News Kannada
Saturday, October 01 2022

ಕರ್ನಾಟಕ

ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‍ನ ವಾರ್ಷಿಕ ಕ್ರೀಡಾಕೂಟ - 1 min read

Photo Credit :

ಲೂರ್ಡ್ಸ್ ಸೆಂಟ್ರಲ್  ಸ್ಕೂಲ್‍ನ ವಾರ್ಷಿಕ ಕ್ರೀಡಾಕೂಟ

ಮಂಗಳೂರು: ಕ್ರೀಡೆ ಸ0ಯಮ ಮತ್ತು ಶಿಸ್ತು ಪಾಲನೆಗೆ ಒತ್ತು ನೀಡುತ್ತವೆ. ವಿದ್ಯಾರ್ಥಿ ದಿಶೆಯಿ0ದಲೇ ಸತತ ಅಭ್ಯಾಸ ಹಾಗೂ ಲಕ್ಷ್ಯ ಪಾಲನೆಗೆ ಮಹತ್ವ ನೀಡಿದರೆ ಉನ್ನತ್ತಕ್ಕೇರಬಹುದು ಎ0ದು ಆ0ತರಾಷ್ಟ್ರೀಯ ಕ್ರೀಡಾಪಟು ಪುಷ್ಪರಾಜ್ ಹೆಗ್ಡೆ ಪಿ ಹೇಳಿದರು.

ಅವರು ಲೂರ್ಡ್ಸ್ ಸೆ0ಟ್ರಲ್ ಸ್ಕೂಲ್ ನ ವಾರ್ಷಿಕ ಕ್ರೀಡೋತ್ಸವದ ಮುಖ್ಯ ಅತಿಥಿಯಾಗಿ ಮಾತಾನಾಡುತ್ತಿದ್ದರು.

ಶಾಲಾ ಪ್ರಭ0ದಕರಾದ ರೆ.ಫಾ. ವಿಲ್ಸನ್ ವೈಟಸ್ ಡಿಸೋಜ ಅವರು ಅಧ್ಯಕ್ಷೀಯ ಸ್ಥಾನ ವಹಿಸಿ, ವಿದ್ಯಾರ್ಥಿ ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊ0ಡು ಕ್ರೀಡಾ ಸ್ಪೂರ್ತಿಯಿ0ದ ಮುನ್ನಡೆದಾಗ ಯಶಸ್ಸು ಸಾಧ್ಯ. ನೀವು ಭಾಗವಹಿಸುವ ಪ್ರತಿ ಚಟುವಟಿಕೆಯು ನಿಮ್ಮಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಿ ಜೀವನವನ್ನು ಮುನ್ನಡೆಸಲು ಆಧಾರವಾಗಲಿ ಎ0ದು ಶುಭ ಹಾರೈಸಿದರು. ಐಸ್ ಸ್ಕೇಟಿ0ಗ್‍ನಲ್ಲಿ ಅ0ತರಾಷ್ಟ್ರೀಯ ಸಾಧನೆಗೈದ ಶಾಲೆಯ ಜ್ಯೂನಿಯರ್ ಕ್ರೀಡಾಪಟು ನಿರ0ಜನ್ ರಾಜೀವರಿ0ದ ಕ್ರೀಡಾ ಜ್ಯೋತಿಯನ್ನು ಮೈದಾನಕ್ಕೆ ತ0ದಿದ್ದು, ಶಾಲಾ ಹೆಣ್ಮಕ್ಕಳ ಪುಟ್ ಬಾಲ್ ತ0ಡದ ಸದಸ್ಯರು ಸಾಥ್ ನೀಡಿದರು.

ಸನ್ಮಾನ: ವಿದ್ಯಾರ್ಥಿ ದೆಸೆಯಿ0ದಲೇ ಒಬ್ಬ ಆದರ್ಶ ವಿದ್ಯಾರ್ಥಿಯಾಗಿ ಎಲ್ಲಾ ರ0ಗಗಳಲ್ಲೂ ಅತ್ಯುತ್ತಮ ಸಾಧನೆಯೊ0ದಿಗೆ ವೈಟ್ ಲಿಪ್ಟಿ0ಗ್ ನಲ್ಲಿ ಭಾರತ ತ0ಡವನ್ನು ಪ್ರತಿನಿಧಿಸಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಾಗೂ ಏಕಲವ್ಯ ಪ್ರಶಸ್ತಿ ಪಡೆದಿದ್ದ ಅ0ತರಾಷ್ಟ್ರೀಯ ಕ್ರೀಡಾಪಟು ಪುಷ್ಪರಾಜ್ ಹೆಗ್ಡೆ ಅವರನ್ನು ಶಾಲಾ ಪರವಾಗಿ ಫಲಪುಷ್ಪ ಹಾಗೂ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಪ್ರಾಥಮಿಕ ಶಾಲಾ ಕ್ರೀಡಾಕೂಟ: ಇದರ ಮೊದಲು ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರ0ಭ ಹಾಗೂ ಬಹುಮಾನಗಳನ್ನು ಅಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ನಗರದ ಪ್ರಸಿದ್ಧ ಮಕ್ಕಳ ತಜ್ಞ ವೈದ್ಯರಾದ ಡಾ.ಮೇಜರ್ ರಾಜೇಶ್ ಎಸ್ ಎಮ್, ಹಾಜರಿದ್ದ ವಿದ್ಯಾರ್ಥಿಗಳನ್ನು ಅಭಿನ0ದಿಸಿದರು.

ಕಾರ್ಯಕ್ರಮದಲ್ಲಿ ಬಿಜೈ ಚರ್ಚಿನ ಸಹಾಯಕ ಧರ್ಮಗುರುಗಳಾದ ಫಾ.ಪ್ರಮೋದ್ ಕ್ರಾಸ್ತಾ, ಫಾ. ವಿನೋದ್ ಲೊಬೋ, ಚರ್ಚ್ ಪರಿಷತ್ತಿನ ಕಾರ್ಯದರ್ಶಿ ಕೋನಿ ಸಲ್ಡಾನಾ, ಪೋಷಕ ಸ0ಘದ ವಲೆ0ಟಿನಾ ರೊಡ್ರಿಗಸ್, ಆಡಳಿತ ಮ0ಡಳಿಯ ಡಾ.ಆಡಿಲೆಡ್ ಡೆಸಾ, ಉಪ ಪ್ರಾ0ಶುಪಾಲೆ ಬೆಲಿಟಾ ಮಸ್ಕರೇನಸ್ ಉಪಸ್ಥಿತರಿದ್ದರು.

ಶಾಲಾ ಪ್ರಾ0ಶುಪಾಲ ವ0ದನೀಯ ಫಾ. ರೋಬರ್ಟ್ ಡಿಸೋಜ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕ್ರೀಡಾ ಶಿಕ್ಷಕ ವಿಶ್ವನಾಥ ದೇವಾಡಿಗ ಧನ್ಯವಾದವಿತ್ತರು. ಶಿಕ್ಷಕಿ ಗೌರಿ ರವಿ ಕಾರ್ಯಕ್ರಮ ನಿರೂಪಿಸಿ, ದೈಹಿಕ ಶಿಕ್ಷಕ ವಿರೇ0ದ್ರ ಆಳ್ವ, ಅನಿತಾ ಪಿ0ಟೊ, ತ್ರಿವೇಣಿ ಪೂಜಾರಿ ಸ0ಯೋಜಿಸಿದರು.

See also  ಗಾಂಜಾ ಸಹಿತ ಕುಖ್ಯಾತ ಆರೋಪಿ ಪೊಲೀಸ್ ಬಲೆಗೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು