿಡ್ಲ್ಯೂಡಿ ಕಚೇರಿಯಲ್ಲಿನ ಮ್ಯಾನೇಜರ್ ಶೇಖ್ ಮಹಮದ್ ರಫೀ ಎಂಬಾತನೇ ಎಸಿಬಿ ಬಲೆಗೆ ಬಿದ್ದಿದ್ದಾನೆ. 3 ನೇ ದರ್ಜೆ ಗುತ್ತಿಗೆದಾರ ಪರವಾನಗಿ ನೀಡಲು 10 ಸಾವಿರಕ್ಕೆ ಲಂಚದ ಬೇಡಿಕೆ ಇಟ್ಟಿದ್ದನು. ಪಿ.ಡಬ್ಲ್ಯೂ.ಡಿ. ಅಧಿಕಾರಿ. 5 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾನೆ.
ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಸಿದ್ದನಗೌಡ ಎಂಬುವರಿಂದ ಲಂಚ ಸ್ವೀಕರಿಸುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದು. ಎಸಿಬಿ ಇನ್ಸ್ ಪೆಕ್ಟರ್ ತಿಪ್ಪೇಸ್ವಾಮಿ ನೇತೃತ್ವದಲ್ಲಿ ದಾಳಿ ನಡೆದಿದೆ.