News Kannada
Monday, October 03 2022

ಕರ್ನಾಟಕ

ಆದಿಮಾನವರಂತೆ ಬದುಕುತ್ತಿದ್ದಾರೆ ಮದ್ದೂರು ಕಾಲೋನಿ ಜನರು - 1 min read

Photo Credit :

ಆದಿಮಾನವರಂತೆ ಬದುಕುತ್ತಿದ್ದಾರೆ ಮದ್ದೂರು ಕಾಲೋನಿ ಜನರು

ಚಾಮರಾಜನಗರ: ಎಲ್ಲ ಸೌಲಭ್ಯಗಳು ಅಂಗೈಯಲ್ಲೇ ದೊರಕುವ ಈ ಕಾಲದಲ್ಲಿಯೂ ಇರಲೊಂದು ಸೂರು ಇಲ್ಲದೆ, ಮೂಲ ಸೌಲಭ್ಯವಂಚಿತವಾಗಿ ಥೇಟ್ ಆದಿಮಾನವರಂತೆ ಬದುಕುವವರು ಇಂದಿಗೂ ನಮ್ಮ ನಿಮ್ಮ ನಡುವೆಯಿದ್ದಾರೆ ಎನ್ನುವುದೇ ಬೇಸರದ ಸಂಗತಿಯಾಗಿದೆ.

ಗುಡಿಸಲು ಮುಕ್ತ ರಾಜ್ಯವನ್ನಾಗಿ ಮಾಡಬೇಕೆಂಬ ಭರವಸೆಗಳು ಕೇವಲ ಚುನಾವಣೆ ಸಂದರ್ಭ ಮಾತ್ರ ಜನಪ್ರತಿನಿಧಿಗಳ ಬಾಯಿಯಲ್ಲಿ ಕೇಳಿ ಬರುತ್ತವೆಯಾದರೂ ಚುನಾವಣೆ ಮುಗಿಯುತ್ತಿದ್ದಂತೆಯೇ ಅದು ಮರೆತು ಹೋಗುವುದರಿಂದ ಜನ ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಜನ ಹರಕುಮುರುಕು ಗುಡಿಸಲಲ್ಲೇ ದಿನ ಕಳೆಯುವಂತಾಗಿದೆ.

ಇದಕ್ಕೆ ಕರ್ನಾಟಕ ಕೇರಳ ರಾಜ್ಯಗಳ ಗಡಿಯಂತಿರುವ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮದ್ದೂರು ಕಾಲೋನಿ ಸಾಕ್ಷಿಯಾಗಿದೆ. ಇಲ್ಲಿಗೊಮ್ಮೆ ಭೇಟಿ ನೀಡಿದ್ದೇ ಆದರೆ ಮೂಲಭೂತ ಸೌಕರ್ಯವಿಲ್ಲದೆ ಸರಿಯಾದ ಸೂರು ಇಲ್ಲದೆ, ಮುರುಕಲು ಗುಡಿಸಲಲ್ಲಿ ಜೀವನ ಸಾಗಿಸುವ ಕಾಡುಕುರುಬ ಜನಾಂಗ ಕಾಣಸಿಗುತ್ತಾರೆ. ಆಧುನಿಕತೆಯ ಭರಾಟೆಯಲ್ಲಿ ಜನ ಜೀವನ ಸಾಗಿಸುವಾಗ ಇವರು ಮಾತ್ರ ಇನ್ನೂ ಕೂಡ ಆದಿ ಮಾನವರಂತೆ ಜೀವನ ಸಾಗಿಸುತ್ತಿರುವುದು ಬೇಸರದ ಸಂಗತಿಯಾಗಿದೆ.

ಗುಂಡ್ಲುಪೇಟೆ ತಾಲೂಕಿನ ಮದ್ದೂರು ಕಾಲೋನಿಯಲ್ಲಿ ಸುಮಾರು 150ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ, ಇವರು ತಲತಲಾಂತರದಿಂದಲೂ ಅರಣ್ಯದಲ್ಲಿ ದೊರಕುವ ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಿ ಬಳಿಕ ಅದನ್ನು ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಾ ಬರುತ್ತಿದ್ದಾರೆ. ಇವರ ಪೈಕಿ ಕೆಲವರು ಕೂಲಿ ಕೆಲಸ ಮಾಡುವ ಮೂಲಕವೂ ಬದುಕು ಕಂಡುಕೊಂಡಿದ್ದಾರೆ. ಹಿಂದಿನಿಂದಲೂ ಗುಡಿಸಲಲ್ಲೇ ವಾಸ ಮಾಡುತ್ತಾ ಬಂದಿರುವ ಇವರು ಸೌಲಭ್ಯ ವಂಚಿತರಾಗಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಹಾಗೆ ನೋಡಿದರೆ ಮದ್ದೂರು ಕಾಲೊನಿಯು ಬೇರಂಬಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ್ದು, ಇಲ್ಲಿನ ಜನರಿಗೆ ಸರ್ಕಾರದಿಂದ ಸಿಗಬೇಕಾದ ಸೌಕರ್ಯಗಳನ್ನು ತಲುಪಿಸುವಲ್ಲಿ ವಿಫಲವಾಗಿದ್ದು, ಸದ್ಯ ಪಂಚಾಯಿತಿ ವತಿಯಿಂದ ವಸತಿ ಯೋಜನೆಯಡಿ ಇಲ್ಲಿಗೆ 10 ಮನೆಗಳು ಮಂಜೂರಾಗಿದ್ದು, ಅನುದಾನದ ಕೊರತೆಯಿಂದ ಮನೆಗಳ ಕಾಮಗಾರಿ ಅರ್ಧಕ್ಕೆ ನಿಂತು ಹೋಗಿವೆ ಎಂಬ ಮಾತುಗಳು ಕೇಳಿ ಬರುತ್ತಿವೆಯಾದರೂ ಇದು ನಿಜವಾದ ಕಾರಣನಾ ಎಂಬುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ.

ಈ ಹಿಂದೆ ಚಾಮರಾಜನಗರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಯಾಗಿದ್ದಂತಹ ಹರೀಶ್‍ಕುಮಾರ್ ಅವರು ಈ ಕಾಲೋನಿಯಲ್ಲಿ ವಾಸ್ತವ್ಯ ಹೂಡಿ ಅಭಿವೃದ್ಧಿಯ ಬಗ್ಗೆ ಭರವಸೆ ನೀಡಿದ್ದರು. ಆದರೆ ಅವರು ವರ್ಗಾವಣೆಯಾಗಿ ಹೋಗಿದ್ದರಿಂದ ಯಾವುದೇ ರೀತಿಯ ಅಭಿವೃದ್ಧಿ ಕೆಲಸಗಳು ನಡೆಯದೆ ಇನ್ನೂ ಅಭಿವೃದ್ಧಿ ವಂಚಿತ ಗ್ರಾಮವಾಗಿಯೇ ಉಳಿದಿದೆ.

ಈ ಕಾಲೋನಿಯಲ್ಲಿ ಇರುವ ಹೆಚ್ಚಿನವರು ಅವಿದ್ಯಾವಂತ ಮತ್ತು ಬಡವರಾಗಿರುವುದರಿಂದ ಅವರನ್ನು ಕೇವಲ ಮತಕ್ಕಾಗಿ ಬಳಸಿಕೊಳ್ಳುವ ಜನಪ್ರತಿನಿಧಿಗಳು ಬಳಿಕ ಮರೆತು ಬಿಡುತ್ತಿದ್ದಾರೆ. ಇದು ಇಲ್ಲಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಚುನಾವಣೆ ಸಮಯದಲ್ಲಿ ಮಾತ್ರ ನಾಯಕರು ಬರುತ್ತಾರೆ ಬಳಿಕ ಮರೆತು ಬಿಡುತ್ತಾರೆ. ಇದರಿಂದ ನಾವು ಗುಡಿಸಲಲ್ಲೇ ಕಾಲ ಕಳೆಯುವಂತಾಗಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹತ್ತು ಹಲವು ಯೋಜನೆಗಳನ್ನು ಜಾರಿ ತರುತ್ತಿದ್ದು ಅವು ಇಂತಹ ಗ್ರಾಮಗಳ ಜನರಿಗೆ ತಲುಪದಿರುವುದು ನಿಜಕ್ಕೂ ನಮ್ಮ ವ್ಯವಸ್ಥೆಯನ್ನು ಅಣಕಿಸುವಂತಿದೆ.

See also  ಮಂಡ್ಯದ ರಾಜಕೀಯದಲ್ಲಿ ಹೊಸ ಶಕೆ: ಎಚ್ ಡಿಕೆ

ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿದಿಗಳು ಇತ್ತ ಗಮನಹರಿಸಿ ಈ ಕಾಲೋನಿಯನ್ನು ಗುಡಿಸಲು ರಹಿತವನ್ನಾಗಿ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು