ಹೊಸಪೇಟೆ: ಉಪಚುನಾವಣೆಗೆ ವಿಜಯನಗರ ಕ್ಷೇತ್ರದಿಂದ ಆನಂದ್ ಸಿಂಗ್ ಅವರಿಗೆ ಟಿಕೆಟ್ ನೀಡಿರುವುದಕ್ಕೆ ಈಗ ಬಿಜೆಪಿಯಲ್ಲಿ ಬಂಡಾಯ ಶುರುವಾಗಿದೆ.
ಬಿಜೆಪಿ ಮುಖಂಡ ಕವಿರಾಜ್ ಅರಸ್ ಅವರು ಆನಂದ್ ಸಿಂಗ್ ಗೆ ಟಿಕೆಟ್ ನೀಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಅವರ ಮನವೊಲಿಕೆಗಾಗಿ ಶನಿವಾರ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್, ಸಂಸದರಾದ ವೈ.ದೇವೇಂದ್ರಪ್ಪ, ಕರಡಿ ಸಂಗಣ್ಣ, ಆನಂದ್ ಸಿಂಗ್ ಹಾಗೂ ಇತರರು ಪ್ರಯತ್ನಿಸಿದರು. ಮಧ್ಯಾಹ್ನ ತನಕವೂ ಸಂಧಾನ ಮಾತುಕತೆ ಮುಂದುವರಿದಿದೆ. ಆದರೆ ಸಂಧಾನ ವಿಫಲವಾಗಿದೆ.
ಆನಂದ್ ಸಿಂಗ್ ಗೆ ಟಿಕೆಟ್ ನೀಡುವುದಕ್ಕೆ ವಿರೋಧವಿದೆ. ನನಗೆ ಟಿಕೆಟ್ ನೀಡಿ ಅಂತ ಕೇಳಿಲ್ಲ. ಪಕ್ಷದ ಯಾವುದೇ ಕಾರ್ಯಕರ್ತನಿಗಾದರೂ ಟಿಕೆಟ್ ನೀಡಿ ಪರವಾಗಿಲ್ಲ. ಆದರೆ ಪಕ್ಷಾಂತರಿಗೆ ಟಿಕೆಟ್ ನೀಡಿರುವುದು ತಪ್ಪು ಎಂದು ಅವರು ಸ್ಪಷ್ಟವಾಗಿ ಹೇಳಿರುವರು.