ಕೊಲಂಬೊ: ಶ್ರೀಲಂಕಾದ ಮಾಜಿ ರಕ್ಷಣಾ ಕಾರ್ಯದರ್ಶಿ ಗೊಟಬಯ ರಾಜಪಕ್ಸ ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿಕೊಳ್ಳುವ ಮೂಲಕ ಶ್ರಿಲಂಕಾ ಅಧ್ಯಕ್ಷರಾಗಿದ್ದಾರೆ.
269 ಮಂದಿಯನ್ನು ಬಲಿತೆಗೆದುಕೊಂಡ ಭೀಕರ ಭಯೋತ್ಪಾದನಾ ದಾಳಿ ನಡೆದು ಏಳು ತಿಂಗಳ ಬಳಿಕ ಇಲ್ಲಿ ಅಧ್ಯಕ್ಷೀಯ ಚುನಾವಣೆ ನಡೆದಿದೆ.ನಾಳೆ ಅಧ್ಯಕ್ಷರಾಗಿ ಗೊಟಬಯ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಗೊಟಬಯ ಅವರ ವಕ್ತಾರ ಕೆಹೆಲಿಯಾ ರಂಬುಕ್‌ವೆಲ್ಲಾ ಹೇಳಿದ್ದಾರೆ.
ರಾಜಪಕ್ಸ ವಿರುದ್ಧ ಸ್ಪರ್ಧಿಸಿದ್ದ ವಸತಿ ಸಚಿವ ಸಜಿತ್ ಪ್ರೇಮದಾಸ ಶೇ.45.3 ಮತ ಗಳಿಸಿದ್ದಾರೆ.