ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಮಂಗಳವಾರ31ನೇ ವಸಂತಕ್ಕೆ ಕಾಲಿಟ್ಟಿಸ್ಸಾರೆ. ಅವರಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ನಿಯಂತ್ರಣ ಮಂಡಳಿ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಸೇರಿದಂತೆ ಕ್ರಿಕೆಟ್ ಅಭಿಮಾನಿಗಳು ಶುಭಕೋರಿದರು.
ಇದೀಗ ವಿಶ್ರಾಂತಿಯಲ್ಲಿರುವ ಕೊಹ್ಲಿ, ನವೆಂಬರ್ 14ರಂದು ನಡೆಯಲಿರುವ ಬಾಂಗ್ಲಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯಕ್ಕೆ ತಂಡ ಸೇರಿಸಿಕೊಳ್ಳಲಿದ್ದಾರೆ.