ಕಾಸರಗೋಡು: ಕರ್ನಾಟಕದ ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ಸಾಗಿಸುತ್ತಿದ್ದ 1.8 ಕಿಲೋ ಗಾಂಜಾ ಸಹಿತ ಶಿರಸಿ ನಿವಾಸಿಯೊಬ್ಬನನ್ನು ಮಂಜೇಶ್ವರ ಅಬಕಾರಿ ದಳದ ಸಿಬಂದಿಗಳು ಬಂಧಿಸಿದ್ದಾರೆ.
ಬಂಧಿತನನ್ನು ಶಿರಸಿಯ ನಿಶಾದ್ ಅಲಿ (24) ಎಂದು ಗುರುತಿಸಲಾಗಿದೆ.
ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಖಾಸಗಿ ಬಸ್ಸನ್ನು ತಪಾಸಣೆ ನಡೆಸಿದಾಗ ಅಕ್ರಮ ಸಾಗಾಟ ಪತ್ತೆಯಾಗಿದೆ. ಕುಂಬಳೆ ಪರಿಸರದಲ್ಲಿ ವಿತರಣೆಗೆ ಗಾಂಜಾ ತಂದಿದ್ದಾಗಿ ಈತ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅಬಕಾರಿ ದಳದ ಸಿಬಂದಿಗಳು ತಿಳಿಸಿದ್ದಾರೆ.