ಕಾರವಾರ: ಓವರ್ ಟೇಕ್ ಮಾಡಿದಕ್ಕಾಗಿ ಕೋಪಗೊಂಡ ಬೈಕ್ ಚಾಲಕ, ಬಸ್ ಚಾಲಕನಿಗೆ ಹೆಲ್ಮೆಟ್ ನಿಂದ ಹೊಡೆದು ಹಲ್ಲೆ ಮಾಡಿದ ಘಟನೆ ಅಂಕೋಲಾ ತಾಲೂಕಿನ ಅವರ್ಸಾದಲ್ಲಿ ನಡೆದಿದೆ.
ಶಿರಸಿ ಮಾರ್ಗವಾಗಿ ಕಾರವಾರದತ್ತ ಸಂಚರಿಸುತ್ತಿದ್ದ ಬಸ್, ಅದೇ ಮಾರ್ಗವಾಗಿ ಬರುತ್ತಿದ್ದ ಬೈಕನ್ನು ಓವರ್ ಟೇಕ್ ಮಾಡಿದ ಎನ್ನುವ ಕಾರಣಕ್ಕೆ ಅವರ್ಸಾದ ರವಿ ಬಸ್ ಚಾಲಕನ ಅಶೋಕ ಜುಮ್ಮಣ್ಣನವರ್ ಎನ್ನುವವರ ತಲೆಯ ಮೇಲೆ ಹಲ್ಲೆ ಮಾಡಿದ್ದಾನೆ.
ಇದರಿಂದ ಬಸ್ ಚಾಲಕನ ತಲೆಗೆ ಗಂಭೀರ ಗಾಯಗೊಂಡಿದ್ದು ತೀವ್ರ ರಕ್ತಸ್ರಾವ ಆಗಿದೆ. ಘಟನೆಯ ಸಂದರ್ಭದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಹಲ್ಲೆ ಮಾಡಿದ ರವಿ ತಪ್ಪಿಸಿಕೊಂಡಿದ್ದಾನೆ. ಘಟನೆ ಸಂಬಂಧ ಅಂಕೋಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.