ಕಾಸರಗೋಡು : ನವಂಬರ್ ೨೮ ರಿಂದ ಕಾಸರಗೋಡಿನಲ್ಲಿ ನಡೆಯಲಿರುವ ಕೇರಳ ರಾಜ್ಯ ಮಟ್ಟದ ಶಾಲಾ ಕಲೋತ್ಸವದ ಪ್ರಚಾರಾರ್ಥ ಪ್ರಚಾರ ಸಮಿತಿ ನೇತೃತ್ವದಲ್ಲಿ ಪಳ್ಳಿಕೆರೆ ಬೀಚ್ ನಲ್ಲಿ ಆದಿತ್ಯವಾರ ಗಾಳಿ ಪಟ , ಮರಳಿನಲ್ಲಿ ಶಿಲ್ಪ ರಚನೆ ಸೇರಿದ ಹಲವು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಗಮನ ಸೆಳೆಯಿತು.
ರಾಜ್ಯ ಕಂದಾಯ ಸಚಿವ ಇ . ಚಂದ್ರಶೇಖರನ್ ಉದ್ಘಾಟಿಸಿದರು.ಜಿಲ್ಲಾ ಪಂಚಾಯತ್ ಸದಸ್ಯ ಶಾನ್ ವಾಜ್ ಪಾದೂರು ಅಧ್ಯಕ್ಷತೆ ವಹಿಸಿದ್ದರು.
ಪಳ್ಳಿಕೆರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪಿ . ಇಂದಿರಾ , ಶಿಕ್ಷಣ ಇಲಾಖಾ ಉಪ ನಿರ್ದೇಶಕಿ ಕೆ . ವಿ ಪುಷ್ಪಾ , ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಕೀಮ್ ಕುನ್ನಿಲ್ , ಪ್ರಚಾರ ಸಮಿತಿ ಸಂಚಾಲಕ ಜಿಜಿ ಥೋಮಸ್ , ಸುಕುಮಾರನ್ , ಕೆವಿಸ್ ಬಾಲಕೃಷ್ಣನ್ , ಸಿ. ಎಂ ಕುಞ ಬ್ದುಲ್ಲ , ಎ . ರಾಧಾಕೃಷ್ಣನ್ , ಸಿ ಪಿ ಫೈಝಲ್ ಮೊದಲಾದವರು ಉಪಸ್ಥಿತರಿದ್ದರು .
ಸುಮಾರು ೩೦ ಮೀಟರ್ ಉದ್ದದ ಮರಳಿನಲ್ಲಿ ಶಿಲ್ಪ ರಚಿಸಲಾಗಿದ್ದು, ಶಿಲ್ಪಿಗಳಾದ ರವಿ ಪಿಲಿಕ್ಕೋಡ್ , ಶ್ಯಾಮ್ ಶಶಿ , ಇ . ವಿ ಅಶೋಕನ್ ಸೇರಿದಂತೆ ಜಿಲ್ಲೆಯ ೬೦ ರಷ್ಟು ಮಂದಿ ನೇತೃತ್ವ ನೀಡಿದರು . ಕೇರಳ ಜಾನಪದ ಅಕಾಡಮಿ ವಜ್ರ ಮಹೋತ್ಸವ ಪುರಸ್ಕಾರ ಪಡೆದ ಕಲಾವಿದರಿಂದ ಜಾನಪದ ಹಾಡು . ಪಳ್ಳಿಕೆರೆ ಗುರು ವಾದ್ಯ ಸಂಘ ದಿಂದ ಶಿಂಗಾರಿ ಮೇಳ ನಡೆಯಿತು.