News Kannada
Tuesday, September 27 2022

ಕರ್ನಾಟಕ

ರಾಮಜನ್ಮ ಭೂಮಿ ತೀರ್ಪು: ಧಾರ್ಮಿಕ ಮುಖಂಡರ ಶಾಂತಿ ಸಭೆ - 1 min read

Photo Credit :

ರಾಮಜನ್ಮ ಭೂಮಿ ತೀರ್ಪು: ಧಾರ್ಮಿಕ ಮುಖಂಡರ ಶಾಂತಿ ಸಭೆ

ಮಂಡ್ಯ: ರಾಮಜನ್ಮ ಭೂಮಿ-ಬಾಬ್ರಿ ಮಸೀದಿ ಮಾಲೀಕತ್ವದ ವಿವಾದ ತೀರ್ಪು ನ.17ರಂದು ಪ್ರಕಟವಾಗುವ ಹಿನ್ನೆಲೆಯಲ್ಲಿ ಧಾರ್ಮಿಕ ಮುಖಂಡರೊಂದಿಗೆ ಶಾಂತಿ ಸಭೆ ನಗರದ ಜಿಪಂ ಸಭಾಂಗಣದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್ ಅವರು, ರಾಮಜನ್ಮ ಭೂಮಿ-ಬಾಬ್ರಿ ಮಸೀದಿ ಮಾಲೀಕತ್ವದ ವಿವಾದ ತೀರ್ಪು ಪ್ರಕಟವಾಗುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕು ಹಾಗೂ ಗೌರವಯುತವಾಗಿ ತೀರ್ಪನ್ನು ಸ್ವೀಕರಿಸಬೇಕೆಂದು ಹೇಳಿದರು.

ಒಂದು ಸಾವಿರ ವರ್ಷಗಳ ಹಿಂದೆ ಕನ್ನಡದ ಆದಿ ಕವಿಗಳು ಮನುಜ ಒಂದೇ ಕುಲ ಎಂದು ಹೇಳಿದ್ದು ಮನುಷ್ಯ ಒಂದೇ ಕುಲಕ್ಕೆ ಸೇರಿದ್ದಾನೆ, ಆ ಮನುಷ್ಯ ಮನುಷ್ಯನಾಗಿ ಬದುಕಬೇಕಾದರೆ ಮನುಷ್ಯತ್ವವನ್ನು ಮೈಗೂಡಿಸಿಕೊಳ್ಳಬೇಕು. ಹಾಗೆಯೇ ಒಂದೇ ಸೂರಿನಲ್ಲಿ ಜೀವನ ನಡೆಸುವಂತಹ ನಿರ್ಧಾರವನ್ನು ತೆಗೆದುಕೊಂಡು, ಶಾಂತಿ ಮತ್ತು ಸುಂದರ ಬದುಕನ್ನು ಹೇಗೆ ಕಟ್ಟಿಕೊಳ್ಳಬೇಕು ಎಂಬುದರ ಬಗ್ಗೆ ಅಚ್ಚುಕಟ್ಟಾಗಿ ತಿಳಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.

ನಮಗೆ ಸ್ವಾತಂತ್ರ್ಯ ಬಂದ ಮೇಲೆ ನಾವೇ ನಿರ್ಮಾಣ ಮಾಡಿಕೊಂಡ ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವವು ಭಾರತದ ಪತ್ರಿಯೊಬ್ಬ ನಾಗರಿಕನಿಗೂ ಸಮಾನವಾದ ಹಕ್ಕನ್ನು ನೀಡಿವೆ. ಸರ್ವ ಸ್ವತಂತ್ರವಾದ ಬದುಕನ್ನು ಕಟ್ಟಿಕೊಳ್ಳಲು ಮುಕ್ತವಾದ ಅವಕಾಶವನ್ನು ನೀಡಿದೆ. ಆದರೆ ಕೆಲವು ಸಂದರ್ಭದಲ್ಲಿ ನಮಗೆ ಗೊತ್ತಾಗದ ರೀತಿಯಲ್ಲಿ ಸಮಾಜದ ಸಾಮರಸ್ಯ, ಶಾಂತಿ ಹಾಗೂ ಸುಂದರವಾದ ನಮ್ಮ ಬದುಕಿಗೆ ಕೆಲವು ಘಟನೆಗಳು ಕೆಡಕನ್ನು ಉಂಟು ಮಾಡಿಕೊಂಡು ಬಂದಿವೆ. ನಾವೆಲ್ಲರೂ ಇಂದು ಇಪ್ಪತ್ತೊಂದನೇ ಶತಮಾನದಲ್ಲಿ ಇದ್ದೇವೆ, ನಮಗೆ ಪ್ರಮುಖವಾಗಿ ಬೇಕಾಗಿರುವುದು ಬಡತನ, ಹಸಿವು ಹಾಗೂ ಅನಕ್ಷರತೆ ಮುಕ್ತ ಬದುಕು. ಇಂತಹ ನಿಟ್ಟಿನಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸುವ್ಯವಸ್ಥೆ ಎಲ್ಲಿ ಇರುತ್ತದೆಯೋ ಅಲ್ಲಿ ಅಭಿವೃದ್ಧಿಯ ಸಂಕೇತವನ್ನು ಕಾಣಬಹುದು ಎಂದರು

1945ರಲ್ಲಿ ಜಪಾನ್ ದೇಶದಲ್ಲಿ ಸಮಸ್ಯೆ ಉಂಟಾದರೂ ಕೂಡ ಅಲ್ಲಿನ ಜನರು ಬಹಳ ಕಷ್ಟಪಟ್ಟು ಶಾಂತಿ ಸುವ್ಯಸ್ಥೆಯಿಂದ ಉತ್ತಮ ಬದುಕನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ನಮ್ಮ ದೇಶದಲ್ಲೂ ಕೂಡ ನಾವೆಲ್ಲರೂ ಶಾಂತಿ ಮತ್ತು ಸೌಹಾರ್ದತೆಯಿಂದ ಇರಬೇಕು. ಪತ್ರಿಯೊಬ್ಬರೂ ಸಾಮರಸ್ಯ ಬದುಕನ್ನು ನಿರ್ಮಿಸಿಕೊಂಡು, ಸಹೋದರರ ರೀತಿಯಲ್ಲಿ ಬದುಕಿದಾಗ, ನಾವು ನಮ್ಮ ಸಮಾಜ ಹಾಗೂ ಜೀವನವನ್ನು ಸುಂದರವಾಗಿ ರೂಪಿಸಿಕೊಳ್ಳಬಹುದು.

1992ರಲ್ಲಿ ನಡೆದ ಅಯೋಧ್ಯೆ ಮತ್ತು ಬಾಬ್ರಿ ಮಸೀದಿ ಘಟನೆ ನಮ್ಮ ನಿಲುವಿಗೆ ಸಿಗದಂತಹ ಘಟನೆಯಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಹಲವಾರು ವರ್ಷಗಳ ನಂತರ ನಮ್ಮ ದೇಶದ ಸರ್ವೋಚ್ಚ ನ್ಯಾಯಾಲಯವು ನ.17ರ ಆಸು-ಪಾಸಿನಲ್ಲಿ ತೀರ್ಪನ್ನು ನೀಡಲಿದೆ. ನ್ಯಾಯಾಲಯವು ಯಾವುದೇ ತೀರ್ಪನ್ನು ನೀಡುವ ಮುನ್ನ ಸಾಕಷ್ಟು ವಿಶ್ಲೇಷಣೆ ಮಾಡಿರುತ್ತದೆ. ವಾದ-ವಿವಾದಗಳನ್ನು ಕೇಳಿ ಕುಲಂಕುಷವಾಗಿ ಪರಿಶೀಲನೆ ಮಾಡಿ ಲಭ್ಯವಿರುವ ಆಧಾರಗಳ ಮೇಲೆ ತೀರ್ಪನ್ನು ನೀಡಿರುತ್ತದೆ. ಆದ್ದರಿಂದ ನವೆಂಬರ್ನಲ್ಲಿ ನೀಡುವ ತೀರ್ಪನ್ನು ನಾವೆಲ್ಲರೂ ಮುಕ್ತ ಮನಸ್ಸಿನಿಂದ, ಯಾವುದೇ ವೈಯಕ್ತಿಕ ದ್ವೇಷಕೆ ಒಳಗಾಗದೆ ಸಮಾನ ಚಿತ್ತದಿಂದ ಸ್ವೀಕರಿಸೋಣ ಎಂದು ಹೇಳಿದರು.

See also  ವಿವಾಹ ಸಮಾರಂಭಕ್ಕೆ  ಆರೋಗ್ಯ ಇಲಾಖೆ ಆಯುಕ್ತರ ಮಾರ್ಗಸೂಚಿ

ನ್ಯಾಯಾಲಯ ನೀಡುವ ತೀರ್ಪು ಏನೇ ಬಂದರೂ ನಾವೆಲ್ಲರೂ ಶಾಂತಿ ಸಹಬಾಳ್ವೆಯಿಂದ ಇರೋಣ. ಯಾರೊಬ್ಬರೂ ವಿಜಯೋತ್ಸವ ಅಥವಾ ಕರಾಳ ದಿನವನ್ನಾಗಿ ಆಚರಿಸುವುದು ಬೇಡ. ಸಂವಿಧಾನದಡಿಯಲ್ಲಿ ನಾವೆಲ್ಲರೂ ಒಂದೇ ಎಂದು ನಮ್ಮ ಕೆಲಸ ಹಾಗೂ ಜೀವನವನ್ನು ನಡೆಸಿಕೊಂಡು ಹೋಗಬೇಕು. ಯಾವುದೋ ಒಂದು ಮೂಲೆಯಲ್ಲಿ ನಡೆಯುವ ಸಣ್ಣ ಘಟನೆ ಕಾಡ್ಗಿಚ್ಚಿನಂತೆ ಅರಿದು ಮನೆ-ಮನೆಯನ್ನು ಸುಡುವಂತಹ ಸಾಧ್ಯತೆ ಇರುತ್ತದೆ. ಆದ್ದರಿಂದ ಎಲ್ಲಿಯೇ ಸಣ್ಣ ಸಮಸ್ಯೆ ಉಂಟಾದರೂ ಅದನ್ನು ಮೊಳೆಕೆಯಲ್ಲೆ ನಾವು ತೆಗೆದು ಹಾಕಬೇಕಾಗುತ್ತದೆ. ಹೀಗಾಗಿ ಧರ್ಮ ಗುರುಗಳಾದ ನೀವುಗಳು ಜಿಲ್ಲಾಡಳಿತದ ಜತೆ ಸಹಕರಿಸಬೇಕು ಮತ್ತು ಯಾವುದೋ ಒಂದು ಅವಿವೇಕದಿಂದ ನಡೆಯುಂತಹ ಘಟನೆಗಳ ಬಗ್ಗೆ ಮೊದಲು ನಮ್ಮ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್, ಡಿವೈಎಸ್ಪಿಗಳಾದ ಗಂಗಾಧರ್ ಸ್ವಾಮಿ, ಶೈಲೆಂದ್ರ, ಗಂಗಾಧರ್ ಸ್ವಾಮಿ ಹಾಗೂ ಧಾರ್ಮಿಕ ಗುರುಗಳು, ರೈತ ಮುಖಂಡರು ಹಾಗೂ ವಿವಿಧ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು