ಕಲಬುರ್ಗಿ: ಚಲಿಸುತ್ತಿದ್ದ ಟೆರೆನೊ ನಿಶಾನ್ ವಾಹನಕ್ಕೆ ಸ್ಕಾರ್ಪಿಯೊ ವಾಹನ ಡಿಕ್ಕಿ ಹೊಡೆಸಿ ವ್ಯಕ್ತಿಯನ್ನು ಕೊಂದಿರುವ ಘಟನೆ ಕಲಬುರ್ಇ ಹೊರವಲಯದ ಶರನಸಿರಸಗಿ ಗ್ರಾಮದ ಬಳಿ ರಸ್ತೆಯಲ್ಲಿ ನಡೆದಿದೆ.
ಕೊಲೆಯಾದವರನ್ನು ಜೇವರ್ಗಿ ತಾಲ್ಲೂಕಿನ ಮಯೂರ ಗ್ರಾಮದ ಶಿವಲಿಂಗ ಎಂದು ಗುರುತಿಸಲಾಗಿದೆ.
ಕಲಬುರ್ಗಿ ಹೊರವಲಯದ ಶರಣಸಿರಸಗಿ ಗ್ರಾಮದ ಬಳಿಯ ರಸ್ತೆಯಲ್ಲಿ ಈ ಕೊಲೆ ನಡೆದಿದ್ದು, ಹಳೆಯ ವೈಷಮ್ಯವೇ ಕಾರಣ ಎನ್ನಲಾಗಿದೆ.
ಮೊದಲು ವಾಹನವನ್ನು ಬೆನ್ನಟ್ಟಿಕೊಂಡು ಹೋದ ದುಷ್ಕರ್ಮಿಗಳು ನಂತರ ಅದಕ್ಕೆ ಡಿಕ್ಕಿ ಹೊಡೆಸಿದ್ದಾರೆ. ವಾಹನದಿಂದ ಶಿವಲಿಂಗ ಅವರನ್ನು ಎಳೆದು ಕೊಲೆ ಮಾಡಿದ್ದಾರೆ.
ಈ ಕುರಿತು ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.