ನವದೆಹಲಿ: ತೀವ್ರ ಹದಗೆಟ್ಟಿದ ವಾಯುಮಾಲಿನ್ಯದಿಂದಾಗಿ ರಜೆ ನೀಡಲಾಗಿದ್ದ ದೆಹಲಿಯ ಎಲ್ಲ ಖಾಸಗಿ ಹಾಗೂ ಸರ್ಕಾರಿ ಶಾಲೆಗಳು ಇಂದು ಮತ್ತೇ ತೆರೆಯಿತು.
ಹವಾಮಾನ ಇಲಾಖೆ ಮುನ್ಸೂಚನೆಯಂತೆ, ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರ ಎಲ್ಲ ಖಾಸಗಿ ಹಾಗೂ ಸರ್ಕಾರಿ ಶಾಲೆಗಳಿಗೆ ನವೆಂಬರ್ 15ರ ವರೆಗೆ ರಜೆ ಘೋಷಣೆ ಮಾಡಿತ್ತು.
ಇಂದು ವಾಯುಮಾಲಿನ್ಯದ ಗುಣಮಟ್ಟದಲ್ಲಿ ಚೇತರಿಕೆ ಕಂಡುಬಂದ ಹಿನ್ನೆಲೆ ಮತ್ತೇ ಶಾಲೆಯನ್ನು ತೆರೆಯಲಾಗಿದೆ.