ಪಾಂಡವಪುರ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಶೀಘ್ರವೇ ಮಂಡ್ಯ ರಾಜಕಾರಣಕ್ಕೆ ವಾಪಾಸ್ಸಾಗುವುದಾಗಿ ಹೇಳಿದ್ದಾರೆ.
ಸೋಮವಾರ ಸಿ.ಎಸ್ ಪುಟ್ಟರಾಜು ಅವರ ಕಾಲೇಜು ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ನಾನು ರಾಜಕೀಯದಿಂದ ನಿವೃತ್ತಿಯನ್ನು ಪಡೆಯುವುದಿಲ್ಲ. ಶೀಘ್ರವೇ ಮಂಡ್ಯ ರಾಜಕಾರಣಕ್ಕೆ ವಾಪಾಸ್ಸಾಗಲಿದ್ದೇನೆ ಎಂದರು.
ಈ ವೇಳೆ ಜೆಡಿಎಸ್ ಪಕ್ಷಕ್ಕಾಗಿ ದುಡಿಯುತ್ತಿರುವ ಕಾರ್ಯಕರ್ತರಿಗೆ ಅಭಿನಂದನೆಯನ್ನು ಸಲ್ಲಿಸಿದರು.