ನವದೆಹಲಿ: ರಾಮಜನ್ಮಭೂಮಿ ಹಾಗೂ ಬಾಬ್ರಿ ಮಸೀದಿ ವಿವಾದ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ ಶೀಘ್ರದಲ್ಲೇ ತೀರ್ಪು ಪ್ರಕಟ ಮಾಡಲಿದ್ದು, ಈ ಹಿನ್ನೆಲೆ ಪಾಕ್ ನ 7 ಉಗ್ರರು ಉತ್ತರ ಪ್ರದೇಶದೊಳಗೆ ನುಗ್ಗಿದ್ದಾರೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ.
ಮೂಲಗಳ ಪ್ರಕಾರ, ಈಗಾಗಲೇ ಪಾಕ್ ನ 7 ಉಗ್ರರು ಉತ್ತರಪ್ರದೇಶಕ್ಕೆ ಆಗಮಿಸಿದ್ದು, ಐವರು ಉಗ್ರರನ್ನು ಗುರುತಿಸಲಾಗಿದೆ. 7ಜನರಲ್ಲಿ ಐವರನ್ನು ಮೊಹಮ್ಮದ್ ಯಾಕೂಬ್, ಅಬು ಹಮ್ಜ, ಮೊಹಮ್ಮದ್ ಶಹಬಾಜ್, ನಿಶಾರ್ ಅಹ್ಮದ್ ಹಾಗೂ ಮೊಹಮ್ಮದ್ ಚೌಧರಿ ಎಂದು ಗುರುತಿಸಲಾಗಿದೆ.
ಅಯೋದ್ಯೆ ತೀರ್ಪು ಹಿನ್ನೆಲೆ ಈಗಾಗಲೇ ಉತ್ತರಪ್ರದೇಶದದಲ್ಲಿ ಬಿಗಿ ಬಂದೋಬಸ್ತ್ ನ್ನು ಏರ್ಪಡಿಸಲಾಗಿದೆ.
ಉತ್ತರ ಪ್ರದೇಶ ಡಿಜಿಪಿ ಒಪಿ ಸಿಂಗ್ ಪ್ರತಿಕ್ರಿಯಿಸಿ, ರಾಜ್ಯ ಪೊಲೀಸರು ಈಗಾಗಲೇ ಹೈಅಲರ್ಟ್ ನಲ್ಲಿದ್ದಾರೆ. ಬಿಗಿ ಬಂದೋಬಸ್ತ್ ನ್ನು ಹಮ್ಮಿಕೊಳ್ಳಲಾಗಿದೆ ಎಂದರು.