News Kannada
Monday, September 26 2022

ಕರ್ನಾಟಕ

ಹಿಂಬಾಗಿಲಿನಿಂದ ಬಿಜೆಪಿ ಅಧಿಕಾರಕ್ಕೆ ಬಂದಿರುವುದು: ಸಿದ್ಧರಾಮಯ್ಯ ಟೀಕೆ - 1 min read

Photo Credit :

 ಹಿಂಬಾಗಿಲಿನಿಂದ ಬಿಜೆಪಿ ಅಧಿಕಾರಕ್ಕೆ ಬಂದಿರುವುದು: ಸಿದ್ಧರಾಮಯ್ಯ ಟೀಕೆ

ಶಿವಮೊಗ್ಗ: ರಾಜ್ಯದಲ್ಲಿ ಎರಡು ಭಾರಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ಹಿಂಬಾಗಿಲಿನಿಂದ ಬಂದಿರುವುದೆ ವಿನಃ ಸರಳ ಬಹುಮತದಿಂದ ಅಲ್ಲ ಎಂದು ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಅವರು ಇಂದು ಬಿಎಸ್ ವೈ ತವರೂರಿನಲ್ಲಿ ನಡೆದ ಕಾಂಗ್ರೆಸ್ ಚೈತನ್ಯ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿ, ಕೋರ್ಟ್ ನಲ್ಲಿ ಬಿಎಸ್ ವೈ ಧ್ವನಿಯ ಆಡಿಯೋ ಹಾಜರಿ ಪಡಿಸಲಾಗಿದೆ. ಜನರಿಂದ ಆರಿಸಲ್ಪಟ್ಟ ಸರ್ಕಾರವನ್ನ 17 ಶಾಸಕರಿಗೆ ರಾಜೀನಾಮೆ ಕೊಡುವಂತೆ ಮಾಡಿ ಬಿಜೆಪಿ ಸಂವಿಧಾನದ ಆಶಯವನ್ನ ಕೊಲೆ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ ಎಂದು ಆರೋಪಿಸಿದರು.

76 ವರ್ಷದ ಬಿಎಸ್ ವೈ ಅವರು ಮುಳ್ಳಿನ ತಂತಿ ಮೇಲೆ ನಡೆಯುತ್ತಿದ್ದೇನೆ ಎಂದು ಹೇಳಿದಾಗ ಬಿದ್ದು ಹೋಗಿ ಹೆಚ್ಚುಕಮ್ಮಿ ಮಾಡಿಕೊಳ್ಳಬಾರದು ಎಂದು ರಾಜೀನಾಮೆ ಕೊಟ್ಟು ಹೋಗಿ ಎಂದಿದ್ದೆ. ಆಗ ನನ್ನನ್ನ ಬಿಜೆಪಿಯವರು ದುರಂಹಕಾರಿ ಎಂದು ಸಂಭೋಧಿಸಿದರು ಎಂದರು.

ಟಿಪ್ಪುನನ್ನು ಇತಿಹಾಸದಿಂದ ಕೈಬಿಟ್ಟರೆ ಇತಿಹಾಸ ತಿರುಚಿದಂತೆ: ನಾಲ್ಕು ಮೈಸೂರು ಯುದ್ಧಗಳನ್ನ ಹೈದರಾಲಿ ಮತ್ತು ಟಿಪ್ಪು ನಡೆಸಿದರು ಎಂದು ಚರಿತ್ರೆ ಹೇಳುತ್ತದೆ. ಮೈಸೂರು ಇತಿಹಾಸವಿಲ್ಲದೆ ಕರ್ನಾಟಕ ಇತಿಹಾಸ ಸಂಪೂರ್ಣವಾಗದು ಎಂದ ಮಾಜಿ ಸಿಎಂ ಕೆಜೆಪಿ ಕಟ್ಟಿದಾಗ ಬಿಎಸ್ ವೈ ಟಿಪ್ಪು ವೇಷ ಹಾಕಿಕೊಂಡು ಸನ್ಮಾನ ಮಾಡಿಕೊಂಡಿದ್ದನ್ನ ಬಹುಶಃ ಮರೆತು ಹೋಗಿರಬೇಕು ಎಂದು ವ್ಯಂಗ್ಯವಾಡಿದರು.

ಟಿಪ್ಪು ಸುಲ್ತಾನ್ ನ ಜಯಂತಿ ರದ್ದುಗೊಳಿಸುತ್ತಿದ್ದೀರಿ ಇದನ್ನ ಸಹಿಸಿಕೊಳ್ಳಬಹುದು ಆದರೆ ಇತಿಹಾಸ ಪುಸ್ತಕದಿಂದ ಟಿಪ್ಪುಹೆಸರನ್ನ ತೆಗೆದು ಹಾಕಲಾಗುತ್ತಿರುವುದು ಸಹಿಕೊಳ್ಳಲು ಸಾಧ್ಯವಿಲ್ಲ. ಇದು ಇತಿಹಾಸ ತಿರುಚಿದಂತಾಗುತ್ತದೆ ಎಂದು ಎಚ್ಚರಿಸಿದರು.

ಈ ವೇಳೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್, ಕಿಮ್ಮನೆ ರತ್ನಾಕರ್ ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್, ಎಸ್.ಆರ್ ಪಾಟೀಲ್ ಇದ್ದರು.

See also  ಪಡಿತರ ಸೋರಿಕೆಗೆ ಸಂಪೂರ್ಣ ತಡೆ: ಖಾದರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು