ಹುಣಸೂರು: ಜನಸೇವೆ ಮೂಲಕ ದೇವರನ್ನು ಆರಾಧಿಸಬೇಕು. ಆತ್ಮಸಾಕ್ಷಿಗೆ ಅನುಗುಣವಾಗಿ ನಡೆಯುವ ಮೂಲಕ ದೇವರನ್ನು ಕಾಣಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.
ಸಿದ್ದರಾಮಯ್ಯ ಅವರು ಮುಜರಾಯಿ ಇಲಾಖೆ ವತಿಯಿಂದ 1ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೋಂಡ ಚನ್ನಕೇಶವ ದೇವಸ್ಥಾನವನ್ನು ಉದ್ಘಾಟಿಸಿ ಮಾತನಾಡಿದರು.
ಇತ್ತೀಚೆಗೆ ರಾಜಕಾರಣಿಗಳು ದೇವಸ್ಥಾನದಲ್ಲಿ ಆಣಿ ಪ್ರಮಾಣ ಮಾಡುತ್ತೇವೆ ಎನ್ನುವುದು ಹೆಚ್ಚಾಗುತ್ತಿದೆ. ಆದರೆ ಇಂತಹ ಮಾತಿನಿಂದ ದೇವಸ್ಥಾನದ ಪಾವಿತ್ರ್ಯ ಹಾಳು ಮಾಡಬಾರದು ಎಂದರು.
ದೇಶದಲ್ಲಿ ಲಕ್ಷಾಂತರ ದೇವಸ್ಥಾನಗಳು ಇವೆ. ಅಲ್ಲಿಗೆ ಕೋಟ್ಯಂತರ ಮಂದಿ ಭಕ್ತರು ಹೋಗುವರು. ಸ್ವಾರ್ಥ ಬಿಟ್ಟು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು, ಪರರನ್ನು ಬದುಕಲು ಬಿಡಬೇಕು ಎಂದು ಅವರು ಹೇಳಿದರು.