News Kannada
Friday, October 07 2022

ಕರ್ನಾಟಕ

ಕೊಡಗಿನ ವಿವಿಧೆಡೆ ಅಂತರ್ಜಲದ ನಿಗೂಢ ಶಬ್ಧ: ಗ್ರಾಮಸ್ಥರಲ್ಲಿ ಆತಂಕ - 1 min read

Photo Credit :

ಕೊಡಗಿನ ವಿವಿಧೆಡೆ ಅಂತರ್ಜಲದ ನಿಗೂಢ ಶಬ್ಧ: ಗ್ರಾಮಸ್ಥರಲ್ಲಿ ಆತಂಕ

ಮಡಿಕೇರಿ: ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷಗಳ ಮುಂಗಾರಿನ ಅವಧಿಯ ಭಾರೀ ಮಳೆ ಹಲ ಸಂಕಷ್ಟಗಳನ್ನು ಉಂಟುಮಾಡಿದ್ದರೆ, ಇದೀಗ ಮಳೆಯ ಪ್ರಮಾಣ ಕ್ಷೀಣಿಸುತ್ತಿರುವ ಹಂತದಲ್ಲೆ ಭಾಗಮಂಡಲ ಸಮೀಪದ ಪೇರೂರು ಗ್ರಾಮದಲ್ಲಿ ವಿಚಿತ್ರ ಶಬ್ದ ನೆಲದಾಳದಿಂದ ಕೇಳಿ ಬರುವ ಮೂಲಕ ಗ್ರಾಮಸ್ಥರನ್ನು ಆತಂಕಕ್ಕೆ ದೂಡಿದೆ.

ಬಲ್ಲಮಾವಟಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪೇರೂರು ಗ್ರಾಮದ ನೆಲದಾಳದಿಂದ ಕೇಳಿ ಬಂದ ಶಬ್ದದಿಂದ ಮತ್ತೆ ಅನಾಹುತಗಳು ಸಂಭವಿಸಬಹುದೇ ಎನ್ನುವ ಆತಂಕ ಮೂಡಿದೆ. ಇದೇ ರೀತಿಯ ಘಟನೆ ಅಯ್ಯಂಗೇರಿ ಗ್ರಾಮ ವ್ಯಾಪ್ತಿಯಲ್ಲೀ ಇತ್ತೀಚೆಗೆ ಸಂಭವಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

ಜಿಲ್ಲೆಯ ವಿವಿಧ ಭಾಗಗಳಲ್ಲಿ ಉಂಟಾದ ಭೂಮಿಯ ಬಿರುಕುಗಳ ತಪಾಸಣೆಗೆಂದು ಆಗಮಿಸಿದ್ದ ಭೂ ವಿಜ್ಞಾನಿಗಳ ತಂಡ, ಕೊಡಗಿನಲ್ಲಿ ಭಾರೀ ಮಳೆಯಿಂದ ಈ ಎಲ್ಲಾ ವಿಕೋಪಗಳು ಸಂಭವಿಸುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು.

ವಾರ್ಷಿಕ ಸರಾಸರಿ ಮಳೆಗಿಂತ ಹೆಚ್ಚಿನ ಮಳೆಯಾಗಿರುವುದರಿಂದ ಅಂತರ್ಜಲ ಮಟ್ಟದಲ್ಲಿ ಗಣನೀಯ ಹೆಚ್ಚಳ ಉಂಟಾಗಿರುವುದು ಮತ್ತು ಭೂ ಗರ್ಭದಲ್ಲಿ ಭೂಮಿಯ ಪದರಗಳ ನಡುವೆ ಅತಿಯಾದ ಒತ್ತಡದೊಂದಿಗೆ ನೀರು ಹರಿಯುತ್ತಿರುವುದು ವಿಚಿತ್ರ ಶಬ್ದಗಳಿಗೆ ಕಾರಣವೆಂದು ವಿಶ್ಲೇಷಿಸಲಾಗಿದೆ.

See also  ಚಿನ್ನದ ಹುಡುಗಿ ಎಂಬ ಬಿರುದು ಪಡೆದ ಡಾ . ವಿತಿಕಾ ಎಸ್ . ರೈ.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು