News Kannada
Tuesday, September 27 2022

ಕರ್ನಾಟಕ

ಸಂವಿಧಾನದ ಗೌರವಕ್ಕೆ ದಕ್ಕೆ: ದಲಿತ ಸಂಘಟನೆಗಳ ಆರೋಪ - 1 min read

Photo Credit :

ಸಂವಿಧಾನದ ಗೌರವಕ್ಕೆ ದಕ್ಕೆ: ದಲಿತ ಸಂಘಟನೆಗಳ ಆರೋಪ

ಮಡಿಕೇರಿ: ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನವನ್ನು ರಕ್ಷಣೆ ಮಾಡುವ  ನಿಟ್ಟಿನಲ್ಲಿ ಕೊಡಗು ಜಿಲ್ಲೆಯ ಎಲ್ಲಾ ದಲಿತ ಸಂಘಟನೆಗಳು ಹಾಗೂ ಭಾರತೀಯ ರಿಪಬ್ಲಿಕನ್ ಪಾರ್ಟಿ (ಆರ್‍ಪಿಐ)ಯ ವತಿಯಿಂದ ನ.25ರಂದು ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ)ಯ ಕೊಡಗು ಜಿಲ್ಲಾಧ್ಯಕ್ಷ ಕೆ.ಬಿ.ರಾಜು ಹಾಗೂ ಆರ್‍ಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ್ ಹೆಬ್ಬಾಲೆ ತಿಳಿಸಿದ್ದಾರೆ.

 ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರುಗಳು, ಅಂಬೇಡ್ಕರ್ ನಿರ್ಮಿಸಿದ ಸಂವಿಧಾನ ಭಾರತದ  ಪ್ರತಿಯೊಬ್ಬ ಪ್ರಜೆಗೂ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ಹಕ್ಕುಗಳನ್ನು ನೀಡಿದ್ದು, ಇದರ  ಪರಿಣಾಮವಾಗಿ ಇಂದು ಭಾರತದ ಶೇ.85ರಷ್ಟಿರುವ ಬಹುಜನರಾದ ಶೂದ್ರಾತಿಶೂದ್ರ ಜಾತಿಗಳಾದ ಒಬಿಸಿ, ಪರಿಶಿಷ್ಟ ಜಾತಿ-ಪಂಗಡ, ಧಾರ್ಮಿಕ ಅಲ್ಪಸಂಖ್ಯಾತರಾದಿಯಾಗಿ ಎಲ್ಲಾ ಭಾರತೀಯ ಪ್ರಜೆಗಳೂ ಹಕ್ಕುಗಳನ್ನು ಅನುಭವಿಸುತ್ತಿದ್ದಾರೆ. ಅಲ್ಲದೆ ಈ ಸಂವಿಧಾನ ಸ್ವಾತಂತ್ರ್ಯ, ಸಮಾನತೆ, ಸಹೋದರತೆಯನ್ನು ಎತ್ತಿ ಹಿಡಿದಿದೆ. ಇಂತಹ ಪ್ರಜಾಪ್ರಭುತ್ವತೆ ಹೊಂದಿರುವ ಸಂವಿಧಾನವನ್ನು ಬದಲಾವಣೆ ಮಾಡಲೇಬೇಕೆಂದು ಕೆಲವು ಕಿಡಿಗೇಡಿ ಮನುವಾದಿಗಳು ವಾದಿಸುತ್ತಿರುವುದು ವಿಪರ್ಯಾಸ ಎಂದು ಟೀಕಿಸಿದರು.

ಹಿಂದೆ ಇದ್ದ ಮನು ಸ್ಮøತಿಯು ಭಾತರದ ಮೂಲ ನಿವಾಸಿಗಳಾದ ಒಬಿಸಿ. ಪರಿಶಿಷ್ಟ ಜಾತಿ-ಪಂಗಡದವರನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಂಡು ಈ ವರ್ಗದ ಜನರಿಗೆ ವಿದ್ಯೆ, ಆಸ್ತಿ, ಅಧಿಕಾರವನ್ನು ನೀಡದೆ ವಂಚಿಸಿತ್ತು. ಆದರೆ ಭಾರತದ ಇತಿಹಾಸದ ಸಮಗ್ರ ಜ್ಞಾನ ಹೊಂದಿದ್ದ ಅಂಬೇಡ್ಕರ್ ಅವರು ಹಲವು ಸಂಕಷ್ಟಗಳ ನಡುವೆಯೂ ನಮ್ಮ ಎಲ್ಲಾ ಪೂರ್ವಿಕರ ಹೋರಾಟಗಳನ್ನು ಮನಗಂಡು ಎಲ್ಲಾ ಜಾತಿ, ಧರ್ಮಕ್ಕೂ ಸಮಾನತೆಯನ್ನು ಸಾರುವ ಸಂವಿಧಾನವನ್ನು 1950ರ ಜ.26ರಂದು ನೀಡಿದ್ದರು. ಆದರೆ ಈ ಸಂವಿಧಾನ ಸರಿಯಿಲ್ಲ. ಅಂಬೇಡ್ಕರ್ ಒಬ್ಬರೇ ಸಂವಿಧಾನವನ್ನು ರಚಿಸಿಲ್ಲ. ಬದಲಾಗಿ ದೇಶದಾದ್ಯಂತ ಇರುವ ವಿವಿಧ ಜಾತಿ, ಬುಡಕಟ್ಟಿಗೆ ಸೇರಿದ ಅನೇಕರು ಸೇರಿ ನಡೆಸಿದ ಸಾಮೂಹಿಕ ಪ್ರಯತ್ನದ ಫಲವಾಗಿ ಇದು ರಚನೆಯಾಗಿದೆ ಎಂದು ವಾದಿಸುವುದರೊಂದಿಗೆ ಪಠ್ಯಪುಸ್ತಕದಲ್ಲೂ ಇದನ್ನು ಮುದ್ರಿಸಿರುವುದು ಅಂಬೇಡ್ಕರ್ ಅವರಿಗೆ ಮಾಡುವ ಅಪಮಾನವಾಗಿದೆ ಎಂದು ಅವರುಗಳು ದೂರಿದರು.

ಕೆಲವು ಮನುವಾದಿಗಳಿಂದ ಇಂದು ದೇಶದ ಸಂವಿಧಾನವೇ ಅಪಾಯಕ್ಕೆ ಸಿಲುಕಿದ್ದು, ಇದನ್ನು ರಕ್ಷಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ದಲಿತ ಸಂಘಟನೆಗಳು, ಹಿಂದುಳಿದ ವರ್ಗಗಳು, ಪ್ರಗತಿಪರ ಸಂಘಟನೆಗಳು ಜಾಗೃತರಾಗಿ ನ.25ರಂದು ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲು ತೀರ್ಮಾನಿಸಿರುವುದಾಗಿ ತಿಳಿಸಿದ ಅವರುಗಳು. ಅಂದು ಪೂರ್ವಾಹ್ನ 10.30 ಗಂಟೆಗೆ ನಗರದ ಸುದರ್ಶನ ವೃತ್ತದಲ್ಲಿರುವ ಅಂಬೇಡ್ಕರ್ ಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.

 ಸುದ್ದಿಗೋಷ್ಠಿಯಲ್ಲಿ ಭಾರತೀಯ ರಿಪಬ್ಲಿಕನ್ ಪಾರ್ಟಿಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎಂ.ಡಿ.ಲತಾ ಮಾಲಂಬಿ, ಉಪಾಧ್ಯಕ್ಷೆ ಕೆ.ಜೆ.ಸಾವಿತ್ರಮ್ಮ,   ಡಿಎಸ್‍ಎಸ್ ಭೀಮವಾದದ ಅಮ್ಮತ್ತಿ ಘಟಕದ ಅಧ್ಯಕ್ಷೆ ಹೆಚ್.ವಿ.ಜಯಮ್ಮ, ಹಾಗೂ ಸೋಮವಾರಪೇಟೆ ತಾಲೂಕು ಅಧ್ಯಕ್ಷೆ ವೀಣಾ ಉಪಸ್ಥಿತರಿದ್ದರು.

See also  ಬಿಎಸ್ ವೈ ವಿರುದ್ಧ ಹೇಳಿಕೆ ನೀಡಿದ ಸಿಎಂಗೆ ಹೈಕೋರ್ಟ್ ನೋಟಿಸ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು