News Kannada
Saturday, October 01 2022

ಕರ್ನಾಟಕ

ವಿಷಾಹಾರ ಸೇವನೆ: ಓರ್ವ ಮೀನುಗಾರ ಸಾವು, ಮೂವರು ಗಂಭೀರ - 1 min read

Photo Credit :

ವಿಷಾಹಾರ ಸೇವನೆ: ಓರ್ವ ಮೀನುಗಾರ ಸಾವು, ಮೂವರು ಗಂಭೀರ

ಕಾಸರಗೋಡು: ಮೀನುಗಾರಿಕೆಗೆ ತೆರಳಿ ಮಲ್ಪೆಯಿಂದ ಮರಳುತ್ತಿದ್ದ ಬೆಸ್ತರು ವಿಷಾಹಾರ ಸೇವನೆಯಿಂದ ಅಸ್ವಸ್ಥಗೊಂಡು ಓರ್ವ ಮೃತಪಟ್ಟು, ಮೂವರನ್ನು ಗಂಭೀರ ಸ್ಥಿತಿಯಲ್ಲಿ ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತಪಟ್ಟವರನ್ನು ತಿರುವನಂತಪುರ ವರ್ಕಳದ ಚಾರ್ಲಿ(56) ಎಂದು ಗುರುತಿಸಲಾಗಿದೆ. ವರ್ಕಳದ ಗಿಲ್ಬರ್ಟ್(38), ಕನ್ಯಾಕುಮಾರಿಯ ದತ್ತಾಯಿಸ್(53), ಸೈದಾ(54) ಅವರನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಐದು ಮಂದಿ ಚೇತರಿಸಿಕೊಂಡಿದ್ದಾರೆ.

 

ಮಲ್ಪೆ ಕಡೆಯಿಂದ ಮೀನುಗಾರಿಕೆಗೆ ತೆರಳಿ ಮರಳುತ್ತಿದ್ದಾಗ ಘಟನೆ ನಡೆದಿದೆ. ಕಣ್ಣೂರು ಆಯಿಕ್ಕಲ್ ನಿಂದ ಚಾರ್ಲಿ ಸೇರಿದಂತೆ ಒಂಭತ್ತು ಬೆಸ್ತರು ಮಲ್ಪೆಗೆ ಮೀನುಗಾರಿಕೆಗೆ ತೆರಳಿದ್ದರು. ಹಿಂತಿರುಗುವ ಸಂದರ್ಭದಲ್ಲಿ ಅಗತ್ಯ ಆಹಾರ ಹಾಗೂ ಕುಡಿಯಲು ನೀರು ಬೋಟ್ ನಲ್ಲಿ ದಾಸ್ತಾನಿರಿಸಿದ್ದರು.

ಈ ನೀರನ್ನು ಸೇವಿಸಿದ ಬೆಸ್ತರು ಅಸ್ವಸ್ಥಗೊಂಡಿದ್ದು, ಸೋಮವಾರ ಮಧ್ಯಾಹ್ನ ಕಾಸರಗೋಡು ತಳಂಗರೆ ತೀರಕ್ಕೆ ಬೋಟ್ ತಲಪಿಸಿ ಕರಾವಳಿ ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಬೆಸ್ತರನ್ನು ಕಾಸರಗೋಡು ಆಸ್ಪತ್ರೆಗೆ ತಲಪಿಸಲಾಯಿತು. ಈ ಪೈಕಿ  ಚಾರ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು.

ನೀರಿನಿಂದ ವಿಷಬಾಧೆ ಉಂಟಾಗಿರಬಹುದೆಂದು ಶಂಕಿಸಲಾಗಿದೆ. ನೀರಿನ ಸ್ಯಾಂಪಳನ್ನು ತಪಾಸಣೆಗೆ ಕಳುಹಿಸಲಾಗಿದೆ. 

See also  ಯಡಿಯೂರಪ್ಪರದ್ದು ಭ್ರಷ್ಟ ಸರ್ಕಾರವೆಂದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು