ಕಾರವಾರ: ಪ್ರಪ್ರಥಮವಾಗಿ ಪರಿಸರಕ್ಕಾಗಿ ಹೋರಾಡಿದ್ದು ಭಗವಂತ ಶ್ರೀಕೃಷ್ಣ. ಕಾಳಿಂಗ ಸರ್ಪವನ್ನು ಸದೆಬಡೆದು ನದಿ ನೀರನ್ನು ರಕ್ಷಣೆ ಮಾಡಿದ್ದಾರೆ. ಹೊಸದಾಗಿ ಅಣುವಿದ್ಯುತ್ ಸ್ಥಾವರದ ಹೆಸರಿನಲ್ಲಿ ಹುಟ್ಟಿಕೊಂಡಿರುವ ಹೊಸ ಕಾಳಿಂಗನನ್ನು ಬಗ್ಗು ಬಡಿಯಬೇಕು ಎಂದು ಉಡುಪಿ ಪೇಜಾವರ ಮಠ ವಿಶ್ವೇಶ್ವರ ತೀರ್ಥ ಶ್ರೀ ಹೇಳಿದರು.
ಅವರು ಉತ್ತರ ಕನ್ನಡ ಜಿಲ್ಲೆಯ ಮಲ್ಲಾಪುರ ಗ್ರಾಮದ ಕಲಿಕಾ ಮೈದಾನದಲ್ಲಿ ನಡೆದ ಕೈಗಾ ಅಣುಸ್ಥಾವರದ 5 ಮತ್ತು 6 ಘಟಕದ ವಿರೋಧಿ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು. ಕೈಗಾ ಹೋರಾಟ ಈ ಹಿಂದಿನಿಂದಲೂ ಮಾಡುತ್ತಲೇ ಬಂದಿದ್ದೇವೆ. ಅಣುಸ್ಥಾವರಗಳ ಬಗ್ಗೆ ವಿರೋಧಿಸುತ್ತಲೇ ಹೋರಾಟ ಮಾಡಿದ್ದೇವೆ ಎಂದರು.
ಈ ಭಾಗದ ಜನ ಪ್ರತಿನಿಧಿಯೊಬ್ಬರು ನೀವು ದಕ್ಷಿಣ ಕನ್ನಡದವರು. ನಿಮಗೆ ಉತ್ತರ ಕನ್ನಡದವರ ಮೇಲೆ ಹೊಟ್ಟೆಕಿಚ್ಚಿದೆ ಹಾಗಾಗಿ ಇಲ್ಲಿ ಬೆಳೆಯುವ ಕಂಪನಿಗಳಿಗೆ ನೀವು ಪ್ರೋತ್ಸಾಹಿಸುವುದಿಲ್ಲ ಎಂದಿದ್ದಾರೆ. ಆದರೆ ನಮಗೆ ಯಾವುದೇ ಜಿಲ್ಲೆಯ ಬಗ್ಗೆ ಬೇಧಭಾವವಿಲ್ಲ. ಮಂಗಳೂರು ಇಂದು ಮಾಲಿನ್ಯದಲ್ಲಿ ಮೊದಲ ಸ್ಥಾನದಲಿದೆ. ಪ್ರಕೃತಿ ರಕ್ಷಣೆ ಮಾಡಿ ಅದಕ್ಕೆ ಪೂಜೆ ಮಾಡಬೇಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಸಂಘಟಿತರಾಗಬೇಕು ಜನಜಾಗೃತಿ ಆಗಬೇಕು ರಾಷ್ಟ್ರಕ್ಕೆ ಅಪಾಯ ಬಂದಾಗ ಎಲ್ಲರೂ ಒಂದಾಗಬೇಕು. ಪರಿಸರ ರಕ್ಷಣೆಗಾಗಿ ನಾನು ನಿಮ್ಮ ಜೊತೆ ಇದ್ದು ಸೊಂದಾ ಸ್ವಾಮಿಗಳು ಕೂಡ ಈ ದಿಸೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸೋಂದಾ ಮಠದ ಗಂಗಾಧರೇಂದ್ರ ಸರಸ್ವತಿ ಶ್ರೀಗಳು ಮಾತನಾಡಿ ಜಗತ್ತಿನ 11,000 ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಪರಿಸರ ನಾಶದಿಂದ ಜನರ ಮೇಲೆ ಕಷ್ಟ ಬರಲಿದೆ. ನಮ್ಮ ದೇಶದ ಪ್ರಧಾನಮಂತ್ರಿಯವರು ಹೊರದೇಶಕ್ಕೆ ಹೋಗಿ ಪರಿಸರದ ಬಗ್ಗೆ ಮಾತನಾಡುತ್ತಾರೆ. ಜಗತ್ತಿನ ತಾಪಮಾನ ವಿದ್ಯುತ್ತನ್ನು ಯಾವುದೇ ವೃತ್ತಿಯಲ್ಲಿ ಉತ್ಪಾದಿಸುವುದಿಲ್ಲ ಎಂದು ಹೇಳುವ ಪ್ರಧಾನಿಯವರು ನಮ್ಮ ದೇಶದಲ್ಲಿ ಇಂತಹ ಅಣು ವಿದ್ಯುತ್ ಸ್ಥಾವರಕ್ಕೆ ಯಾವುದೇ ಅಂಕುಶ ನೀಡುವುದಿಲ್ಲ ಎಂದರು.
ಭವೇಶಾಂನಂದ ಶ್ರೀಗಳು ಅಧ್ಯಕ್ಷತೆ ವಹಿಸಿದ್ದರು. ಇಂದನ ತಜ್ಞ ಶಂಕರ್ ಶರ್ಮ, ಪರಿಸರ ವಿಜ್ಞಾನ ಭವನದ ಟಿ. ವಿ ರಾಮಚಂದ್ರ, ಕಡಲ ಶಾಸ್ತ್ರಜ್ಞ ಡಾ. ವಿ. ಎನ್. ನಾಯಕ ಸೇರಿದಂತೆ ಹಲವರು ತಮ್ಮ ಸಲಹೆ ಸೂಚನೆ ನೀಡಿದರು ಮಾಜಿ ಸಚಿವ ಆನಂದ್ ಅಸ್ನೋಟಿಕರ್, ಮಾಜಿ ಶಾಸಕ ಸತೀಶ್ ಸೈಲ್ ನ್ಯಾಯವಾದಿ ಎಸ್ಪಿ ಕಾಮತ್ ಗ್ರಾಮ ಪಂಚಾಯತ್ ಅಧ್ಯಕ್ಷರು ಸದಸ್ಯರು ಹಲವು ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು .