ಮಡಿಕೇರಿ: ನಕಲಿ ಐಪಿಎಸ್ ಅಧಿಕಾರಿಯೊಬ್ಬ ಯುವತಿಯೊಬ್ಬಳನ್ನು ವಿವಾಹವಾದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಂಚಕರ ತಂಡವೊಂದನ್ನು ನಾಪೋಕ್ಲು ಪೊಲೀಸರು ಬಂಧಿಸಿದ್ದಾರೆ.
ಮಿಥುನ್ (21), ಮನೋಜ್ (30), ಅಬು ತಾಹೀರ್ (31) ಹಾಗೂ ವಿನೋದ್ (27) ಐಪಿಎಸ್ ಅಧಿಕಾರಿಗಳಂತೆ ಯುವತಿಯ ಮನೆಯವರ ಮುಂದೆ ಡ್ರಾಮಾ ಮಾಡಲು ಹೋಗಿ ಬಂಧಿತರಾಗಿರುವ ಆರೋಪಿಗಳು.
ಕೇರಳ ರಾಜ್ಯದ ತ್ರಿಶೂರ್ ಜ ಮಿಥುನ್ ಎಂಬಾತ ನಾನೊಬ್ಬ ಐಪಿಎಸ್ ಅಧಿಕಾರಿ ಎಂದು ನಂಬಿಸಿ ಮಡಿಕೇರಿ ತಾಲೂಕಿನ ನಾಲಡಿ ಗ್ರಾಮದ ಯುವತಿಯನ್ನು ವಿವಾಹವಾಗಿದ್ದ. ಮದುವೆ ಬಳಿಕ ಆತನ ಬಗ್ಗೆ ತಿಳಿದು ಯುವತಿ ತವರಿಗೆ ಬಂದಿದ್ದಳು. ಬಳಿಕ ಯುವಕ ತನ್ನ ಸ್ನೇಹಿತರೊಂದಿಗೆ ಸಿನೆಮಾ ಶೈಲಿಯಲ್ಲಿ ಪೊಲೀಸ್ ಸಮವಸ್ತ್ರ, ಬೆಲ್ಟ್, ಕ್ಯಾಪ್, ಟಾಪ್ ಲೈಟ್, ಲಾಠಿ ಸಮೇತ ಯುವತಿಯ ಮನೆಗೆ ಬಂದು ನಂಬಿಸಲು ಪ್ರಯತ್ನಿಸಿದ್ದಾನೆ.
ಈ ವೇಳೆ ಯುವತಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ತಕ್ಷಣ ಪೊಲೀಸರು ನಕಲಿ ಐಪಿಎಸ್ ತಂಡವನ್ನು ವಶಕ್ಕೆ ಪಡೆದು ನಾಪ್ಲೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.