ಶಿವಮೊಗ್ಗ: ಲೈಂಗಿಕ ಕಿರುಕುಳ ನೀಡಿದ್ದ ಶಿಕ್ಷಕನ ವಿರುದ್ಧ ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಶಿಕ್ಷಕನನ್ನ ಪೋಕ್ಸೋ ಕಾಯ್ದೆ ಅಡಿ ಬಂಧಿಸಲಾಗಿದೆ.
ಶಾಲಾ ಕೊಠಡಿಯನ್ನ ಸ್ವಚ್ಛಗೊಳಿಸಲು ಮೂರು 8ನೇ ತರಗತಿ ಬಾಲಕಿಯರನ್ನ ಕರೆದುಕೊಂಡು ಹೋಗಲಾಗಿದ್ದು, ಸರ್ಕಾರಿ ಶಾಲೆ ವಿಜ್ಞಾನ ಶಿಕ್ಷಕರೋರ್ವರು ಇಬ್ಬರನ್ನ ಹಾಗೂ ಮೊದಲೇ ಕೊಠಡಿಯಲ್ಲಿದ್ದ ಬಾಲಕಿಯನ್ನ ಹೊರಗೆ ಕಳುಹಿಸಿರುತ್ತಾರೆ. ಕೊಠಡಿಯಲ್ಲಿ ಉಳಿದುಕೊಂಡಿದ್ದ ಒಬ್ಬಳೇ ಬಾಲಕಿಯನ್ನ ಕೊಠಡಿ ಸ್ವಚ್ಛ ಮಾಡುವಾಗ ಆಕೆಯ ಭುಜದ ಮೇಲೆ ಕೈಹಾಕಿ ಮೊಬೈಲ್ ನಲ್ಲಿನ ಚಿತ್ರ ನೋಡು ಹಾಗೂ ಮುತ್ತುಕೊಡು ಎಂದು ಶಿಕ್ಷಕ ಅನುಚಿತವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಇದರಿಂದ ಬಾಲಕಿ ಹೆದರಿ ಅಲ್ಲಿಂದ ಹೊರಗೆ ಬಂದಿದ್ದಾಳೆ.
ಈ ಘಟನೆ ನಡೆದು 6 ದಿನಗಳು ಕಳೆದಿದ್ದು, ನಿನ್ನೆ ಬಾಲಕಿ ಶಿಕಾರಿಪುರ ಗ್ರಾಮಾಂತೆರ ಠಾಣೆಗೆ ಬಂದು ಶಿಕ್ಷಕನ ವಿರುದ್ಧ ದೂರು ನೀಡಿದ್ದಾಳೆ. ಮಾನಸಿಕವಾಗಿ ಹೆದರಿದ ಕಾರಣ 6 ದಿನ ತಡವಾಗಿ ಬಾಲಕಿ ದೂರು ನೀಡಿರುವುದಾಗಿ ದೂರಿನಲ್ಲಿ ದಾಖಲಿಸಿದ್ದಾಳೆ. ಫೋಕ್ಸೋ ಕಾಯ್ದೆ ಅಡಿ ಶಿಕ್ಷಕನನ್ನ ಬಂಧಿಸಲಾಗಿದೆ.